ಗುಬ್ಬಚ್ಚಿ
ನಮ್ಗೆಲ್ಲಿರಿಗೂ ಗೊತ್ತಿರುವ ಹಾಗೆ ಮುದ್ದು ಮುದ್ದಾಗಿ ಕಾಣುವ ಈ ಪಕ್ಷಿಯನ್ನು ನೋಡ ಸಿಗುವುದೇ ಈಗ ಅಪರೂಪವಾಗಿದೆ. ಅದರ "ನೆನೆಪನ್ನು ಹಸಿರಾಗಿಸಲು" ಈ ಕವನ:-
ನಿನ್ನ ಸ್ವಚ್ಚಂದ ಹಾರಾಟ
ಅಚ್ಚಳಿಯದೆ ಉಳಿದಿದೆ ಮನದಲ್ಲಿ
ಎತ್ತ ಹೋದೆ ನೀನು
ನೆನಪಿನಂಗಳದಿಂದ ಹಾರುತ
ಚುಚ್ಚಿತೆ ನಿನಗೀ ಕಿವಿಗಿಚ್ಚಿಡುವ ಶಬ್ದ
ಉಸಿರುಗಟ್ಟಿತೆ ಹಾಳು ಹೊಗೆಯಿಂದ
ಸ್ವಾರ್ಥಿಗಳಾದವೆ ನಾವು ಕಾಳುಗಳಾಕದೆ
ಅಗಾಗ ಕಾಣುವೆ ನೀನು ಗುಡ್ಡ-ಬೆಟ್ಟಗಳ ಮೇಲೆ
ನನ್ನ ನೆನಪ ಹಸಿರಾಗಿಸಲು
ನೀ ಎನ್ನ ಬಾಲ್ಯದ ಸಂಕೇತ
ದೂರ ಹೋದೆಯ ಹಾರುತ
ಮರಳಿ ಬಾ ಚಿಂವಗುಡುತ
ಮುಗ್ಧವಾಗಿಸು ಮನವ, ಮುದವ ನೀಡುತ
- ಜೈ ಕರ್ನಾಟಕ
Rating