ಅರುಂಧತಿ ರಾಯ್ ಹೇಳಿದ್ದು ಸರಿ
ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಅರುಂಧತಿ ರಾಯ್ ಹೇಳಿದ್ದು ಸರಿಯಾಗಿದೆ. ಪರದೇಶದ ಓರ್ವ (ಪ್ರಥಮ)ಪ್ರಜೆ ಭಾರತಕ್ಕೆ ಬಂದನೆಂದರೆ, ಆಗ ಭಾರತದಲ್ಲಿ ಆತ ಬಂದಿಳಿದು ಹರಿದಾಡುವ ಜಾಗಗಳಲ್ಲಿ ಪ್ರಜೆಗಳಿಗೆ ಬೀಡಾಡಿ ನಾಯಿಗಳಿಗಿರುವ ಸ್ವಾತಂತ್ರ್ಯವೂ ಇರುವುದಿಲ್ಲ.
* ೨೩ ನಿಮಿಷ ಕಾಲ ವಿಮಾನ ನಿಲ್ದಾಣವನ್ನು ಪ್ರಯಾಣಿಕರೂ ಸೇರಿದಂತೆ ಸಾರ್ವಜನಿಕರಿಗೆ ಬಂದ್ ಮಾಡಲಾಗುತ್ತದೆ.
* ರಸ್ತೆಗಳಲ್ಲಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಲಾಗುತ್ತದೆ.
* ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿಗಳ ಉಪಸ್ಥಿತಿಗಳನ್ನು ನಿರ್ಬಂಧಿಸಲಾಗುತ್ತದೆ.
* ಆತನ ಭದ್ರತಾಧಿಕಾರಿಗಳ ಮತ್ತು ಭಾರತದ ಪೋಲೀಸರ ಕೆಂಗಣ್ಣುಗಳು ಸುತ್ತಲೂ ಮನೆಮಾರುಗೂಡುಗಳೊಳಗಿರುವ ಪ್ರಜೆಗಳಮೇಲೆಲ್ಲ ಬಿದ್ದಿರುತ್ತದೆ.
* ರಸ್ತೆಯಲ್ಲಿ ಹೋಗುತ್ತಿರುವ ಆತನಿಗೆ ತಮ್ಮ ತಿಕ ತೋರಿಸಿಯಾದರೂ ಸರಿ, ಈ ಅಧಿಕಾರಿಗಳು ಮತ್ತು ಪೋಲೀಸರು ಪ್ರಜೆಗಳಮೇಲೆ ಹದ್ದಿನ ಕಣ್ಣಿಟ್ಟಿರುತ್ತಾರೆ.
* ಆತ ಸಂಚರಿಸುವ ಪ್ರದೇಶಗಳ ಸುತ್ತಮುತ್ತೆಲ್ಲ ಅಘೋಷಿತ ಕರ್ಫ್ಯೂ ಜಾರಿಯಲ್ಲಿರುತ್ತದೆ.
* ಬೃಹತ್ ಕಟ್ಟಡಗಳ ಮೇಲೆ ಬಂದೂಕು ಹಿಡಿದ ಗುರಿಕಾರರು ಪ್ರಜೆಗಳ ಎದೆಗೆ ಭಯದ ಬಾಂಬ್ ಹಾಕುತ್ತಿರುತ್ತಾರೆ.
* ಭದ್ರತಾ ಪಡೆ, ಪೋಲೀಸ್ ಪಡೆ, ಅರೆಸೇನಾಪಡೆ, ಎನ್‌ಎಸ್‌ಜಿ ಕಮಾಂಡೊ ಪಡೆ ಮೊದಲಾದ ಯಮದೂತರೆಲ್ಲ ಸೇರಿ ಪ್ರಜೆಗಳ ಬಾಳನ್ನು ನರಕ ಮಾಡಿಡುತ್ತಾರೆ.
* ಆ ಪರದೇಸಿಯ ಭಾಷಣ ಆಲಿಸಿ ಅನಂತರ ಆತನ ಸಾಮೀಪ್ಯ ಬಯಸುವ ಗಣ್ಯರನ್ನೂ ಕೂಡ ಮುಲಾಜಿಲ್ಲದೆ ದೂರ ಇಡಲಾಗುತ್ತದೆ.
* ಸುದ್ದಿಮಾಧ್ಯಮಗಳಲ್ಲಿ ಆತನ ಸುದ್ದಿಯು ದೇಶದ ಪ್ರಜೆಗಳ ಸುದ್ದಿಗಳನ್ನು ಬದಿಗೊತ್ತಿ ವಿಜೃಂಭಿಸುತ್ತದೆ.
* ಅರುಂಧತಿ ರಾಯ್ ಭಾರತವನ್ನು ಬಿಟ್ಟು ತೊಲಗುವುದೊಳ್ಳೆಯದು.
* ಪಾಕಿಸ್ಥಾನದಲ್ಲಿ ಆಕೆಗೆ ಪ್ರಜಾಪ್ರಭುತ್ವ ಗೋಚರಿಸಬಹುದೇನೋ. ಹೋಗಿ ನೋಡಲಿ.