ಲಿನಕ್ಸಾಯಣ - ಲಂಡನ್ ಸ್ಟಾಕ್ ಎಕ್ಸ್ಚೇಂಜ್ ನ ವೇಗವರ್ದಕ - ಗ್ನು/ಲಿನಕ್ಸ್

Submitted by omshivaprakash on Sun, 10/31/2010 - 00:48

ಲಂಡನ್ ಸ್ಟಾಕ್ ಎಕ್ಸ್ಚೇಂಜ್ (LSE) ಇತ್ತೀಚಿಗೆ ತನ್ನೆಲ್ಲ ವಹಿವಾಟುಗಳನ್ನು ಗ್ನು/ಲಿನಕ್ಸ್ ಸಂಭಂದಿತ ತಂತ್ರಾಂಶಗಳ ಮೇಲೆ ನೆಡೆಸುತ್ತಿರುವುದಾಗ ಹೇಳಿಕೆ ನೀಡಿತ್ತು. ಇದನ್ನು ಯಶಸ್ವಿಯಾಗಿ ಮುನ್ನೆಡೆಸಲು ಹಾಕಿಕೊಂಡಿರುವ ಎಲ್ಲ ಯೋಜನೆಗಳು ಅಂದುಕೊಂಡಂತೆ ನೆಡೆದರೆ ವಿಶ್ವದಲ್ಲೇ ಅತಿವೇಗದ ಶೇರುಮಾರುಕಟ್ಟೆಯನ್ನು ತನ್ನ ತೆಕ್ಕೆಯಲ್ಲಿ ಹುದುಗಿಸಿಕೊಂಡ ಖ್ಯಾತಿ ಗ್ನು/ಲಿನಕ್ಸ್ ಗೆ ಸಿಗಲಿದೆ. LSE ತನ್ನ ಪರೀಕ್ಷಾತ್ಮಕ ಪಲಿತಾಂಶಗಳ ಮೇರೆಗೆ ಮುಂದೆ ತನ್ನೆಲ್ಲ ತಂತ್ರಜ್ಞಾನಗಳೂ ಗ್ನು/ಲಿನಕ್ಸ್ ಆಧಾರಿತ ತಂತ್ರಾಂಶಗಳ ಮೇಲೆ ನೆಡೆಯುವಂತೆ ಮಾಡುವುದಾಗಿ ತಿಳಿಸಿದೆ. ಮೈಕ್ರೋಸಾಪ್ಟ್ ಡಾಟ್ನೆಟ್ ಮೇಲೆ ಇದುವರೆಗೂ ತನ್ನ ವಹಿವಾಟುಗಳನ್ನು ನೆಡೆಸಿಕೊಂಡು ಬಂದಿದ್ದ LSE, ನವೆಂಬರ್ ೧ಕ್ಕೆ ಹೊಸ ಗ್ನು/ಲಿನಕ್ಸ್ ತಂತ್ರಾಂಶವನ್ನು ಪೂರ್ಣಪ್ರಮಾಣದಲ್ಲಿ ಶೇರುಪೇಟೆಯಲ್ಲಿ ಬಳಸಲಿದೆ. ಇತ್ತೀಚಿನ ಪರೀಕ್ಷಾ ಪಲಿತಾಂಶಗಳು, ಗ್ನು/ಲಿನಕ್ಸ್ ಸರ್ವರ್ ಗಳು ಸುದೃಡವಾಗಿ ಕೆಲಸಮಾಡಲಿಕ್ಕೆ ಶಕ್ತವಿವೆ ಎಂಬ ಉತ್ತರ ನೀಡಿವೆ. ಇದೇ ಪಲಿತಾಂಶಗಳಲ್ಲಿ ತೊಂದರೆ ಏನಾದರೂ ಕಂಡು ಬಂದಿದ್ದರೆ ಅದು ಕೇವಲ ಬಳಕೆದಾರರ ತಂತ್ರಾಂಶಕ್ಕೆ ಸಂಭಂದ ಪಟ್ಟ, ವಹಿವಾಟಿಗೆ ಎಂತಹುದೇ ತೊಂದೆರೆಯನ್ನೆಸಗದ ಸಾಮಾನ್ಯ ತೊಂದರೆಗಳಾಗಿವೆ ಎಂದು ತಿಳಿಸಲಾಗಿದೆ.

 

ಎಲ್.ಎಸ್.ಇ ನ ದಾಖಲೆ ೧೨೬ ಮೈಕ್ರೊಸೆಕೆಂಡುಗಳ  ಶೇರುವಹಿವಾಟು ವಿಳಂಬ Turquoise Trading Platform ನಲ್ಲಿ ಸಾಧಿಸಲಾಗಿದೆ. ಇದು LSE ನ ಅನಾಮದೇಯ ಶೇರುವಹಿವಾಟು ಸ್ಥಳವಾಗಿದ್ದು, ಇದರ ಸಣ್ಣದೊಂದು ನೆಟ್ವರ್ಕ್ ಅನ್ನು ಎರಡು ವಾರಗಳ ಹಿಂದೆಯೇ ಲಿನಕ್ಸ್ ಗೆ ಬದಲಿಸಲಾಗಿತ್ತು.

 

ಲಿನಕ್ಸ್ ಗೆ ತನ್ನ ವಹಿವಾಟನ್ನು ಹಸ್ತಾಂತರಿಸುವ ಮೊದಲು ತನ್ನ ವ್ಯವಹಾರದ ವೇಗ ಮತ್ತು ವಿಶ್ವಾಸಾರ್ಹತೆಯ ಬಗ್ಗೆ LSE ಬೇಸರವನ್ನು ವ್ಯಕ್ತಪಡಿಸಿತ್ತು. ಶೇರುವಹಿವಾಟಿನ ವಿಳಂಬ ನೂರಾರು ಮೈಕ್ರೊಸೆಕೆಂಡುಗಳನ್ನು ದಾಟಿ ವಿಷಮ ಸ್ಥಿತಿ ತಲುಪುತ್ತಿದ್ದದ್ದೂ ಇದೆ. ಸ್ವಯಂಚಾಲಿತ ಶೇರುವಹಿವಾಟು ನಿರ್ವಹಣೆಯ ತೀವ್ರಗತಿಯ ಬೆಳವಣಿಗೆಯಿಂದ ಶೇರು ಮಾರುಕಟ್ಟೆಗಳಲ್ಲಿ ವಹಿವಾಟಿನ ವಿಳಂಬ ತೀವ್ರವಾದ ಒತ್ತಡವನ್ನು ಮಾರುಕಟ್ಟೆಯ ಮೇಲೆ ಹೇರುತ್ತವೆ. ಪಾರಂಪರಿಕ ಶೇರು ವಹಿವಾಟಿನಲ್ಲೂ ೩೦೦ ರಿಂದ ೪೦೦ ಮೈಕ್ರೊಸೆಕೆಂಡುಗಳಷ್ಟು ವಿಳಂಬ ತಡವಾದದ್ದೆಂದೇ ಭಾವಿಸಲಾಗುತ್ತದೆ. LSE ನ ಎದುರಾಳಿ BATS Europe ಮತ್ತು Chi-X ನ ವಹಿವಾಟಿನ ವಿಳಂಬ ೩೫೦ ಮತ್ತು ೧೭೫ ಮೈಕ್ರೋ ಸೆಕೆಂಡುಗಳಷ್ಟಿದೆ.

Rating
No votes yet