ಮತ್ತೇನು ಮಾಡೋಣ ಹಾಗಾದ್ರೆ?

ಮತ್ತೇನು ಮಾಡೋಣ ಹಾಗಾದ್ರೆ?

ನವರಾತ್ರಿಯ ಪಾರಾಯಣದ ಊಟಕ್ಕೆ ಪಕ್ಕದ ಮನೆಯವರು ಕರೆದಿದ್ರು. ಆಗ ಅನೇಕ ವಿಚಾರಗಳು ಮಾತುಕತೆಯಲ್ಲಿ ಹರಿದುಬಂದವು.

 

ತೀರ್ಥಹಳ್ಳಿಯ ದಸರಾ ಈ ಸಾರಿ ಬಹಳ ಕಳೆಗುಂದಿದೆ ಎಂಬ ವ್ಯಥೆ ಎಲ್ಲರನ್ನು ಕಾಡಿತ್ತು. ಅತೀ ಕಡಿಮೆ ಪ್ರಮಾಣದಲ್ಲಿ ಜನರು ಪಾಲ್ಗೊಂಡಿದ್ದರು. ವೇಶಗಳು ಕಡಿಮೆ..ಹುಲಿವೇಷಗಳಂತೂ ಬಹಳ ವಿರಳವಾಗಿವೆ...’ಬನ್ನಿ’ಯನ್ನು ಪರಸ್ಪರ ಹಂಚಿಕೊಳ್ಳುತ್ತಾ ’ಪ್ರೀತಿ-ವಿಶ್ವಾಸವಿರಲಿ’ ಎಂದು ಚೂರು ಬನ್ನಿ ಎಲೆಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಹಿಂದೆ ಸಂಭ್ರಮದಲ್ಲಿ - ಗೆಲುವಿನಲ್ಲಿ ಕಾಣುತ್ತಿದ್ದುದು ಈಗ ಇಲ್ಲ...ಹೀಗೆ ಮಾತು ನಡೆದಿತ್ತು.

 

ನಂತರ ರಾಜಕಾರಣದ ಇಂದಿನ ಪರಿಸ್ಥಿಯ ಕುರಿತದ್ದು.

ಯಡಿಯೂರಪ್ಪ ಶಿವಮೋಗ್ಗದಲ್ಲಿ ವಿಪರೀತ ಕಟ್ಟಡಗಳನ್ನೂ, ಸೈಟ್ ಗಳನ್ನೂ ಮಾಡಿಕೊಳ್ಳುವುದರ ಕುರಿತದ್ದು, ಶಾಸಕರ ಕೋಟಿಗಟ್ಟಲೆ ಹಣ ವ್ಯವಹಾರದ ಕುರಿತದ್ದು.....ಈ ಮಾತುಕತೆಯಲ್ಲಿ ಇತ್ತೀಚಿನ ಎಲ್ಲ ರಾಜಕೀಯ ವಿಚಾರಗಳನ್ನೂ ಒಂದಾದಮೇಲೊಂದರಂತೆ ತಾವು ಓದಿ-ನೋಡಿ-ಕೇಳಿದ್ದನ್ನು ಉಲ್ಲೇಕಿಸಿ ಮಾತನಾಡುವುದು ಸಾಗಿತ್ತು.

 

ಕೊನೆಗೆ ಇದಕ್ಕೊಂದು ಅಂತ್ಯಕೊಡುವುದು ಅಗತ್ಯವಾಯಿತು.

 

ಹಾಗಾದರೆ ಹೇಗೆ ಈ ಅನೈತಿಕತೆಯನ್ನು ಕೊನೆಗಾಣಿಸುವುದು ಎಂಬುದಕ್ಕೆ ಒಬ್ಬರ ಅಭಿಪ್ರಾಯದಲ್ಲಿ ಹೊಸದೊಂದು ಹೋರಾಟ ಮಾಡಬೇಕೆಂಬುದಾಗಿತ್ತು.

ಹಾಗಾದರೆ ಆ ಹೋರಾಟದ ನಾಯಕ ನಮ್ಮ ನಡುವೆಯೇ ಒಬ್ಬನಾಗಿದ್ದ ಪಕ್ಷದಲ್ಲಿ ಆತನಿಗೆ ಯಡಿಯೂರಪ್ಪನೋ, ಬಳ್ಳಾರಿಯ ರೆಡ್ಡಿಯೋ, ಕುಮಾರಸ್ವಾಮಿಯೋ ಹತ್ತು ಲಕ್ಷ ನೀಡಲು ಮುಂದೆಬಂದು ಸುಮ್ಮನಿರಲು ಕೋರಿದರೆ ಏನಾಗಬಹುದೆಂಬ ಚರ್ಚೆ ಆಯಿತು.

 

ಆತ ಸ್ವಲ್ಪ ಹೊತ್ತು ಸುಮ್ಮನಿದ್ದು ಎಂದ. ನನ್ನ ಮಗಳು ಓದಲು ಹಣ ಬೇಕು. ನನ್ನ ಸಾಲ ಇತ್ಯಾದಿ ಹೊರೆ ನನ್ನ ಸಂಸಾರದ ನೆಮ್ಮದಿಯನ್ನು ಕಾಡುತ್ತಿರುವುದರಿಂದ ಅದನ್ನು ಪಡೆಯಲು ಮನಸ್ಸು ಮಾಡುವುದಾಗಿ ಹೇಳಿದಾಗ ಅದನ್ನು ಎಲ್ಲರೂ ಒಪ್ಪಿ ಸಮ್ಮಿತಿಸಿದ್ದರಿಂದ ಸಾಂಸಾರಿಕರ ಈ ನವರಾತ್ರಿಯ ಮಾತುಕತೆ ಮುರಿದುಬಿತ್ತು. ಅಂತೆಯೇ ರಾತ್ರಿಯ ಚರ್ಚೆಯೂ ಅಂತ್ಯಕಂಡಿತು. ಎಲ್ಲರೂ ಎಲೆ ಅಡಿಕೆ ತಿಂದು ಅವರವರ ಮನೆಗೆ ವಾಪಾಸಾದದ್ದಾಯಿತು.

 

 

 

 

Rating
No votes yet

Comments