ಬೇಜವಾಬ್ದಾರಿಯು ಅಧಿಕಾರಹೀನರದ್ದೇ ಹಕ್ಕೇನಲ್ಲವಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೭
(೨೯೧) ಬೃಹತ್ ವಾದವೊಂದು ಕನಿಷ್ಠ ಅವಕಾಶದಲ್ಲಿ ನೆಲೆ ನಿಂತಿರುವುದನ್ನು ’ಹೇಳಿಕೆ’ ಎನ್ನುತ್ತೇವೆ.
(೨೯೨) ನಾನು ಸುಳ್ಳನೆಂದು ನೀವು ನಿರೂಪಿಸಬಲ್ಲಿರ? ಹಾಗಿದ್ದಲ್ಲಿ ನಾವಿಬ್ಬರೂ ಎರಡು ವೈರುಧ್ಯಮಯ ಜಗತ್ತಿನಲ್ಲಿ ಬದುಕುತ್ತಿದ್ದೇವೆಂದು ’ನಾನು’ ಎಂಬುದು ನಿರೂಪಿಸಿಬಿಡಬಲ್ಲದು.
(೨೯೩) ಪ್ರಯಾಣವೆಂಬುದು ’ಆ’ ಸ್ಥಳದಿಂದ "ಈ" ಸ್ಥಳಕ್ಕೆ ಚಲಿಸುವುದಲ್ಲ. ಏಕೆಂದರೆ ಬೀಜಗಣಿತವು ಹುಟ್ಟುವ ಮುನ್ನವೂ ಜನ ಪ್ರಯಾಣ ಮಾಡುತ್ತಿದ್ದರು!
(೨೯೪) ಅಧಿಕಾರದೊಂದಿಗೆ ಜವಾಬ್ದಾರಿ ಜೊತೆಗೂಡುತ್ತದೆಂಬುದು ದಿಟ. ಆದರೆ ಬೇಜವಾಬ್ದಾರಿ ಎಂಬುದು ಅಧಿಕಾರಹೀನರದ್ದೇ ಹಕ್ಕೇನಲ್ಲವಲ್ಲ!
(೨೯೫) ಒಬ್ಬಾತ ಮಹಾನ್ ಆರ್ಥಿಕತಜ್ಞನಾಗಿದ್ದರೂ ಸಹ ಬದುಕಿನ ಸರಳ ’ಮೌಲ್ಯ’ಗಳನ್ನು ಸರಿಯಾಗಿ ಲೆಕ್ಕ ಹಾಕಲಾಗದೇ ಸೋತುಬಿಡಬಲ್ಲ!
Rating