ತಪ್ಪು ಯಾರದು..
ಮಿಂಚಂಚೆಯಲ್ಲಿ ಬಂದದ್ದು..ಕನ್ನಡಕ್ಕೆ ಅನುವಾದಿಸಿದ್ದೇನೆ.
ಹತ್ತನೇ ತರಗತಿಯಲ್ಲಿ..
ನಾನು ತರಗತಿಯಲ್ಲಿ ಕುಳಿತಿದ್ದಾಗ ಅವಳನ್ನೇ ಎವೆಯಿಕ್ಕದೆ ನೋಡುತ್ತಿದ್ದೆ. ಅವಳು ನನ್ನ ಆತ್ಮೀಯ ಗೆಳತಿ. ನಾನು ಅವಳ ನೀಳವಾದ ಕಪ್ಪು ಜಡೆಯನ್ನೇ ನೋಡುತ್ತಾ ಅವಳು ನನ್ನವಳಾಗಬೇಕೆಂದು ಹಂಬಲಿಸುತ್ತಿದ್ದೆ. ಆದರೆ ಅವಳಲ್ಲಿ ಆ ಭಾವನೆ ಇರಲಿಲ್ಲ ಅದು ನನಗೆ ಗೊತ್ತು. ತರಗತಿಯ ನಂತರ ಅವಳು ನನ್ನ ಹತ್ತಿರ ಬಂದು ಹಿಂದಿನ ದಿನ ತಾನು ಬರದಿದ್ದ ಕಾರಣ ಹಿಂದಿನ ದಿನದ ನೋಟ್ಸ್ ಕೇಳಿ ಪಡೆದುಕೊಂಡು ಥ್ಯಾಂಕ್ಸ್ ಎಂದು ಹೇಳಿ ನನ್ನ ಕೆನ್ನೆಗೆ ಒಂದು ಮುತ್ತಿಟ್ಟಳು..ನಾನು ಅವಳಿಗೆ ಹೇಳಬಯಸಿದೆ. ನಾವಿಬ್ಬರು ಕೇವಲ ಗೆಳೆಯರಾಗಿರಬಯಸಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳೋಣ ಅನಿಸಿತು. ಆದರೆ ನನಗೆ ತುಂಬಾ ನಾಚಿಕೆ...ಏಕೆ ಎಂದು ತಿಳಿಯುತ್ತಿಲ್ಲ...
ಮೊದಲನೇ ವರ್ಷದ ಕಾಲೇಜಿನಲ್ಲಿ...
ನನ್ನ ಫೋನ್ ರಿಂಗಣಿಸಿತು ಎತ್ತಿದರೆ ಮತ್ತೊಂದೆಡೆ ಆಕೆಯ ಧ್ವನಿ. ಆಕೆ ಅಳುತ್ತಿದ್ದಳು ಬಿಕ್ಕಿ ಬಿಕ್ಕೆ ಅಳುತ್ತಿದಳು. ತನ್ನ ಪ್ರೇಮಿ ತನಗೆ ಮೋಸ ಮಾಡಿದ ವಿಷಯವನ್ನು ಹೇಳಿ ಅಳುತ್ತಿದ್ದಳು. ಅವಳನ್ನು ಸಂತೈಸಲು ನಾನು ಹೋದೆ. ಅವಳ ಪಕ್ಕದಲ್ಲಿ ಕುಳಿತು ಅವಳ ಒದ್ದೆ ಕಣ್ಣುಗಳ ನೋಡುತ್ತಾ ಅವಳು ನನ್ನವಳಾಗಬೇಕೆಂದು ಬಯಸಿದೆ. ೩ ಗಂಟೆಯ ನಂತರ "ಮುಂಗಾರು ಮಳೆ" ಸಿನಿಮಾ ಒಂದಷ್ಟು ಚಿಪ್ಸ್ ಮುಗಿಸಿದ ಮೇಲೆ ಅವಳು ಮನೆಗೆ ಹೊರಡಲು ಅನುವಾದಳು. ಹೊರಡುವ ಮುಂಚೆ ನನ್ನೆಡೆಗೆ ನೋಡಿ ಥ್ಯಾಂಕ್ಸ್ ಎಂದು ಹೇಳಿ ನನ್ನ ಕೆನ್ನೆಗೆ ಒಂದು ಮುತ್ತಿಟ್ಟಳು..ನಾನು ಅವಳಿಗೆ ಹೇಳಬಯಸಿದೆ. ನಾವಿಬ್ಬರು ಕೇವಲ ಗೆಳೆಯರಾಗಿರಬಯಸಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳೋಣ ಅನಿಸಿತು. ಆದರೆ ನನಗೆ ತುಂಬಾ ನಾಚಿಕೆ...ಏಕೆ ಎಂದು ತಿಳಿಯುತ್ತಿಲ್ಲ.
ಕೊನೆಯ ವರ್ಷದ ಕಾಲೇಜಿನಲ್ಲಿ.
ಅಂದು ಕಾಲೇಜಿನ ಕಡೆಯ ದಿನ. ಎಲ್ಲರು ಪದವಿ ಪತ್ರ ತೆಗೆದುಕೊಳ್ಳುವ ದಿನ. ಅವಳು ತನ್ನ ಪದವಿ ಪತ್ರವನ್ನು ತೆಗೆದುಕೊಳ್ಳಲು ವೇದಿಕೆಯ ಮೇಲೆ ಹತ್ತುತ್ತಿದ್ದರೆ ದೇವತೆಯೇ ನಡೆದು ಹೋದಂತಿತ್ತು. ಅವಳು ನನ್ನವಳಾಗಬೇಕೆಂದು ಬಯಸಿದೆ ಆದರೆ ಅವಳಲ್ಲಿ ಆ ಭಾವನೆ ಇರಲಿಲ್ಲ. ಅವಳು ಪದವಿ ಪತ್ರವನ್ನು ತೆಗೆದುಕೊಂಡು ಆ ಕೋಟ್ ಹಾಗು ಟೋಪಿಯೊಂದಿಗೆ ನನ್ನೆದುರು ಬಂದಳು. ನನಗೆ ಅಗಲಿಕೆಯ ನೋವು ತಡೆಯಲಾಗದೆ ಅವಳನ್ನು ಅಪ್ಪಿಕೊಂಡು ಅತ್ತುಬಿಟ್ಟೆ. ಅವಳು ನನ್ನ ತಲೆಯನ್ನು ಎತ್ತಿ ಸಂತೈಸಿ ಥ್ಯಾಂಕ್ಸ್ ಎಂದು ಹೇಳಿ ನನ್ನ ಕೆನ್ನೆಗೆ ಒಂದು ಮುತ್ತಿಟ್ಟಳು..ನಾನು ಅವಳಿಗೆ ಹೇಳಬಯಸಿದೆ. ನಾವಿಬ್ಬರು ಕೇವಲ ಗೆಳೆಯರಾಗಿರಬಯಸಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳೋಣ ಅನಿಸಿತು. ಆದರೆ ನನಗೆ ತುಂಬಾ ನಾಚಿಕೆ...ಏಕೆ ಎಂದು ತಿಳಿಯುತ್ತಿಲ್ಲ.
ಮದುವೆಯ ದಿನ..
ಇಂದು ಅವಳ ಮದುವೆಯ ದಿನ. ಛತ್ರದಲ್ಲಿ ಅವಳು ಮಂಟಪದಲ್ಲಿ ನಾನು ಕೆಳಗೆ ಕುಳಿತಿದ್ದೆ. ಅವಳು ಬೇರೆಯವನನ್ನು ಮಾಡುವೆ ಆಗಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾಳೆ. ಈಗಲೂ ಅವಳಿಗೆ ಹೇಳಬೇಕೆನಿಸಿತು. ಮಾಡುವೆ ಮುಗಿದು ಹೊರಡುವ ಮುಂಚೆ ಅವಳು ನನ್ನ ಬಳಿಗೆ ಬಂದು ಬಂದಿದ್ದಕ್ಕೆ ಥ್ಯಾಂಕ್ಸ್ ಎಂದು ಹೇಳಿ ನನ್ನ ಕೆನ್ನೆಗೆ ಒಂದು ಮುತ್ತಿಟ್ಟಳು..ನಾನು ಅವಳಿಗೆ ಹೇಳಬಯಸಿದೆ. ನಾವಿಬ್ಬರು ಕೇವಲ ಗೆಳೆಯರಾಗಿರಬಯಸಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳೋಣ ಅನಿಸಿತು. ಆದರೆ ನನಗೆ ತುಂಬಾ ನಾಚಿಕೆ...ಏಕೆ ಎಂದು ತಿಳಿಯುತ್ತಿಲ್ಲ.
ಸಾವಿನ ದಿನ..
ವರ್ಷಗಳು ಕಳೆದವು. ನಾನೀಗ ಕೆಳಗಡೆ ಶವದ ಪೆಟ್ಟಿಗೆಯಲ್ಲಿ ನನ್ನ ಆತ್ಮೀಯ ಗೆಳತಿ ಶವವಾಗಿ ಮಲಗಿರುವುದನ್ನು ನೋಡುತ್ತಿದ್ದೇನೆ. ಅವರ ಕಡೆಯವರು ಅವಳು ನನಗಾಗಿ ಕೊಟ್ಟು ಹೋಗಿದ್ದ ಒಂದು ಡೈರಿ ಯನ್ನು ನನಗೆ ಕೊಟ್ಟರು. ಅದನ್ನು ಓದುವಾಗ ನನ್ನ ಕಣ್ಣಾಲಿಗಳು ತುಂಬಿ ಬಂದವು. ಅದರಲ್ಲಿ ಒಂದು ಪುಟದಲ್ಲಿ ಅವಳು ಬರೆದಿದ್ದಳು. ನಾನು ಅವನಿಗೆ ಹೇಳಬಯಸಿದೆ. ನಾವಿಬ್ಬರು ಕೇವಲ ಗೆಳೆಯರಾಗಿರಬಯಸಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳೋಣ ಅನಿಸಿತು. ಆದರೆ ನನಗೆ ತುಂಬಾ ನಾಚಿಕೆ...ಏಕೆ ಎಂದು ತಿಳಿಯುತ್ತಿಲ್ಲ. ಅವನಾದರೂ ನನ್ನ ಬಳಿ ಬಂದು ಹೇಳಬಹುದಿತ್ತಲ್ಲವ
Comments
ಉ: ತಪ್ಪು ಯಾರದು..
In reply to ಉ: ತಪ್ಪು ಯಾರದು.. by asuhegde
ಉ: ತಪ್ಪು ಯಾರದು..
In reply to ಉ: ತಪ್ಪು ಯಾರದು.. by asuhegde
ಉ: ತಪ್ಪು ಯಾರದು..
ಉ: ತಪ್ಪು ಯಾರದು..
In reply to ಉ: ತಪ್ಪು ಯಾರದು.. by pavi shetty
ಉ: ತಪ್ಪು ಯಾರದು..