ಆಘಾತ (ಸಣ್ಣ ಕಥೆ)
ಆಘಾತ (ಸಣ್ಣ ಕಥೆ)
ಕುಯ್ಯ್...,ಯ್ಯ್,,,,, ಢಂ........ ಅಯ್ಯೋ.......
"ರೀ ಅದೇನ್ ಶಬ್ದ ಹೊರಗೆ ನೋಡಿ, ಈಗ ತಾನೆ, ಸುನೀಲ್ ಗಾಡಿ ತೊಗೊಂಡು ದೇವಸ್ಥಾನಕ್ಕೆ ಹೋಗಿ ಬರ್ತೀನಿ" ಅಂತ ಹೋದ.
"ದೇವಸ್ಥಾನಕ್ಕೆ?! ಸುನೀಲ...!!"
"ಇವತ್ತು ಅವನ ಹುಟ್ಟು ಹಬ್ಬ, ಪಾರ್ಟಿಗೆ ದುಡ್ಡು ಕೊಡು ಅಂದ, ಮೊದಲು, ದೇವಸ್ಥಾನಕ್ಕೆ ಹೋಗು ಆಮೇಲೆ ಪಾರ್ಟಿ" ಆಂದೆ.
ಅಷ್ಟರಲ್ಲಿ ಬಾಗಿಲು ಜೋರಾಗಿ ಯಾರೋ ಬಡಿದಂತಾಯ್ತು..
"ಯಾರು , ಬಂದೆ" ಜಾನಕಿ ರಾಮ್ ಸುನೀಲನ ತಂದೆ, ಬಾಗಿಲು ತೆಗೆದರು.
"ಸಾರ್, ಯಾರೋ ಹುಡುಗ ಆ ಸ್ಕಾರ್ಪಿಯೋ ಗಾಡಿಗೆ ಸಿಕ್ಕಿ ಒದ್ದಾಡುತಿದ್ದಾನೆ, ಬೇಗ ಬನ್ನಿ ಆಸ್ಪತ್ರೆಗೆ ಸಾಗಿಸೋಣ" ಆಂದ ಬಂದಿದ್ದ ವ್ಯಕ್ತಿ.
ಜಾನಕಿ ರಾಮ್ ನೋಡಲು ಹೋದರು.
ಸುನೀಲ್! ಅಯ್ಯೋ ವಿಧಿಯೇ , ಈಗೇನು ಮಾಡೋದು...., ತಕ್ಷಣ ಆಸ್ಪತ್ರೆಗೆ ತೆಗೆದುಕೊಂಡು ಹೋಗಬೇಕು.....
ಸುನೀತಾ...... ಅರಚುತ್ತಾ ಓಡಿ ಬಂದು...... ಗೇಟಿನ ಬಳಿ ನಿಂತು......ಯೋಚಿಸಿದರು...
ಕಾರ್ ಗಾರೇಜಿನಿಂದ ತೆಗೆದು ಸುನೀತಾಳನ್ನು ಕರೆದುಕೊಂಡು ಆಸ್ಪತ್ರೆಗೆ ಬಂದರು.
"ಸಾರಿ ಸಾರ್, ಇಲ್ಲಿ ಆಗಲ್ಲ , ಅಪೋಲೋ ಆಸ್ಪತ್ರೆಗೆ ಹೋಗಿ ಎಂದರು ಡ್ಯೂಟಿ ಡಾಕ್ಟರ್.
ಆಪೋಲೋ ಆಸ್ಪತ್ರೆಗೆ ಬಂದು ಸೇರಿಸಿದರು.
"He is very criticle, he needs blood.... lot of blood looss... Arrange immediately.... O+ve" ಎಂದು ಹೇಳಿ ಡಾಕ್ಟರ್ ರಮೇಶ್ ತುರ್ತು ನಿಗಾ ಘಟಕದ ಒಳ ನಡೆದರು.
ಜಾನಕಿರಾಮ್ ರಕ್ತ ಹೂಂದಾಣಿಸಲು ಹೊರಟರು.
ಸುನೀತ ಆಲ್ಲೆ ಕುಸಿದು ಕುಳಿತಳು. ಮನದಲ್ಲಿ ನೆನಪುಗಳು ಸುಳಿದಾಡಿದವು..
ಮಕ್ಕಳಿಲ್ಲ ಎಂದು ಕಂಡ ಕಂಡ ದೇವಿರಿಗೆಲ್ಲ ಹರಕೆ ಹೊತ್ತೆ. ಎಲ್ಲಾ ಡಾಕ್ಟರ್ ಬಳಿಗೂ ಅಲೆದೆ.
ದೇವರೆ.... ಕೊನೆಗೂ IVF ಚಿಕಿತ್ಸೆಯಿಂದ ಒಂದು ಮಗನನ್ನು ಕರುಣಿಸಿದೆ. ಅದು ಮದುವೆಯಾಗಿ ಎಂಟು ವರ್ಷದ ಮೇಲೆ!
ಆಗ ನಮ್ಮ ಜೀವನದಲ್ಲೇ ಎಲ್ಲಿಲ್ಲದ ಸಂತೋಷ, ಉತ್ಸಾಹ. ಅತೀ ಪ್ರೀತಿಯಿಂದ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದೆ. ಅವನು ಕಡಿಮೆ ಅಂಕ ಗಳಿಸಿದರೂ ಅವನಿಗಿಷ್ಟ , ಅವನ ಸ್ನೇಹಿತರೆಲ್ಲಾ ಸೇರಿದರಲ್ಲ ಎಂದು ಗಂಡನೊಡನೆ ಜಗಳವಾಡಿ ಡೊನೇಷನ್ ಕೊಟ್ಟು Engineering ಸೇರಿಸಿದೆ,
ಮೊದಲೆರೆಡು ಸೆಮಿಸ್ಟರನಲ್ಳಿ ಫೇಲಾದರೂ ಇರಲಿ ಕಷ್ಟ ಇರಬಹುದು ಎಂದು, ಟ್ಯೂಷನ್ ಸೇರಿಸಿ ಏನೋ ಮಗ ಇಂಜಿನೀರ್ ಆಗಲಿ ಎಂದು ಕನಸು ಕಾಣುತ್ತಿದ್ದೆ. ಅಯ್ಯೋ ದೇವರೆ, ಈ ಸುಖಕ್ಕೇ ಮಕ್ಕಳನ್ನೇಕ ಕೊಟ್ಟೆ. ಅವನಿಗೇನಾದ್ರು ಆದರೆ ನಾನು ನಿನ್ನನ್ನು ಸುಮ್ಮನೆ ಬಿಡುವಳಲ್ಲ ಎಂದು ಮನದಲ್ಲೇ ದೇವರಿಗೆ ಮೂರೆಹೋಗಿದ್ದಳು ಸುನೀತ.
ಜಾನಕಿರಾಮ್ ಎರಡು ಬಾಟಲಿ ರಕ್ತ ಹಿಡಿದು ಬಂದರು.
"ಡಾಕ್ಟರ್ ನನ್ನ ಮಗನ್ನನ್ನು ಉಳಿಸಿ, ತೊಗೊಳ್ಳಿ ರಕ್ತ ತಂದಿದ್ದೀನಿ. ನೀವು ಹೇಳಿದಂತೆ ಒಂದು ಲಕ್ಷ ಮುಂಗಡ ಕಟ್ಟಿದ್ಡೀನಿ". ಎಂದರು.
ಡಾಕ್ಟರ್ ರಮೇಶ್, ಇಬ್ಬರನ್ನು ಒಳಗೆ ಕರೆದು "ಕೂತ್ಕೋಳಿ, ಸಮಾಧಾನ ಮಾಡಿಕೊಳ್ಳಿ, ನಮ್ಮ ಪ್ರಯತ್ನ ಮಾಡಿದೀವಿ, ನೋಡೋಣ.
ಆದರೂ, ನಿಮ್ಮ ಮಗ ಹೇಗೆ!? ಎಂದರು.
ಸುನೀತ ಒಮ್ಮೆಲೆ ಡಾಕ್ಟರನ್ನು ದಿಟ್ಟಿಸಿದಳು, ಪ್ರಾಣ ಭಿಕ್ಷೆ ಬೇಡಿ ಬಂದರೆ ನಮ್ಮ ಮಗ ಹೇಗೆ ಎಂದು ಕೇಳುವ ಸಮಯವೇ??
ಛೆ! ಈ ಡಾಕ್ಟರಿಗೆ ನನ್ನ ಧಿಕ್ಕಾರ, ಇವನಿಗೇನು ಗೊತ್ತು ಎಷ್ಟು ಕಷ್ಟ ಪಟ್ಟು ಮಗನನ್ನು ಪಡೆದಿದ್ದೀನಿ, ಎಷ್ಟು ಅಕ್ಕರೆಯಿಂದ ಮಗನನ್ನು ಬೆಳೆಸಿದ್ಡೀನಿ ಎಂದು. ಯಾವುದಕ್ಕೂ ಇಲ್ಲ ಎಂದಿಲ್ಲ..." ಕಣ್ಣಾಲಿಗಳು ತುಂಬಿ ಬಂದವು, ಬಿಕ್ಕಿ ಬಿಕ್ಕಿ ಅತ್ತಳು......ಜಾನಕಿ ರಾಮ್ ಹೆಂಡತಿಯನ್ನು ಸಮಾಧಾನ ಪಡೆಸಲು ಪ್ರಯತ್ನಿಸಿದರು.
" Sister, please check parents blood also. i need to see the report" ಎಂದರು ಡಾಕ್ಟರ್ ರಮೇಶ್.
ಸಿಸ್ಟರ್ ಏನೋ ಸೂಚನೆ ಅರ್ಥವಾದಂತೆ, ಸುನೀತ, ಜಾನಕಿರಾಮ್ ಇಬ್ಬರ ರಕ್ತ ಪಡೆದು ಪರೀಕ್ಷಿಸಲು ತರಾತುರಿಯಲ್ಲಿ ನಡೆದಳು.
ಜಾನಕಿ ರಾಮ್ ಮಾತು ಪ್ರಾರಂಭಿಸಿದರು.
"ನಮಗೆ ಇರುವನು ಒಬ್ಬನೇ ಮಗ, He is test tube baby. ಸುನೀತಳಿಗೆ ಬಹಳ ಅಚ್ಚುಮೆಚ್ಚಿನ ಮಗ
ಅವಳದೇ ಎಲ್ಲಾ ಜವಾಬ್ದಾರಿ. ನಾನು ಸ್ವಲ್ಪ ಸ್ಟ್ರಿಕ್ಟ್. ಅದಕ್ಕೆ ನನ್ನ ಸ್ವಲ್ಪ avoid ಮಾಡ್ತಾನೆ. ಏನಿದ್ದರೂ ಅವನ ಅಮ್ಮನೇ"
ಅಯ್ಯೋ ಇಲ್ಲಿ ನನಗೆ ಮಗನ ಚಿಂತೆ, ಇವರಿಗೆ ಅವನ್ನ ವಿವರಿಸುವ ಚಪಲ ಆಂತ ಕಣ್ಣೊರಸಿಕೂಂಡಳು ಸುನೀತ.
"ಸ್ನೇಹಿತರು ಜಾಸ್ತಿ, ಅಲ್ಲಿ ಇಲ್ಲಿ ಅಂತ ಹೋಗ್ತಾ ಇರ್ತಾನೆ. He likes to explore and do some adventure you know. He is very fast" ಮಗನ ಗುಣ ಗಾನ ಮಾಡಿದಳು ಸುನೀತ.
"But, he does't like his Dad much. Ram, is like very orthodox. too much advice. Some times it is so madness i
can't bear, how Sunil can bear his torture. No freedom you know... For everything there is, questins, restrictions and checking. no Freedom for sunil" ಎಂದು ಗಂಡನಿಗೆ ಮಗನ ಬಗ್ಗೆ ಇರುವ ಅಸಹನೆಯನ್ನು ಒಮ್ಮೆಲೆ ಕೆಡವಿದಳು.
ಡಾಕ್ಟರ್ ಮನದಲ್ಲೇ "ಜಾನಕಿ ರಾಮ್ ಸರಿ" ಎಂದು ಅಂದುಕೂಂಡರು.
"ಈಗೀಗ ಸ್ವಲ್ಪ ಜ್ವರ ಬರುತ್ತೆ, ಹೋಗುತ್ತೆ. ಯಾವಾಗಲು ಕಾಲೇಜು, ಓದು, ಸ್ನೇಹಿತರು ಅದಕ್ಕೆಸ್ವಲ್ಪ ಆಯಾಸ, ಯಾವುದರಲ್ಲೂ ಆಸಕ್ತಿ ಇರಲ್ಲ" ಎಂದರು ಜಾನಕಿ ರಾಮ್.
ಇಬ್ಬರದ್ದೂ ರಿಪೋರ್ಟ್ ಬಂತು. ನೋಡಿದ ಡಾಕ್ಟರ್ ರಮೇಶ್ " They are fine, But..." ಎಂದು ಸಿಸ್ಟರ್ ಕಡೆ ನೋಡಿದರು.
ಸಿಸ್ಟರ್ ಅಲ್ಲಿ ನಿಲ್ಲದೇ ನಡೆದಳು.
ಫೋನ್ ರಿಂಗ್ ಆಯಿತು. "Oh no.. I am coming" ಎಂದು ಡಾಕ್ಟರ್ ತೀರ್ವ ನಿಗಾ ಘಟಕದ ಕಡೆ ಓಡಿದರು.
ಅಲ್ಲೇ ಟೇಬಲ್ ಮೇಲಿದ್ದ ಸುನೀಲನ Blood Report ನೋಡಿದ ಸುನೀತ ಕುಸಿದುಬಿದ್ದಳು.
ಜಾನಕಿ ರಾಮ್ ರಿಪೋರ್ಟ್ ತೆಗೆದುಕೂಂಡು ಕಣ್ಣಾಡಿಸಿದರು ಅಷ್ಟೆ.
ಡಾಕ್ಟರ್ ರಮೇಶ್ ಬಂದು "I am sorry. we are un lucky " ಎಂದು ಸುನೀತ ಕುಸಿದಿರುವುದನ್ನು ನೋಡಿದರು.
ಅದಕ್ಕಿಂತ ಅಘಾತ ಇದು ಎಂದು ಜಾನಕಿರಾಮ್ ರಿಪೋರ್ಟ್ ಡಾಕ್ಟರ್ ಮುಂದೆ ಹಿಡಿದು ಒಮ್ಮೆಲೆ ಸ್ಪೋಟವಾದಂತೆ
"ನೋ" ಎಂದು ಕಿರುಚಿದ. ...... Massive heart attack!
ರಿಪೋರ್ಟ್ ನಲ್ಲಿ ಏನಿತ್ತು.
Name Sunil. J
Age 19 Yrs
Heamoglobin +++
RBS +++++
Cells +++++
HIV +ve
Blood report ಸುನೀಲನ ಜೀವನ ಶ್ಯೆಲಿ ವಿವರಿಸುವಂತಿತ್ತು.
ಮಧ್ವೇಶ್ (೧೪.೧೧.೧೦)