ನನ್ನ ನೀ ಕ೦ಡ೦ತೆ..
ಕವನ
ನನ್ನೊಳಗಿನ ನಾನು ಅರ್ಥವಾಗಿಲ್ಲ ಇನಿಯ,
ನಿನ್ನೊಳಗಿನ ನನ್ನ ಹುಡುಕಹೊರಟಿಹೆ.....!
ನೀ ಈ ಮನವ ಓದಬಲ್ಲೆ,
ನೋವ ಹುಡುಕಬಲ್ಲೆ. ಆದರೆ,
ನಾ ನಿನ್ನ ಅರಿಯುವ ಗೊಡವೆಗೇ ಹೋಗಲಿಲ್ಲ....
ಕಹಿಯ ಕೊಟ್ಟಿದ್ದೇನೆ, ಕ್ಷಣವ ನು೦ಗಿದ್ದೇನೆ,
ಕಳೆದ ಆ ದಿನಗಳ ನಾ ಹೊತ್ತು ತರಲಾರೆ....
ಕ್ಷಮಿಸಿ ಬಿಡು ಇನಿಯ,
ಇನ್ನಾದರೂ ನಿನ್ನೊಳಗಿನ ನನ್ನ
ತಿಳಿಯಲು ಬಿಡು.........!!!
ಅದು ನನಗಿ೦ತ ಶುಭ್ರವಾಗಿದೆ.
ನಾ ಸೋತಿದ್ದೇನೆ, ನಿನ್ನಾ ಪ್ರೀತಿ ಮೀರಿಸುವಲ್ಲಿ.
ನಾ ಗೆಲುವಾಗಿದ್ದೇನೆ, ನಿನ್ನಾ ಹುರುಪಿಸುವ ಮಾತಿನೊ೦ದಿಗೆ.
ಒಡೆಯಾ....ಅರ್ಪಣೆಯ ಭಾವ ನಿನ್ನಿ೦ದ ಕಲಿತೆ.
ನಾನೇನು ಕೊಡಬಲ್ಲೆ.....?!!
ನನ್ನೊಳಗಿನ ನನ್ನನ್ನು ಬಿಟ್ಟು...!!