ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ಸೌತೇಕಾಯಿ( ಮುಳ್ಳು ಸೌತೆ) ಕಡುಬು
ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ)
ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ( ೫ ಜನರಿರುವ ಸಂಸಾರಕ್ಕೆ)
ನಾಲ್ಕು ಈರುಳ್ಳೀ ( ಉದ್ದಕ್ಕೆ ಕೊಚ್ಚಿ) ನಾಲ್ಕು ಹಸಿಮೆಣ್ಸು( ಉದ್ದಕ್ಕೆ ಕೊಚ್ಚಿ) ರುಚಿಗೆ ತಕ್ಕಷ್ಟು ಉಪ್ಪು ಒಂದು ಚಮಚ ಬಿಸಿ ಬಿಸಿ ತುಪ್ಪ ಹಾಕಿ ಕಲಸಿಕೊಳ್ಳಿ.
ಒಂದು ತಟ್ಟೆ ಕಡಲೆ ಹಿಟ್ಟು( ಬೇಸನ್) ಮತ್ತು ನಾಲ್ಕೇ ಚಮಚ ನೀರು ( ಚಾ ಚಮಚ) ಅದಕ್ಕೆಸೇರಿಸಿ ಚೆನ್ನಾಗಿ ಕಲಸಿ.
ಸರಿಯಾಗಿ ಕಾದ ಎಣ್ಣೆಗೆ ಸ್ವಲ್ಪ ಸ್ವಲ್ಪವೇ ಬಿಡಿ ಬಿಡಿಯಾಗಿ ಬಿಡಿ, ಕಂದು ಬಣ್ಣಕ್ಕೆ ಬರುವಷ್ಟು ಕಾಸಿ ಹೊರ ತೆಗೆಯಿರಿ.
ಬಿಸಿ ಬಿಸಿಯಾಗಿ ತಿನ್ನಲು ಬಲು ರುಚಿ
ಇಲ್ಲಿ ಸ್ವಲ್ಪ ಕಾದ ಎಣ್ಣೇ ಅಥವಾ ತುಪ್ಪವನ್ನು ಹಿಟ್ಟಿಗೆ ಸೇರಿಸುವುದರಿಂದ ಈ ಈರುಳ್ಳಿ ಬಜೆ ತುಂಬಾ ಪರಿಮಳವಾಗಿ ಗರಿ ಗರಿಯಾಗಿಯೂ ಇರುತ್ತದೆ. ಮತ್ತು ಬಿಡಿ ಬಿಡಿಯಾಗಿ ಎಣ್ಣೆಯಲ್ಲಿ ಬಿಡುವುದರಿಂದ ಈರುಳ್ಳಿ ಉದ್ದಕ್ಕೆ ಹೆಚ್ಚಿದ ಗಾತ್ರವೂ ( ಆಕಾರ) ಹಾಗೆಯೇ ಉಳಿದು ಗರಿಗರಿಯಾಗಿ ಇರಲು ಸಹಕಾರಿ.
ಸೌತೇಕಾಯಿ( ಮುಳ್ಳು ಸೌತೆ) ಕಡುಬು
ನಾಲ್ಕು ಚಿಗುರು ಮುಳ್ಳು ಸೌತೆಕಾಯಿ, ಒಂದೂವರೆ ಗ್ಲಾಸ್ (೬೦೦ ಮಿ ಲಿ) ಬೆಳ್ತಿಗೆ ಅಕ್ಕಿ ಹುಡಿ ( ಬೆಳ್ತಿಗೆ ಅಕ್ಕಿಯನ್ನು ನೀರಿನಲ್ಲಿ ತೊಳೆದು ಸರಿಯಾಗಿ ಒಣಗಿಸಿ ಅದನ್ನು ಎಣ್ಣೆ ಹಾಕದೇ ಪರಿಮಳ ಬರಿವಷ್ಟು ಹುರಿದು ರವೆಯ ಹದಕ್ಕೆ ಹುಡಿಮಾಡಿಟ್ಟುಕೊಳ್ಳಬೇಕು.
ಸೌತೆ ಕಾಯಿಯನ್ನು ತುರಿಮಣೆಯಲ್ಲಿ ತುರಿದು ಒಂದು ತಟ್ಟೆ ಹಸೀ ತೆಂಗಿನ ಕಾಯಿಯನ್ನು ಹೆರೆದು( ತುರಿದು) ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲಾ ವಸ್ತುಗಳನ್ನೂ ಸೇರಿಸಿ ಕಲಸಿ ಅರಶಿನದೆಲೆ ಅಥವಾ ಬಾಳೆಯೆಲೆಯಲ್ಲಿ ಇಟ್ಟು ಮಡಿಸಿ ಇಡ್ಲಿ ಕುಕರ್ ( ಅಥವಾ ಅಟ್ಟ) ದಲ್ಲಿ ಮುಕ್ಕಾಲು ಗಂಟೆ ಬೇಯಿಸಿದರೆ ನಿಮ್ಮ ಬಿಸಿ ಬಿಸಿ ಸೌತೇ ಕಾಯಿ ಕಡುಬು ರೆಡಿ. ಹಿಟ್ಟು ಆದಷ್ಟು ನೀರೂರುವಂತೆಯೇ ಇರಲಿ, ಜಾಸ್ತಿ ಗಟ್ಟಿಯಾದರೆ ಕಡಬೂ ತುಂಬಾನೇ ಗಟ್ಟಿಯಾಗಿರುತ್ತದೆ. ( ಬೇಯದಿದ್ದರೆ ಸ್ವಲ್ಪ ನೀರು ಹನಿಸಿ ಪುನಹ ಬೇಯಿಸಿ)
ತೆಂಗಿನಕಾಯಿ + ಈರುಳ್ಳಿ ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ತಿನ್ನಲು ಬಲು ರುಚಿ
ಎರಡೂ ತಿಂಡಿಗಳೂ ದಿಢೀರ್ ಮಾಡಲು ಯೋಗ್ಯ.
ಇವತ್ತಿನ ಸಲಹೆ:
ರವೆಯನ್ನು ಹುರಿದು ಬಾಟಲಿಯಲ್ಲಿ ಹಾಕಿ ಇಟ್ಟರೆ ಹುಳು ತಗಲದೇ ಜಾಸ್ತಿ ಸಮಯ ಇಡಬಹುದು, ಮತ್ತು ಉಪ್ಪಿಟ್ಟು , ಪಾಯಸ, ಇಡ್ಲಿ ದಿಢೀರ್ ಮಾಡ ಬೇಕಾದರೆ ಸಹಾಯವಾಗುವುದು.
Comments
ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ...
In reply to ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ... by prasannasp
ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ...
In reply to ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ... by ragosha
ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ...
ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ...
In reply to ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ... by Tejaswi_ac
ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ...
ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ...
In reply to ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ... by sunilkgb
ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ...
ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ...
In reply to ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ... by komal kumar1231
ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ...
ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ...
In reply to ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ... by gopinatha
ಉ: ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ...