ಮೂಢ ಉವಾಚ -38

ಮೂಢ ಉವಾಚ -38

                              ಮೂಢ ಉವಾಚ -38


ಭಯದ ಮಹಿಮೆಯನರಿಯದವರಾರಿಹರು?
ಭಯವಿಲ್ಲದಾ ಜೀವಿಯದಾವದಿರಬಹುದು?
ನಿಶಾಭಯ ಏಕಾಂತಭಯ ಅಭದ್ರತೆಯ ಭಯ|
ಭಯದಿಂದ ಮೂಡಿಹನೆ ಭಗವಂತ ಮೂಢ?||

ಭೋಗಿಯಾದವಗೆ ರೋಗಿಯಾಗುವ ಭಯ|
ರೋಗಿಯಾದವಗೆ ಸಾವು ಬಂದೆರಗುವ ಭಯ||
ಅಭಿಮಾನಧನನಿಗೆ ಮಾನಹಾನಿಯ ಭಯ|
ಭಯದ ಕಲ್ಪನೆಯೇ ಭಯಾನಕವು ಮೂಢ||

******************

-ಕವಿನಾಗರಾಜ್.

 

 
Rating
No votes yet

Comments