ಇನ್ನೂ ಇದೆಯಂತೆ, ಅಗ್ನಿಪರೀಕ್ಷೆ!

ಇನ್ನೂ ಇದೆಯಂತೆ, ಅಗ್ನಿಪರೀಕ್ಷೆ!

x                ಸದ್ಯಕ್ಕೇನೋ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಜಪ ಹೈಕಮಾಂಡ್ ಬೀಸುವದೊಣ್ಣೆಯಿಂದ ತಲೆಯುಳಿಸಿಕೊಂಡು ಬಂದಿದ್ದಾರೆ. “ತಮಗೆ ಇನ್ನೂ ಎಷ್ಟೆಷ್ಟೋ ಅಗ್ನಿಪರಿಕ್ಷೆಗಳು ಕಾದಿವೆ, ಯಡಿಯೂರಪ್ಪವನವರೇ ಎಂದು ಪಕ್ಷದ ತಲೆ - The Head - ಅವರೇ ಎಚ್ಚರಿಸಿ ಕಳಿಸುತ್ತಿದ್ದಾರೆಂದು ಒಂದು ವಾಹಿನಿಯೂ ಅಂದೇ ವರದಿ ಮಾಡಿತ್ತು. ಮುಖ್ಯಮಂತ್ರಿಗಳ ವಿರುದ್ಧ ಸ್ವಜನವ್ಯಾಮೋಹದ ದೊಡ ವಿವಾದ ಎಬ್ಬಿಸಿ ನಿಲ್ಲಿಸಿದ್ದು ಪ್ರತಿಪಕ್ಷ ಜೆಡಿಎಸ್;  ದೊಡ್ಡ ಪ್ರತಿಪಕ್ಷ ಕಾಂಗ್ರಸ್, ಇದಕ್ಕೆ ಚಿಕ್ಕದಾಗಿ ಎರಡನೇ ಹಿಮ್ಮೇಳ - Second fiddle - ಬಾರಿಸಿತು. ಆದರೆ ಆ ಕಾಲಚೆಂಡನ್ನು ನಿರ್ಣಾಯಕವಾಗಿ Self-goalನತ್ತ ಒದ್ದೊಯ್ದದ್ದು ಆಡಳಿತ ಪಕ್ಷದ ಭಿನ್ನಮತದವರೇ! ಯಾವ ಅದೃಷ್ಟವೋ, ಯಡಿಯೂರಪ್ಪನವರ ಮು. ಮಂ ಸ್ಥಾನ ಉಳಿದುಹೋಯಿತು! (ಬಾರದಿತ್ತು ಎನ್ನುವುದು ಭಾವವಲ್ಲ!)


                ಒಂದು ಅಗ್ನಿಪರೀಕ್ಷೆಯಿಂದ, ಅಂತೂ ಕಿಡಿಹಾರಿ, ತಪ್ಪಿಸಿಕೊಂಡುಬಂದಿರುವ ಯಡಿಯೂರಪ್ಪನವರು ಪುತ್ರಪೌತ್ರಾದಿ ಬಂಧು-ಬಾಂಧವರನ್ನು ಆಡಳಿತದ ಆಯಕಟ್ಟಿನಿಂದ ಅಟ್ಟಿಬಡಿಯುವ ಕಾಯಕ ನಿರತರಾಗಿದ್ದಾರೆಂದು ಪತ್ರಿಕೆಗಳು ಬರೆಯುತ್ತಿವೆ. ಸರಿಯೇ. ಆದರೆ ಇದೇ ಎಚ್ಚರಿಕೆಯನ್ನೇ ಅವರು ಗುರು-ವಿರಕ್ತ ಪೀಠಾಧಿಪತಿಗಳ ವಿಷಯದಲ್ಲೂ ತೆಗೆದುಕೊಳ್ಳುವುದು ಒಳ್ಳೆಯದೇನೋ. ಯಾರಿಗೆ ಗೊತ್ತು, ಮಾಯೆ, ಯಾರನ್ನು ಯಾವ ಕಾಲದಲ್ಲಿ ಯಾವ ರೂಪದಲ್ಲಿ ಸುತ್ತಿಕೊಳ್ಳುವುದೋ?!   

Rating
No votes yet

Comments