ಒಂದಾನ್ನೊಂದು ಕಾಲದಲ್ಲಿ..........

ಒಂದಾನ್ನೊಂದು ಕಾಲದಲ್ಲಿ..........

ಬರಹ

ಒಂದಾನ್ನೊಂದು ಕಾಲದಲ್ಲಿ,

ಒಂದು ಸೇಬಿನ ಮರ ಇತ್ತು, ಅದರಲ್ಲಿ ಒಂದು ಮುಗು ಸೇಬು ತಿನ್ನುತಾ, ಮರದ ನೆರಳಲ್ಲಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತ, ಆ ಮರದ ಮೇಲೆ ಕೂರುವ ಹಕ್ಕಿಗಳ ಚಿಲಿಪಿಲಿ ಸದ್ದು ಕೇಳುತ್ತ, ಆಟವಾಡಿಕೊಂಡಿತ್ತು.

ವರುಷಗಳುರುಳಿದವು.......

ಮಗು ಈಗ ಹುಡುಗನಾಗಿದ್ದನೆ..

ಈಗ ಅವನು ಮರದ ಕೆಳಗೆ ಆಟವಾಡುವುದಿಲ್ಲ, ಹೀಗಿರಲು ಒಂದು ದಿನ ಆ ಹುಡುಗನ್ನನು ಕುರಿತು ಮರ ಪ್ರಶ್ಣಿಸಿತು: "ಮಗು ಬಾ ನನ್ನ ಜೊತೆ ಆಟವಾಡು"

ಅಗ ಹುಡುಗ ಹೇಳ್ತಾನೆ "ನಿನ್ನ ಜೊತೆ ಆಟವಾಡಲು ನಾನೇನು ಚಿಕ್ಕ ಮಗುವಲ್ಲ, ಈಗ ದೊಡ್ಡವನಾಗಿದ್ದೇನೆ, ಈಗೇನಿದ್ದರೂ ನಾನು ದಾಂಡು ಮುಂತಾದ ಆಟಿಕೆಗಳಲ್ಲಿ ಮಾತ್ರ ಆಡುವುದು, ಆದರೆ ಅದನ್ನು ಕೊಳ್ಳಲು ನನ್ನ ಬಳಿ ದುಡ್ಡಿಲ್ಲ"

ಆಗ ಮರವು "ನನ್ನ ಬಳಿಯು ದುಡ್ಡಿಲ್ಲ, ನೀನು ನನ್ನ ಸೇಬು ಹಣ್ಣುಗಳನ್ನು ಕೊಂಡೊಯ್ದು ಅವುಗಳನ್ನ ಮಾರಿದರೆ ನಿನಗೆ ಹಣ ಸಿಗುವುದು" ಎಂದುಲಿಯಿತು.

ಆ ಹುಡುಗ ಸೇಬುಗಳೆಲ್ಲವನ್ನು ತೆಗೆದುಕೊಂಡು, ಮಾರಿ ಆ ದುಡ್ಡಿನಿಂದ ಬಹಳಷ್ಟು ಆಟಿಕೆಗಳನ್ನು ಕೊಂಡು ಮಜವಾಗಿ ಆಟವಾಡಿಕೊಂಡಿದ್ದನು. ಮರದ ಕಡೆ ಒಮ್ಮೆ ಸಹ ತಿರುಗಿಯು ನೋಡಲ್ಲಿಲ್ಲ. ಮರಕ್ಕೆ ಇವನ ಅಗಲಿಕೆಯಿಂದ ನಿರಾಸೆಯಯಿತು.

ವರುಷಗಳು ಕಳೆದಿವೆ, ಈಗ ಹುಡುಗ ತರುಣನಾಗಿದ್ದನೆ, ಮದುವೆಯಾಗಿ ಸಂಸಾರಸ್ಥನಾಗಿದ್ದನೆ, ಹೀಗಿರಲು ಒಮ್ಮೆ ಬೇಜಾರಿನಿಂದ ನಡೆದು ಹೊಗುತ್ತಿದ್ದಾಗ ಇವನ ಕುರಿತು ಆ ಮರವು: "ಮಗು, ಯಾಕೆ ಬೇಜಾರಿನಲ್ಲಿದ್ದಿಯ? ನನ್ನ ಬಳಿ ಬಾ ನನ್ನ ನೆರಳಿನಲ್ಲಿ ವಿಶ್ರಾಂತಿ ಪಡೆದುಕೋ, ನೀನಿಲ್ಲದೇ ನನಗೆ ಜೀವನ ಬಹಳ ಕಷ್ಟವಾಗಿದೆ" ಎಂದಿತು.

ಆಗ ಈ ಹುಡುಗ "ನನ್ಗೆ ಸಮಯವಿಲ್ಲ, ನಾನು ನನ್ನ ಹೆಂಡತಿ ಮಕ್ಕಳಿಗೋಸ್ಕರ ದುಡಿಯಬೇಕಾಗಿದೆ, ಅವರಿಗಾಗಿ ಮನೆ ಕಟ್ಟಬೇಕಾಗಿದೆ, ಅದಕ್ಕಾಗಿ ಹಣದ ಅವಶ್ಯಕತೆಯಿದೆ" ಎಂದನು

ಆಗ ಮರವು "ಮಗು, ನನ್ನ ಬಳಿ ದುಡ್ಡಿಲ್ಲ, ನೀನು ನನ್ನನ್ನ ಕತ್ತರಿಸಿ ಆ ಮರದಿಂದ ಮನೆ ಕಟ್ಟಿಕೋ, ನಿನಗೆ ಹೀಗಾದರು ಉಪಯೋಗವಾಗುವ ಭಾಗ್ಯ ಕೊಡು" ಎಂದಿತು.

ಆಗ ಹುಡುಗ ಸಂತೋಷದಿಂದ ಮರದ ರಂಬೆ ಕೊಂಬೆ ಕತ್ತರಿಸಿ, ನಂತರ ಬುಡದವರೆಗೂ ಕತ್ತರಿಸಿ, ಒಂದು ಸುಂದರ ಮನೆ ಕಟ್ಟಿಕೊಂಡನು.

ಮತ್ತೆ ಮರ ಒಬ್ಬಂಟಿಯಾಯಿತು......
ಆ ಹುಡುಗ ಮತ್ತೆ ಮರದ ಕಡೆ ತಿರುಗಿಯು ನೋಡಲಿಲ್ಲ, ತನ್ನ ಸಂಸಾರದೊಂದಿಗೆ ಸುಖವಾಗಿದ್ದನು.

ಕಾಲಚಕ್ರ ಉರುಳಿದೆ, ಆ ಹುಡುಗ ಮರದ ಬಳಿ ಬಂದ, ಆದರೀಗ ತರುಣನಾಗಲ್ಲದೇ ಮುದುಕನಾಗಿದ್ದನೆ, ಮುಖ ಗಂಟಿಕ್ಕಿದೆ, ಕಾಲಲ್ಲಿ ನಡೆಯೋ ಶಕ್ತಿ ಕುಗ್ಗಿದೆ, ಬೆನ್ನುಗಳು ಗೂನಾಗಿವೆ, ಧ್ವನಿ ಕೀರಲಾಗಿದೆ, ಕಣ್ಣು ಸರಿಯಾಗಿ ಕಾಣುವುದಿಲ್ಲ. ಹೀಗಿರಲು ಒಂದು ದೊಣ್ಣೆಯನ್ನ ಆಧಾರಮಾಡಿಕೊಂಡು ಮರದ ಬಳಿ ಬಂದಿದ್ದಾನೆ.

ಮರ ಅವನನ್ನು ಕುರಿತು.."ಏಕೆ? ಏಕೆ ಮಗು ಏನಾಯಿತು? ಯಾಕೆ ಬೇಜಾರಿನಲ್ಲಿದ್ದಿಯೆ? ನಾನು ನಿನಗೆ ಸಹಾಯ ಮಾಡುವ ಹಾಗಿದ್ದರೆ ಚೆನ್ನಾಗಿತ್ತು, ಆದರೆ ನನ್ನ ಬಳಿ ಈಗ ಸೇಬುಗಳಿಲ್ಲ, ರಂಬೆ ಕೊಂಬೆಗಳಿಲ್ಲ, ನಿನಗೆ ಆನಂದ ನೀಡಲು ಅದರ ಮೇಲೆ ಕೂತು ಚಿಲಿಪಿಲಿ ಸದ್ದು ಮಾಡುತ್ತಿದ್ದ ಹಕ್ಕಿಗಳಿಲ್ಲ, ನಿನಗೆ ನೆರಳು ಕೊಡುವ ಸ್ಥಿತಿಯಲ್ಲು ನಾನಿಲ್ಲ, ನನ್ನನ್ನು ದಯವಿಟ್ಟು ಕ್ಷಮಿಸು" ಎಂದಿತು

ಈಗ ಮುದುಕನಾಗಿರುವಾ ಆ ಹುಡುಗ ಗಂಭೀರನಾಗಿ "ನಾನು ನನ್ನ ಜೀವನದಿಂದ ಬಳಲಿದ್ದೇನೆ, ನಾನೀಗ ಏಕಾಂಗಿ, ನನಗೆ ನಿನ್ನಿಂದ ಬೇಕಾಗಿರುವುದು ನಿನ್ನ ಪ್ರೀತಿಯೊಂದೆ, ನಿನ್ನ ಜೊತೆಯೊಂದೆ, ನಾನು ನಿನ್ನ ಬುಡದ ಬಳಿ ಕುಳಿತುಕೊಳ್ಳಬಹುದಾ?" ಎಂದು ಕೇಳುವಷ್ಟರಲ್ಲಿ ಈಬ್ಬರ ಕಣ್ಣಲ್ಲು ಆಶ್ರುಧಾರೆ ಹರಿದಿದೆ, ಆದರೂ.., ಒಂದಾದ ಅವರ ಕಣ್ಣುಗಳಲ್ಲಿ ಆನಂದ ಭಾಷ್ಪವೆಂಬ ಹೊಳಪಿದೆ.....

 

ಈಗ ಹೇಳಿ ಈ ಹುಡುಗ ಸ್ವಾರ್ಥಿಯೇ?
??
??
??
??
??
ಖಂಡಿತ ಇಲ್ಲ

ನಾವೆಲ್ಲ  ಒಂದಿಲ್ಲೊಂದು ರೀತಿ ಆ ಹುಡುಗನಂತೆ, ಆ ಮರವು ನಮ್ಮ ತಂದೆ ತಾಯಿಯಂತೆ,  ನಾವು ಚಿಕ್ಕವರಿದ್ದಾಗ ಅವರ ಮಡಿಲಿನಲ್ಲಿ  ಆಡಿ ಬೆಳೆಯುತ್ತೇವೆ, ದೊಡ್ಡವರಾದಂತೆ ಅವರನ್ನು ಏಕಾಂಗಿಯಾಗಿ ಬಿಟ್ಟು ಸುಖವಾಗಿರುತ್ತೇವೆ, ಮತ್ತೆ ಅವರ ನೆನಪಾಗುವುದು ಸಂಕಟ ಬಂದಾಗ..
ನಮಗೆ ಅವರನ್ನು ಮಾತಾಡಿಸಲು ಸಮಯವು ಸಹ ಇರುವುದಿಲ್ಲ. ಏನೇ ಆದರು ಮಾತ-ಪಿತೃಗಳು ನಮಗೋಸ್ಕರ, ನಮ್ಮ ಸುಖಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ದರಾಗಿರುತ್ತಾರೆ, ಅದಕ್ಕೆ ಪ್ರತಿಯಾಗಿ ಅವರು ಕೇಳುವುದು ಒಂದೆ, ನಮ್ಮ ಸಾಂಗತ್ಯ, ನಾವು ಅವರನ್ನು ಮರೆಯಬಾರದು, ನಮ್ಮ ಸಾಂಗತ್ಯ ನೀಡಿ, ನಾವು ಸುಖವಾಗಿದ್ದರೆ, ಉತ್ತಮನಾಗಿದ್ದರೆ, ಅವರು ಸುಖವಾಗಿದ್ದಂತೆ.

ಆಷ್ಟಿಲ್ಲದೇ ಹಿರಿಯರು ಹೇಳುತ್ತರೆಯೆ:

        ಮಾತೃದೇವೋ ಭವ, ಪಿತೃದೇವೋ ಭವ|
        ಆಚಾರ್ಯದೇವೋ ಭವ, ಅತಿಥಿದೇವೋ ಭವ||
ಎಂದು ಪ್ರಥಮ ಸ್ಥಾನವನ್ನ ತಾಯಿ ತಂದೆಯರಿಗೆ ಕೊಟ್ಟಿದ್ದಾರೆ.

ನಿಜವಾಗಿಯೂ   "ಮಾತೃದೇವೋ ಭವ, ಪಿತೃದೇವೋ ಭವ|"