ಇ-ಲೋಕ-೬(೧೯/೧/೨೦೦೭)
ಬರಹ
ಬ್ಲಾಗ್ ಮೂಲಕ ಆದಾಯ
ಬ್ಲಾಗ್ ಬರೆದು ಅಂತರ್ಜಾಲದಲ್ಲಿ ಹಾಕುವುದು ಈಗ ಹಲವರ ಹವ್ಯಾಸ. ಆದರೆ ಅವನ್ನು ಜನಪ್ರಿಯಗೊಳಿಸುವುದು ಸುಲಭದ ಮಾತಲ್ಲ. ತಿಂಗಳಿಗೆ ದಶಲಕ್ಷ ಓದುಗರನ್ನು ಆಕರ್ಷಿಸುವ ಭಾರತೀಯ ಬ್ಲಾಗ್‌ಗಳೂ ಇವೆ. ಅಮಿತ್ ಅಗರ್‌ವಾಲ್ ಎಂಬವರ ತಂತ್ರಜ್ಞಾನದ ಬಗೆಗಿನ ಬ್ಲಾಗ್ "ಡಿಜಿಟಲ್ ಇನ್ಸ್ಪಿರೇಶನ್" ಇವುಗಳ ಪೈಕಿ ಒಂದು."ಗಾರ್ಡಿಯನ್","ವಾಲ್‌ಸ್ಟ್ರೀಟ್ ಜರ್ನಲ್' ಅಂತಹ ಪತ್ರಿಕೆಯ ಅಂಕಣಕಾರ ಅಮಿತ್ ವರ್ಮಾ ಅವರ "ಇಂಡಿಯಾ ಅನ್‌ಕಟ್" ಕೂಡಾ ಎರಡು ಲಕ್ಷ ಓದುಗರನ್ನು ಆಕರ್ಷಿಸುತ್ತದಂತೆ. ಹೀಗಾಗಿ ಇವರ ಬ್ಲಾಗ್‌ಗಳು ಜಾಹೀರಾತುದಾರರನ್ನೂ ಆಕರ್ಷಿಸಿ,ಇವರು ಕೈತುಂಬಾ ಹಣ ಸಂಪಾದಿಸಲು ಸಾಧ್ಯವಾಗಿದೆ.ಗೂಗಲ್ ಕಂಪೆನಿಯ ಆಡ್‌ಸೆನ್ಸ್ ಎಂಬ ಸೇವೆಗೆ ನೋಂದಾಯಿಸಿಕೊಂಡರೆ,ಬ್ಲಾಗ್‌ನ ವಿಷಯಕ್ಕೆ ಸಂಬಂಧಿಸಿದ ಜಾಹೀರಾತುಗಳು ಬ್ಲಾಗ್ ತಾಣದಲ್ಲಿ ಸೇರ್ಪಡೆಯಾಗಿ ಅವರ ತಾಣಕ್ಕೆ ಭೇಟಿ ನೀಡಿದ ಅಂತರ್ಜಾಲಿಗರ ಸಂಖ್ಯೆಯ ಆಧಾರದಲ್ಲಿ ಅವರಿಗೆ ಹಣ ಪಾವತಿಸುವ ವ್ಯವಸ್ಥೆಯಿದೆ.ಎಂಐಎಚ್ ಎಂಬ ಕಂಪೆನಿ ಅತ್ಯುತ್ತಮ ಬ್ಲಾಗ್ ಗುರುತಿಸಲು ಮುಂದಿನ ತಿಂಗಳಿನಿಂದ ಸ್ಪರ್ಧೆ ನಡೆಸಲು ಯೋಜಿಸಿದೆ. ವಿವರಗಳಿಗೆ http://blogs.ibibo.com/GIBH/index.aspx ನೋಡಿ.ಅದೇ ರೀತಿ ಭಾರತೀಯ ಭಾಷೆಯ ಬ್ಲಾಗ್‌ಗಳಿಗೆ ಸಂಬಂಧಿಸಿದ ಸ್ಪರ್ಧೆಯನ್ನು http://bhashaindia.com/contests/iba/Award.aspx ನಡೆಸಲಿದೆ.

ಧೀರ್ಘಾಯುಷ್ಯದ ಗುಟ್ಟು
ದೀರ್ಘಾಯುಷ್ಯಕ್ಕೆ ನಮ್ಮ ಅನುವಂಶಿಕತೆ ಒಂದು ಪ್ರಧಾಣ ಕಾರಣವೆನ್ನುವುದರಲ್ಲಿ ಸಂಶಯವೇ ಇಲ್ಲ. ಅದಲ್ಲದೆ ಇನ್ನಿತರ ಪೂರಕ ಅಂಶಗಳು ಇವೆ ಎನ್ನುವುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಪರ್ವತ ಪ್ರದೇಶಗಳಲ್ಲಿ ವಾಸ ಮಾಡುವವರು ಸಾಮಾನ್ಯವಾಗಿ ದೀರ್ಘಾಯುಷ್ಯಿಗಳಾಗಿರುವುದು ಕಂಡು ಬಂದಿದೆ. ಮಿತಾಹಾರ ಸೇವಿಸಿ, ದೇಹವು ಸ್ಥೂಲಕಾಯವಾಗುವುದನ್ನು ತಪ್ಪಿಸಿದರೆ ಆಯುಷ್ಯ ವೃದ್ಧಿ ನಿಶ್ಚಿತ.ಅದೇ ರೀತಿ ದೇಹಶ್ರಮ, ಒಣಹಣ್ಣುಗಳ ಅಧಿಕ ಸೇವನೆ, ಕರಿದ ತನಿಸುಗಳನ್ನು ದೂರವಿಡುವುದು ಹೆಚ್ಚು ಕಾಲ ಬಾಳಲು ಬಯಸುವವರು ಅನುಸರಿಸಬೇಕಾದ ವೃತ. ಬಿಸಿಲಿಗೆ ಮೈಯೊಡ್ಡಿ ಡಿ ವಿಟಮಿನ್ ಪಡೆಯುವುದು,ಗಾಳಿ ಸೇವನೆ ಕೂಡಾ ಅಗತ್ಯ. ಅಲ್ಪ ಪ್ರಮಾಣದ ವೈನ್ ಸೇವಿಸುವುದು ದೀರ್ಘಾಯುಷ್ಯಕ್ಕೆ ಪೂರಕ ಎನ್ನುವುದು ತುಸು ವಿವಾದಕ್ಕೀಡಾದ ಅಂಶ.ನಿಮ್ಮ ಜೀವನಕ್ರಮವನ್ನು ನೋಡಿ ನೀವು ಎಷ್ಟು ಆಯುಷ್ಯ ಹೊಂದಿದ್ದೀರಿ,ಅದನ್ನು ಹೆಚ್ಚಿಸಿಕೊಳ್ಳಲು ನೀವು ಮಾಡಬೇಕಿರುವ ಬದಲಾವಣೆಗಳ ಬಗ್ಗೆ ತಿಳಿಸುವ ಅಂತರ್ಜಾಲ ತಾಣದ ಕೊಂಡಿ ಇಲ್ಲಿ ಲಭ್ಯ:http://www.bluezones.com/vitality_compass

ವಾಣಿಜ್ಯ ವಿಮಾನದಲ್ಲಿ ಕ್ಷಿಪಣಿ ನಿರೋಧಕ ವ್ಯವಸ್ಥೆ
ಭಯೋತ್ಪಾದಕರು ತಮ್ಮ ದಾಳಿಗಳಿಗೆ ಕ್ಷಿಪಣಿಗಳನ್ನೂ ಬಳಸಿಕೊಳ್ಳುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಭುಜದ ಮೇಲಿಟ್ಟು ಉಡಾಯಿಸುವ ಮೊಬೈಲ್ ಕ್ಷಿಪಣಿಗಳನ್ನು ಇಂತಹ ದಾಳಿಗಳಿಗೆ ಬಳಸುವುದು ಕಂಡು ಬಂದಿದೆ. ನಾಲ್ಕು ವರ್ಷಗಳ ಹಿಂದೆಯೇ ಇಸ್ರೇಲೀ ವಾಣಿಜ್ಯ ವಿಮಾನವೊಂದು ಭಯೋತ್ಪಾದಕರ ಕ್ಷಿಪಣಿ ದಾಳಿಯಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿತ್ತು.ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಮಿಲಿಟರಿ ಬಳಕೆಗೆ ಲಭ್ಯವಿದ್ದರೂ,ಇವನ್ನು ನಾಗರಿಕ ವಿಮಾನಗಳಿಗೆ ಬಳಸಲು ಸೂಕ್ತವೇ ಎನ್ನುವುದು ಇನ್ನೂ ಸಿದ್ಧವಾಗಿಲ್ಲ. ಈಗ ಅಮೆರಿಕನ್ ವಾಣಿಜ್ಯ ಹಾರಾಟದ ವಿಮಾನವೊಂದಕ್ಕೆ ಗಾರ್ಡಿಯನ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿ,ಪ್ರಯೋಗಾತ್ಮಕ ಹಾರಾಟಗಳನ್ನು ನಡೆಸಲಾಗುತ್ತಿದೆ.ವಿಮಾನದ ತಳದಲ್ಲಿ ಅಳವಡಿಸಲಾಗುವ ಕ್ಷಿಪಣಿ ನಿರೋಧಕ ವ್ಯವಸ್ಥೆ, ವಿಮಾನ ಗಗನಗಾಮಿಯಾಗುವಾಗ ಹಾಗೂ ಭೂಸ್ಪರ್ಶ ಮಾಡುವ ವೇಳೆ ಸನ್ನದ್ಧ ಸ್ಥಿತಿಯಲ್ಲಿರುತ್ತದೆ.ಕ್ಷಿಪಣಿ ಉಡಾವಣೆಯಾದರೆ, ನಿರೋಧಕ ವ್ಯವಸ್ಥೆಯ ಲೇಸರ್ ಕಿರಣಗಳು ಕ್ಷಿಪಣಿಯ ಮಾರ್ಗದರ್ಶಕ ವ್ಯವಸ್ಥೆಯ ಹಾದಿ ತಪ್ಪಿಸಿ,ಅದು ವಿಮಾನಕ್ಕೆ ಬಂದೆರಗುವುದನ್ನು ತಪ್ಪಿಸುತ್ತದೆ.ಆದರೆ ವ್ಯವಸ್ಥೆಯನ್ನು ಅಳವಡಿಸಿದ ವಿಮಾನಗಳು ಸಾಮಾನ್ಯ ಹಾರಾಟ ನಡೆಸುವಾಗ ತೊಂದರೆ ಎದುರಿಸುತ್ತವೋ,ಅದು ವಿಮಾನದ ಇಂಧನ ದಕ್ಷತೆಯನ್ನು ತಗ್ಗಿಸಿ, ವಿಮಾನ ಹಾರಾಟವನ್ನು ಲಾಭದಾಯಕವಲ್ಲದಂತಾಗಿಸುತ್ತವೋ ಎನ್ನುವುದನ್ನು ಇನ್ನಷ್ಟೇ ತಿಳಿಯಬೇಕಿದೆ.ಪರೀಕ್ಷೆಗಳು ಧನಾತ್ಮಕ ಫಲಿತಾಂಶ ನೀಡದರೆ, ಸಾವಿರಕ್ಕೂ ಅಧಿಕ ವಿಮಾನಗಳಿಗೆ ಇವನ್ನು ಅಳವಡಿಸುವ ಯೋಜನೆಯಿದೆ.

ಸೆಲ್‌ಫೋನಿನೊಂದಿಗೆ ಮಾತಾಡುವ ಕೈಗಡಿಯಾರ
ಈ ವಾಚ್ ಧರಿಸಿದರೆ, ಸೆಲ್‌ಫೋನ್ ಕರೆ ಬಂದಾಗ, ಕರೆ ಯಾರದು ಎಂದು ತಿಳಿಯಲು, ಸೆಲ್‌ಫೋನನ್ನು ಹೊರತೆಗೆಯುವುದು ಬೇಡ. ವಾಚ್‌ನಲ್ಲೇ ಅದು ಯಾರ ಕರೆ ಎಂದು ಮೂಡುತ್ತದೆ. ವಾಚ್‌ನ ಗುಂಡಿಯೊಂದನ್ನು ಒಂದು ಬಾರಿ ಅದುಮಿದರೆ, ಫೋನ್ ಮೌವಾಗುತ್ತದೆ. ಅದನ್ನೇ ಎರಡು ಬಾರಿ ಅದಮಿದರೆ, ಧ್ವನಿ ಸಂದೇಶ ತೆಗೆದುಕೊಳ್ಳುವ ವ್ಯವಸ್ಥೆ ಚಾಲೂ ಆಗಿ, ಕರೆ ಮಾಡಿದವರು ನೀಡಿದ ಸಂದೇಶವನ್ನು ಸೆಲ್‌ಫೋನ್ ಸ್ವೀಕರಿಸುತ್ತದೆ.ಇದೆಲ್ಲಾ ಸಾಧ್ಯವಾಗಲು ಎರಡರ ನಡುವೆ ಸಂಪರ್ಕ ಏರ್ಪಡುವುದು ಹೇಗೆಂದಿರಾ? ಬ್ಲೂಟೂತ್ ತಂತ್ರಜ್ಞಾನ ಎಂಬ ನಿಸ್ತಂತು ಸಂಪರ್ಕ ಏರ್ಪಡುತ್ತದೆ. ಫೋನ್ ಜತೆಗೆ ಸಂಗೀತ ನುಡಿಸುವ

ಸೌಲಭ್ಯವೂ ಇದ್ದರೆ ಇದನ್ನು ಚಾಲೂ ಮಾಡಲು ಅಥವಾ ನಿಲ್ಲಿಸಲು ಪ್ರತ್ಯೇಕ ಗುಂಡಿಯಿದೆ.ವಾಚ್ ಹಾಗೂ ಫೋನ್ ಮೂವತ್ತಡಿಯೊಳಗಿನ ಅಂತರ ಹೊಂದಿದ್ದರೆ ಮಾತ್ರಾ ಈ ನಿಸ್ತಂತು ಸಂಪರ್ಕ ಕಾರ್ಯ ನಿರ್ವಹಿಸುತ್ತದೆ. ಈ ದೂರ ಸಂಪರ್ಕ ಸಾಧ್ಯವಾಗದ ಮಟ್ಟ ತಲುಪಿದಾಗ ವಾಚ್ ಅದುರಿ ಧರಿಸಿದವನ ಗಮನ ಈ ಕಡೆ ಸೆಳೆಯುತ್ತದೆ. ಕರೆ ಬಂದಾಗ ಕೂಡಾ ಧರಿಸಿದವನ ಗಮನ ಸೆಳೆಯಲು ವಾಚ್ ಅದುರುತ್ತದೆ. ವಾಚನ್ನು ಸೋನಿ ಎರಿಕ್‌ಸನ್ ಕಂಪೆನಿ ತಯಾರಿಸಿರುವ ಕಾರಣ ಬ್ಲೂಟೂತ್ ಸೌಲಭ್ಯ ಹೊಂದಿದ ಆ ಕಂಪೆನಿಯ ಫೋನ್ ಒಂದಿಗೆ ಕೆಲಸ ಮಾಡುತ್ತದೆ.ವಾಚನ್ನು ಎರಡು ಮೂರು ವಾರಗಳಿಗೊಮ್ಮೆ ಚಾರ್ಜ್ ಮಾಡುವ ತೊಂದರೆಯಿದೆ. ಇದು ತುಸು ಭಾರವಾಗಿರುವುದರ ಜತೆಗೆ ನಾಲ್ಕು ನೂರು ಡಾಲರು ಮುಖ ಬೆಲೆ ಹೊಂದಿರುವ ಕಾರಣ ಕಿಸೆಗೂ ಭಾರವಾಗಿದೆ!
*ಅಶೋಕ್‌ಕುಮಾರ್ ಎ
*ಅಶೋಕ್‌ಕುಮಾರ್ ಎ