ನೀವ್ ಏನ್ ಹೇಳ್ತೀರ ? .. ವಾರಕ್ಕೆ ಮೂರೇ ದಿನ??

ನೀವ್ ಏನ್ ಹೇಳ್ತೀರ ? .. ವಾರಕ್ಕೆ ಮೂರೇ ದಿನ??

 ಬಾನುವಾರ ಮೋಹನನ ಮನೆಗೆ ಹೋಗಿದ್ದೆ. ಹಾಲಿನಲ್ಲಿ ಒಬ್ಬನೆ ಕುಳಿತಿದ್ದ ಸಪ್ಪೆ ಸಪ್ಪೆಯಾಗಿ, ಬಾ ಅಂದ. ಏಕೆ ಸಪ್ಪಗಿದ್ದಿ? ಅಂತ ಕೇಳಿದರೆ ಏನಿಲ್ಲ ಅಂದ. ಸ್ವಲ್ಪ ಕಾಲ ಕುಳಿತೆ. ಒಳಗಿನಿಂದ ಕಾಫಿ ಬಂತು. ಇನ್ನು ಇವನ ಮೌನವೆ! , ಏಕೋ ನಾನು ಬಂದಿದ್ದು ಸರಿಹೋಗಲಿಲ್ಲ. ನೇರವಾಗಿ ಕೇಳೀದೆ "ಏನಪ್ಪ ನಾನು ಬಂದಿದ್ದು ತೊಂದರೆಯಾದ ಹಾಗಿದೆ ಎಲ್ಲಾದರು ಹೊರಟಿದ್ದ?"ಅಂತ. ಅದಕ್ಕವನು"ಛೇ ಹಾಗೇನು ಇಲ್ಲ , ಕಾಫಿ ಕುಡಿ" ಅಂದವನು ಅವನು ಕಾಫಿ ಕೈಗೆತ್ತಿಕೊಂಡ.


"ಏಕೊ ಈ ಆಫೀಸ್ಗೆ ದಿನಾ ಹೋಗೋದೆ ಬೇಸರ ಬಂದಿದೆ, ಬಾನುವಾರ ಮುಗೀತು ನಾಳೆಯಿಂದ ಪುನಃ ಶುರು" ಅಂದ. ನನಗೂ ಹಾಗೆಯೆ ಸೋಮವಾರ ಬಂದರೆ ಎನೋ ಬೇಸರ. ಆದರೂ ಏನು ಮಾಡುವಂತಿಲ್ಲ. "ಕತ್ತೆಗೆ ಹಾಳು ಗೋಡೆಯನ್ನುಳಿದು ಏನು ತಿಳಿಯದು, ನಮಗೂ ಹಾಗೆ ಈ ಆಫೀಸ್ ಬಿಟ್ಟರೆ ಇನ್ನೆಲ್ಲು ಹೋಗಲು ತಿಳಿಯದು" ಅಂತೆಲ್ಲ ಯೋಚಿಸುತ್ತಿದ್ದೆ.


"ವಾರಕ್ಕೆ ಏಳುದಿವಸಗಳೇಕೆ" ಇದ್ದಕಿದ್ದಂತೆ ಪ್ರಶ್ನಿಸಿದ. ಇದೆಂತ ಮೂಲಭೂತ ಪ್ರಶ್ನೆ, ಏಳುದಿನ ಇರುವದರಿಂದಲೆ ಅದು ವಾರವಲ್ಲವೆ ಅನ್ನುವಾಗ್ಗೆ ಮತ್ತೆ ಕೇಳೀದ



"ವಾರಕ್ಕೆ ಮೂರುದಿನ ಮಾತ್ರವಿದ್ದರೆ ಸಾಲದೇ ?" ಅವನ ಪ್ರಶ್ನೆ, ಮುಂದುವರೆಸಿದ "ಬಾನುವಾರ ಸೋಮವಾರ ಶನಿವಾರ ಪುನಃ ಬಾನುವಾರ ಸೋಮವಾರ ... ಹೀಗೆ" ಅಂದ.



ಅದ್ಬುತ ಯೋಚನೆ !! ಸೋಮವಾರ ಆಗಿತ್ತಿದ್ದಂತೆ ಮರುದಿನವೆ ಶನಿವಾರ ಬಂದುಬಿಡುತ್ತೆ , ಅದರಲ್ಲು ವಾರಕ್ಕೆ ಎರಡು ದಿನ ರಜಾ ಇರುವವರಿಗಂತೂ ಇನ್ನೂ ಸಂಭ್ರಮ!!


"ಆದರೆ ತಿಂಗಳಿಗೊಮ್ಮೆ ಸಂಬಳ ಕೊಡುವ ಆಫೀಸ್ ಇದಕ್ಕೆ ಒಪ್ಪಲಾರದು, ನಾಲಕ್ಕು ವಾರಕ್ಕೆ ಸಂಬಳ ಕೊಡಬೇಕಲ್ಲ" ಅಂತ 'objection' ಹಾಕಿದೆ.


"ಅದೇನು ತೊಂದರೆಯಿಲ್ಲ , ಹತ್ತು ವಾರಕ್ಕೆ ಒಂದು ತಿಂಗಳು ಮಾಡಿದರಾಯಿತು ಮೂವತ್ತು ದಿನವಾಗುತ್ತೆ " ಅಂದ ನಿರ್ಲಕ್ಷದ ದ್ವನಿಯಲ್ಲಿ.


ಆಯಿತಲ್ಲ ತೊಂದರೆಯೆ ಇಲ್ಲ ಆದರೆ ಇದಕ್ಕೆ ಯಾರಿಗೆ ಬರೆಯಬೇಕೊ? ತಿಳಿಯಲಿಲ್ಲ. ಬಹುಷಃ ಯಾರಾದರು ಮಠದ ಸ್ವಾಮಿಗಳನ್ನು ಹಿಡಿದು ಮುಖ್ಯಮಂತ್ರಿಗಳಿಗೆ ಹೇಳಿಸಿ ಮೇಲಿಂದ ಶ್ರೀರಾಮುಲುರವರಿಂದ ಒತ್ತಡ ತಂದರೆ ಈ ಕೆಲಸ ಆಗಬಹುದು ಅನ್ನಿಸಿತು. ನೀವ್ ಏನ್ ಹೇಳ್ತೀರಾ??


 


 


 


 


 


 

Rating
No votes yet

Comments