ರೆವೆರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ರ ಬಗ್ಗೆ ಒಂದೆರಡು ಮಾತುಗಳು

ರೆವೆರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ರ ಬಗ್ಗೆ ಒಂದೆರಡು ಮಾತುಗಳು

ಬರಹ

'ಇಂಟರ್ನೆಟ್' ಪುಟಗಳನ್ನು, ತಿರುಗಿಸಿ ನೋಡಿದಾಗ ಇನ್ನೂ ಚಿಕ್ಕ- ಚಿಕ್ಕ ಮಾಹಿತಿಗಳು ಸಿಕ್ಕವು. ಈ ಸಂದರ್ಭದಲ್ಲಿ ಅವು ಉಪಯುಕ್ತವಾಗಬಹುದೇನೋ.

ಧಾರ್ವಾಡ, ಹುಬ್ಬಳ್ಳಿಗಳಲ್ಲದೆ ಅವರು ಆನಂದಪುರಾ, ಮತ್ತು ಮಡಕೇರಿಯಲ್ಲಿ ತಮ್ಮ ಜೀವನದ ಸ್ವಲ್ಪ ಭಾಗವನ್ನು ಕಳೆದರು. 'ಮಡಕೇರಿ' ಅವರಿಗೆ ಬಹಳ ಖುಷಿಕೊಟ್ಟಿತು. ಅಲ್ಲಿನ ಹವ, ಅವರಿಗೆ ಬಹಳ ಚೆನ್ನಾಗಿ ಒಂಟಿತ್ತು.

ಸಾಮಾನ್ಯ ಜನರ ಭಾಷೆಯನ್ನು ಅರಿಯಲು ಅವರು ಹಳ್ಳಿ ಹಳ್ಳಿಗಳಿಗೆ ಹೋಗೀ ಮನೆಯ ಬಾಗಿಲು ತಟ್ಟಿ, ಜನರ ಸಂಪರ್ಕ ಮಾಡುತ್ತಿದ್ದರಂತೆ. ತಮ್ಮ ಜೇಬಿನಲ್ಲಿ ಲವಂಗ, ಮೆಣಸು, ಯಾಲಕ್ಕಿಯನ್ನು ತೆಗೆದುಕೊಂಡು ಹೋಗಲು ಎಂದೂ ಅವರು ಮರೆಯುತ್ತಿರಲಿಲ್ಲ !

ತಮ್ಮ ಹೆಂಡತಿಯ ತಂಗಿಯನ್ನು ಮದುವೆಯಾದರೂ, ಎರಡನೆಯ ಮದುವೆ ಅವಳ ಅಗಲಿಕೆಯಿಂದ ಕೊನೆಗೊಂಡಿತು. 'ವಿವಾಹಜೀವನ' ಅವರ ಪಾಲಿಗೆ ಹೆಚ್ಚಿನ ಸಮಾಧಾನ ನೀಡಲಿಲ್ಲ.

೧೯೦೩ ರ ಡಿಸೆಂಬರ್, ೧೮ ರಂದು ಅವರು ಇಂಗ್ಲೀಷ್ ನಲ್ಲಿ ಬರೆದ, 'ಕನ್ನಡ ವ್ಯಾಕರಣ' ಎಂಬ ಪುಸ್ತಕದ ಮೊದಲ ಪ್ರತಿ, ಅವರ ಕೈಸೇರಿತು. ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಅವರು ನಿತ್ರಾಣದಿಂದ ಪರಿತಪಿಸುತ್ತಿದ್ದರು. ಆ ಪ್ರತಿಯನ್ನು ಕಂಡು ಅವರ ಮುಖದಲ್ಲಿ 'ಮಂದಹಾಸ' ಕ್ಷಣಕಾಲ ಕಂಡಿತು. ಆದರೆ ಮರುದಿನ ಬೆಳಿಗ್ಯೆ ಅವರು ಇಲ್ಲವಾದರು ! ಆ ಪುಸ್ತಕ ಅವರ ಹಾಸಿಗೆಯ ಪಕ್ಕದಲ್ಲೇ ಬಿದ್ದಿತ್ತು; ನಗುತ್ತಿತ್ತು !

ಇನ್ನೊಂದು ವಿಷಯ. ಅವರ ಅಂತಿಮ ದಿನಗಳಲ್ಲಿ ಹಾಸಿಗೆ ಹಿಡಿದಿದ್ದ, ಅವರನ್ನು ನೋಡಲು ಬಂದ ಓರ್ವ ಕನ್ನಡಿಗನನ್ನು ನೋಡಿ, ಅವರಿಗೆ ಬಹಳ ಖುಷಿಯಾಯಿತು. ಅವರಿಗೆ ಜೀವ ಬಂದಷ್ಟು ಹಿಗ್ಗು ! ಆದರೆ ಬಂದಾತ, ಅವರೊಡನೆ 'ಇಂಗ್ಲೀಷಿ'ನಲ್ಲಿ ಮಾತು ಪ್ರಾರಂಭಿಸಿದ. ಬೇಸತ್ತ ಕಿಟ್ಟೆಲ್ಲರು, ಅವನನ್ನು "ದಯವಿಟ್ಟು ಕನ್ನಡದಲ್ಲಿ ಮಾತಾಡಿ" ಎಂದು ಒತ್ತಾಯ ಪಡಿಸಿದರಂತೆ !

ಕನ್ನಡದ ಮೇಲೆ ಅತ್ಯಂತ ಪ್ರೀತಿ ಇದ್ದಿದ್ದರಿಂದ ಅವರ ವೈಯಕ್ತಿಕ ಜೀವನದಲ್ಲಾದ ಕೊರತೆಗಳು -'ಮದುವೆ', ಇತ್ಯಾದಿ, ಅವರ ಮೇಲೆ ಯಾವ ಕೆಟ್ಟ ಪರಿಣಾಮವನ್ನೂ ಉಂಟುಮಾಡಲಿಲ್ಲ.

ವೆಂ.