ಸಾಕ್ಷಾತ್ಕಾರ

ಸಾಕ್ಷಾತ್ಕಾರ

ಬರಹ

ಸಾಕ್ಷಾತ್ಕಾರ
ಹೊತ್ತಿಗೆಗಳಲಿ ಹುಡುಕಿದೆ ಪರಬೊಮ್ಮನ
ಮುಗಿಯಿತಿದೇ ಹುಡುಕಾಟದಲಿ ಜೀವನದ ಕೆಲಚಣ
ಅವುಗಳಲೇನಿದೆ ಬರಿದೆ ದಾರಿ ಅವನಿಲ್ಲವಲ್ಲಿ

ಮತ್ತೆ ಶೋಧಿಸಿದೆ ಅವನ ವೈಣಿಕರ ನಾದದಲಿ
ಮಾರುಹೋದೆ ಅದೇ ನಾದಕೆ ಆದರ
ವನಿಲ್ಲವಲ್ಲಿ ಬರಿದೆ ಅವನ ಕುರುಹದರಲ್ಲಿ

ಅರಿಯದೆ ಆಲಿಸಿದೆ ಕಪಟ ಸಾಧುಗಳ ವಚನ
ಕಳೆಯಿತಿದರಲಿ ಮತ್ತನೇಕ ಸಾಧನೆಯ ಸಮಯ
ಅವನಿಲ್ಲವವರ ಬಳಿಯಲಿ ಬಹುದೂರ ಇರುವನಿಲ್ಲಿಂದ

ಮತ್ತೆ ತೊಡಗಿದೆ ಜನಸೇವೆಯಲಿ ಲೋಕೋಪಕಾರದಲಿ
ನುಂಗಿತು ಕೀರ್ತಿಶನಿ ನನ್ನನು ತಪ್ಪಿಸಿತು ಮತ್ತೊಮ್ಮೆ ದಾರಿ
ಅವನೊಲಿಯುವ ವರೆಗೂ ಸಲ್ಲದೀ ಪರಿ

ಏಕಾಂತದಲಿ ಬಹುದೂರ ಕುಳಿತೆ ಅವನನೇ ಧಾನಿಪುತ
ಮಸುಕುಮಸುಕಾಗಿ ಕಂಡನೋ ಇಲ್ಲವೋ ಎಂಬಂತೆ
ಮರೀಚಿಕೆಯ ತರದಲಿ ಕಂಡಂತಾದನು ದಿಗಂತದಲಿ

ಪರಮಗುರುವ ದರ್ಶಿಸಿ ದಾರಿಗಾಗಿ ಕಾಡಿ ಬೇಡಿದೆ
ಅವರುಲಿದರು ನಿನ್ನೊಳಗೇ ಇರುವನವನು
ಏತಕೀ ಅವಸರ, ತಳಮಳ

ದಾರಿ ಕಂಡಂತಾಗಿ ನನ್ನೊಳಗೆ ನಾ ಹೋದೆ
ಕೇಳಿತಾಗ 'ತತ್ತ್ವಮಸಿ'ಯೆಂಬ ಅವನ ನುಡಿ
ಅರಿತೆನಾಗ ಎಲ್ಲರೊಳಗಿರುವವನೊಬ್ಬನೆಂಬ ಪರಮ ಸತ್ಯ

-> ನ. ಗೋ.ಪ್ರ.