’ಸಂಪದ ಸಮ್ಮಿಲನ # 4’ ಕುರಿತು

’ಸಂಪದ ಸಮ್ಮಿಲನ # 4’ ಕುರಿತು


’ಸಂಪದ ಸಮ್ಮಿಲನ’ದ ನೋಂದಣಿ ಪುಟಕ್ಕೆ ಭೆಟ್ಟಿಯಿತ್ತವರು ಐನೂರಕ್ಕೂ ಹೆಚ್ಚು ಮಂದಿ.
ಆ ಪೈಕಿ ಮುನ್ನೂರು ಜನರಾದರೂ ಬೆಂಗಳೂರಿಗರೇ ಇರಬಹುದಲ್ಲ?
ಆದರೆ, ನೋಂದಾಯಿಸಿಕೊಂಡವರು ಮುವ್ವತ್ತಕ್ಕೂ ಕಡಿಮೆ ಜನ!

ಓದುಗರೆಲ್ಲ ಸಮ್ಮಿಲನಕ್ಕೆ ಬರಬಾರದೆಂದೇನಿಲ್ಲ.
ಓದಿ ಸುಮ್ಮನಿರುವುದು ಉತ್ತಮ, ಹೌದು.
ಆದರೆ ಸಮ್ಮಿಲನಕ್ಕೆ ಬರುವುದು ಅತ್ಯುತ್ತಮ, ಅಲ್ಲವೆ?
ಓದು, ಬರವಣಿಗೆ, ಪ್ರತಿಕ್ರಿಯೆ ಇವೆಲ್ಲ ಭಾವ.
ಸಮ್ಮಿಲನ?
ಜೀವ.

ಇರಲಿ. ನೋಂದಾಯಿಸಿಕೊಂಡವರಾದರೂ ತಪ್ಪದೇ ಆಗಮಿಸಿದರೆ
ಸಮ್ಮಿಲನ ಸಾರ್ಥಕ.
ಮೇಲಷ್ಟು ಮಂದಿ ಬಂದರೆ
ಸಂಭ್ರಮ.   

Rating
No votes yet

Comments