ಒಲವ ಬೆಳಕು...

ಒಲವ ಬೆಳಕು...

ಾಳಿ ಬದುಕ ಬೇಕು ನಿನ್ನ ಒಲವಿನ ಬೆಳಕಿನಲ್ಲಿ.
ನೋವ ಮರೆಯಬೇಕು ನಿನ್ನ ವರ್ಣನೆಯ
ಕವಿತೆ ಸಾಲುಗಳಲ್ಲಿ. ಕಳೆದು ಹೋಗಬೇಕು
ನಿನ್ನ ಪ್ರೇಮದ ಮಡಿಲಲ್ಲಿ.

ಜೀವನದ ಜಾಡು ಹುಡುಕಿ ಹೊರಟಾಗ ನೀ
ಸಿಕ್ಕೆ ಒಲವ ಮರದಂತೆ. ಸಾಕೆಂದರೂ ಸೂಸುವೆ
ಪ್ರೀತಿಯ ನೆರಳ ಪ್ರೇಮಹೋಕನಿಗೆ.


ನಲ್ಮೆಯ ನಾಜೂಕಿನ ನನ್ನಾಕೆ ನೀ. ನಗಬಾರದೆ
ನನ್ನೊಮ್ಮೆ ನೋಡಿ. ನಾನಾಗುತ್ತಿದ್ದೇ ಆಗ ನಗುವಿ
ನಗಾರಿ.


ನಾ ಹೊರಟ ಕ್ಷಣ. ನಿನ್ನಲ್ಲಿತ್ತು ಅದೇನೋ ತಲ್ಲಣ.
ಹೇಳಬಾರದಿತ್ತೇ ಮರುಕ್ಷಣ. ನಾ ನಿನ್ನೊಂದಿಗ್ಗೇನೆ
ಸತ್ತು ಹೋಗುತ್ತಿದ್ದೇ ಅದೇ ದಿನ.

ಮರಳಿ
ಬಂದಾಗ ನೀ ನಿರಲಿಲ್ಲ. ಇತ್ತಲ್ಲಿ ನೀ ಬಿಟ್ಟು
ಹೋದ ನಿನ್ನೊಲವಿನ ಮರ.....ನಮ್ಮೊಲವಿನ ಮರ....


- ರೇವನ್ ಪಿ.ಜೇವೂರ್
Rating
No votes yet

Comments