ಒಡೆಯರ ನುಡಿಮುತ್ತುಗಳು

ಒಡೆಯರ ನುಡಿಮುತ್ತುಗಳು

ಬರಹ

ಒಡೆಯರ ನುಡಿಮುತ್ತುಗಳು

೧. "ವೈವಿಧ್ಯತೆಯೇ ಪ್ರಾಚಿನ ಭಾರತದ ವೈಶಿಷ್ಟ್ಯ. ವಿವಿಧ ವರ್ಣ, ವಿವಿಧ ರಾಗ, ನಾನಾ ಜನ, ನಾನಾ ಮತ, ನಾನಾ ಶಿಲ್ಪ, ಈ ವೈವಿಧ್ಯ ಪೋಷಣೆಯ ಜೊತೆಗೆ ಐಕ್ಯತೆಯನ್ನೂ ಧೃಢ ಪಡಿಸಬೇಕು ಇಲ್ಲದಿದ್ದರೆ ನಾವು ಗಳಿಸಿದ ಸ್ವಾತಂತ್ರ್ಯ ವೆಂಬ ಆಸ್ತಿ ಕರಗಿ ಹೋದೀತು".
೨. "ಭಾರತೀಯ ಸಂಗೀತದಲ್ಲಿ ಆಧ್ಯಾತ್ಮದ ಅಂಶ ಹೆಚ್ಚು. ಪಾಶ್ಚಾತ್ಯ ಸಂಗೀತದಲ್ಲಿ ಸ್ವರ ಸಮ್ಮೇಳನ ಹೆಚ್ಚು".
೩. "ನಾವೆಲ್ಲರೂ ವಿಶ್ವಾತ್ಮನಾದ ಪರಮಾತ್ಮನ ಅಂಶಗಳು. ಈ ಒಂದು ಅರಿವೇ ನನ್ನನ್ನು ಸದಾ ಕಾಪಾಡುತ್ತಿರುವ ಹಿರಿಯ ಶಕ್ತಿ. ಪ್ರಜಾಪ್ರಭುತ್ವ ಎಂಬುದು ಈ ವಿಶಾಲ ತತ್ವದ ವ್ಯಾವಹಾರಿಕ ಅನ್ವಯ".
೪. "ನಾನು ಗೀತಾ ಭಕ್ತ. ಕೃಷ್ಣ ಭಕ್ತ. ಕೃಷ್ಣನ ದೀರ್ಘ ವಂಶದಲ್ಲಿ ನನ್ನ ಮನೆತನಕ್ಕು ಒಂದು ಸ್ಥಾನ".
೫. "ಕನ್ನಡ ನಾಡಿನ ಸಿಂಹಾಸನವನ್ನು ನಾನು ತ್ಯಾಗ ಮಾಡಿ, ಅದನ್ನು ನಾನು ನನ್ನ ಪ್ರೀತಿಯ ಜನರ ಹೃದಯಕ್ಕೆ ವರ್ಗಾಯಿಸಿದ್ದೇನೆ. ಅದನ್ನು ಕಾಪಾಡಿಕೊಂಡು ಬರುವ ಹೋಣೆ ನಿಮ್ಮದು"
೬. "ನಮ್ಮಲ್ಲಿ ವಿದ್ಯಾಭ್ಯಾಸ ವಿಸ್ತಾರವಾಗಿ ಹಬ್ಬುತ್ತಿದೆ, ಆದರೆ ಅಷ್ಟೇ ಆಳವಾಗಿ ಬೇರು ಬಿಡುತ್ತಿಲ್ಲ".
೭. "ದುಷ್ಟರು ಅಷ್ಟರಿಂದಲೇ ಸಂತುಷ್ಟರಾಗಲಿ" ಇದು ಒಡೆಯರ ವ್ಯಕ್ತಿತ್ವಕ್ಕೆ ಹಿಡಿದಿರುವ ಕೈಗನ್ನಡಿ.

(ಸನಾತನ ವಂಶದ ಸಾಧಕರು - ಎಚ್ಚೆಸ್ಕೆ - ಪುಟ ೩ ರಿಂದ ೧೨) ಹಾಗು (ಕರ್ನಾಟಕ ಸಂಗೀತಕ್ಕೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಕೊಡುಗೆ - ಡಾ. ಸುಕನ್ಯಾ ಪ್ರಭಾಕರ್)

"ಜಯಚಾಮರಾಜ ಭೂಪ, ಮನೆ ಮನೆಗೂ ದೀಪ"