ಗಜಲ್

ಗಜಲ್

ಬರಹ

ಗಜಲ್
ಬದುಕು ಬಣ್ಣವಾಗಿಸಲು ಕರೆದೆ ನೀ ನಡೆದೆ ದೂರ
ಪ್ರೇಮದ ಸಿಂಚನವ ಕೋರಿದೆ ನೀ ನಡೆದೆ ದೂರ

ಬಡತನವನೆ ಹಾಸಿ ಹೊದ್ದು ಒಲವಿನೊರತೆಯ ಕುಡಿದು
ಜಕ್ಕವಕ್ಕಿಗಳಾಗಲು ಬೇಡಿದೆ ನೀ ನಡೆದೆ ದೂರ

ಪ್ರೀತಿಗಾಗಿ ಹಂಬಲಿಸಿ ಮಣ್ಣದವರೆಷ್ಟೋ
ಆದರೂ ನಿನ್ನ ಜೊತೆ ಬಯಸಿದೆ ನೀ ನಡೆದೆ ದೂರ

ನಾನೀಗ ಏಕಾಂಗಿ, ಭಗ್ನ ಹೃದಯಿ, ನಿನ್ನ ಪದ
ತಲದ ದಾಸನೆಂದು ಗೋಗರೆದೆ ನೀ ನಡೆದೆ ದೂರ

ಮದಿರೆಯಲ್ಲಿ ಮುಳುಗಿದವನೆಂದು ಜಗವೆಂದರೂ
ಅದು ನಿನಗಾಗಿ ಎಂದು ಸಾರಿದೆ ನೀ ನಡೆದೆ ದೂರ
-ಸಿದ್ಧರಾಮ ಹಿರೇಮಠ.