ಮಾತುಪಲ್ಲಟ - ೧೩
♫♫♫ಮಾತುಪಲ್ಲಟ - ೧೩♫♫
ಇದು ಮಾತುಪಲ್ಲಟ ಸರಣಿಯ ಹದಿಮೂಱನೇ ಹಾಡು. ಹೊಸ ರೀತಿಯ ಬೞಕೆಗಳು ಮತ್ತು ಱ, ೞ ಪ್ರಯೋಗಗಳು ಯಾರಿಗೂ ಹಿಡಿಸಿರುವನ್ತಿಲ್ಲ. ಹಿಡಿಸಿದರೂ ಹಿಡಿಸದಿದ್ದರೂ ಮಾತುಪಲ್ಲಟ ಎನ್ದಿನನ್ತೆ ಮುನ್ದುವರಿಯಲಿದೆ. ಇಲ್ಲಿ ನನ್ನ ಉದ್ದೇಶ ಇನ್ನೊನ್ದು ಭಾಷೆಯ ಹಾಡುಗಳನ್ನು ಪರಿಚಚಯಿಸುವುದಲ್ಲ, ಕನ್ನಡ ಭಾಷೆಯಲ್ಲಿ ಸಾಧ್ಯವಾಗುವ ಪ್ರಯೋಗಗಳನ್ನು ಕಣ್ಡುಕೊಳ್ಳುವುದು.
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
ಚಿತ್ರ : ಶಂಕರಾಭರಣಂ(ತೆಲುಗು)♪
ಸಂಗೀತ : ಶ್ರೀ ಕೆ. ವಿ. ಮಹಾದೇವನ್♪
ಮೂಲ ಸಾಹಿತ್ಯ : ಶ್ರೀ ವೇಟೂರಿ ಸುನ್ದರರಾಮಮೂರ್ತಿ♪
ಹಾಡುಗಾರರು : ಶ್ರೀ ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಶ್ರೀಮತಿ ವಾಣಿ ಜಯರಾಂ♪
ವಿಡಿಯೋ : http://www.youtube.com/watch?v=ZyStcTwJxj0
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಮೂಲ ಸಾಹಿತ್ಯ♪ :
ದೊರಕುನಾ...
ದೊರಕುನಾ ಇಟುವಣ್ಟಿ ಸೇವ | ದೊರಕುನಾ ಇಟುವಣ್ಟಿ ಸೇವ |
ನೀ ಪದ ರಾಜೀವಮುಲ ಚೇರು ನಿರ್ವಾಣ ಸೋಪಾನಮಧಿರೋಹಣಮು ಸೇಯು ತ್ರೋವ ||
ರಾಗಾಲನನ್ತಾಲು ನೀವೇಯಿ ರೂಪಾಲು | ಭವರೋಗ ತಿಮಿರಾಳ ಪೋಗಾರ್ಚು ದೀಪಾಲು |
ನಾದಾತ್ಮಕುಡವೈ | ನಾಲೋನ ಚೆಲಗಿ | ನಾ ಪ್ರಾಣ ದೀಪಮೈ ನಾಲೋನ ವೆಲಿಗೆ |
ನಿನು ಕೊಲ್ಚು ವೇಳ ದೇವಾಧಿದೇವಾ || ದೊರಕುನಾ ಇಟುವಣ್ಟಿ ಸೇವ | ದೊರಕುನಾ ಇಟುವಣ್ಟಿ ಸೇವ ||
ಉಚ್ಛ್ವಾಸ ನಿಃಶ್ವಾಸಮುಲು ವಾಯುಲೀನಾಲು | ಸ್ಪನ್ದಿಂಚು ನವನಾಡುಲೇ ವೀಣಾಗಾನಾಲು |
ನಡಲು, ಎದಲೋನಿ ಸದುಲೇ ಮೃದಂಗಾಲು | ನಾಲೋನಿ ಜೀವಮೈ, ನಾಕುನ್ನ ದೈವಮೈ |
ವೆಲುಗೊನ್ದು ವೇಳ ಮಹಾನುಭಾವಾ || ದೊರಕುನಾ ಇಟುವಣ್ಟಿ ಸೇವ | ದೊರಕುನಾ ಇಟುವಣ್ಟಿ ಸೇವ ||
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಮಾತುಪಲ್ಲಟ♪ :
ಕರುಣಿಸು...
ಕರುಣಿಸು ನಿನ್ನದೊನ್ದು ಸೇವೆ | ದೊರೆವುದೇ ಇಂಥದೊನ್ದು ಸೇವೆ |
ಆ ಪದ ರಾಜೀವಗಳ ಸೇರೆ ನಿರ್ವಾಣ ಸೋಪಾನಗಳನ್ನೇಱೆ ಎನ್ದು ಕರೆವೆ ||
ರಾಗಂಗಳೆಲ್ಲವನ್ನೂ ನಿನ್ನಲ್ಲೇ ಅಣಿಗೊಳಿಸಿ | ಭವರಾಗ ರೋಗಂಗಳ ಬೆನ್ನಟ್ಟೆ ಬೆಳಕಾಗಿ |
ನಾದಾತ್ಮ ರೂಪನೇ | ನನ್ನೊಳೊನ್ದು ಬಲವಾಗಿ | ನನ್ನದಾದ ಉಸಿರನ್ನು ನಿನ್ನೊಳಗೆ ನೆಲೆಗೊಳಿಸಿ |
ಕನಿಕರಿಸು ಇನ್ದು, ದೇವಾಧಿದೇವಾ || ಕರುಣಿಸು ಈ ಪರಿಯ ಸೇವೆ | ದೊರೆವುದೇ ಶ್ರೀ ಹರಿಯ ಸೇವೆ ||
ಉಚ್ಛ್ವಾಸ ನಿಃಶ್ವಾಸಗಳ ಪಿಟೀಲಿನಾ ಗಾನಕ್ಕೆ | ಸ್ಪನ್ದಿಸುವ ನವನಾಡಿಗಳ ವೀಣೆಯಾ ನಾದಕ್ಕೆ |
ನಡೆಗೆ, ಎದೆಯೊಳಗೆ ಮಿಡಿವ ಮೃದಂಗಕ್ಕೆ | ನನಗಿರುವ ಜೀವವ, ನಂಬಿರುವ ದೇವನೊಳು |
ನೆಲೆಗೊಳಿಸು ಇನ್ದು, ಮಹಾನುಭಾವಾ || ಕರುಣಿಸು ಈ ಪರಿಯ ಸೇವೆ | ದೊರೆವುದೇ ಶ್ರೀ ಹರಿಯ ಸೇವೆ ||
♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
Comments
ಉ: ಮಾತುಪಲ್ಲಟ - ೧೩
In reply to ಉ: ಮಾತುಪಲ್ಲಟ - ೧೩ by ananthesha nempu
ಉ: ಮಾತುಪಲ್ಲಟ - ೧೩
ಉ: ಮಾತುಪಲ್ಲಟ - ೧೩
In reply to ಉ: ಮಾತುಪಲ್ಲಟ - ೧೩ by ksraghavendranavada
ಉ: ಮಾತುಪಲ್ಲಟ - ೧೩
In reply to ಉ: ಮಾತುಪಲ್ಲಟ - ೧೩ by kpbolumbu
ಉ: ಮಾತುಪಲ್ಲಟ - ೧೩
In reply to ಉ: ಮಾತುಪಲ್ಲಟ - ೧೩ by sathe.8901
ಉ: ಮಾತುಪಲ್ಲಟ - ೧೩
In reply to ಉ: ಮಾತುಪಲ್ಲಟ - ೧೩ by kpbolumbu
ಉ: ಮಾತುಪಲ್ಲಟ - ೧೩
In reply to ಉ: ಮಾತುಪಲ್ಲಟ - ೧೩ by sathe.8901
ಉ: ಮಾತುಪಲ್ಲಟ - ೧೩