ಮಂಜು ಮುಸುಕಿದ ಮುಂಜಾವಲಿ
ಕವನ
ಮಂಜು ಮುಸುಕಿದ ಚಳಿ ಚಳಿ ಮುಂಜಾವಿನಲಿ..
ಹೂವಿನ ಪದರವ ಹಾಸಿದ ರಸ್ತೆಯ ಮೇಲೆ ನೀ ನಡೆದು ಬರುವಾಗ..
ಮಿಂಚೊಂದು ಹರಿದು ನನ್ನೊಳಗೆ ನನ್ನ ನಾ-
- ಮರೆತು ಹೋದೆ ಚೆಲುವೆ..
ಮೀನಿನಂಥ ನಿನ್ನ ಸುಂದರ ನಯನಗಳು..
ಸಂಪಿಗೆಯಂಥ ನಿನ್ನ ನೀಳ ನಾಸಿಕ...
ಮಧು ತುಂಬಿದ ಕೆಂಬಣ್ಣದ ಅಧರಗಳು..
ಆಗಷ್ಟೇ ಮಿಂದು ನಳ ನಳಿಸುತ್ತಿರುವ ನೀಳ ಕೇಶರಾಶಿ
ಬಾನಿಂದ ಬುವಿಗೆ ಬಂದಿರುವ ಅಪ್ಸರೆಯಾ ನೀ..
ಅಂದ ಚೆಂದದ ಪ್ರತಿಬಿಂಬ ನೀನು...
ಪದಗಳ ಕೊರತೆಯಿದೆ ನಿನ್ನಂದವ ಹೊಗಳಲು..
ಮರುಳಾದೆ ನಾ ನಿನ್ನ ಸ್ನಿಗ್ಧ ಸೌಂದರ್ಯಕೆ..
ಮಂಜು ಮುಸುಕಿದ ಮುಂಜಾವಲಿ ನಾ ಕಳೆದು ಹೋದೆ
ನಿನ್ನಂದವ ಕಂಡು...
Comments
ಉ: ಮಂಜು ಮುಸುಕಿದ ಮುಂಜಾವಲಿ
In reply to ಉ: ಮಂಜು ಮುಸುಕಿದ ಮುಂಜಾವಲಿ by kamath_kumble
ಉ: ಮಂಜು ಮುಸುಕಿದ ಮುಂಜಾವಲಿ
ಉ: ಮಂಜು ಮುಸುಕಿದ ಮುಂಜಾವಲಿ
In reply to ಉ: ಮಂಜು ಮುಸುಕಿದ ಮುಂಜಾವಲಿ by asuhegde
ಉ: ಮಂಜು ಮುಸುಕಿದ ಮುಂಜಾವಲಿ
ಉ: ಮಂಜು ಮುಸುಕಿದ ಮುಂಜಾವಲಿ
ಉ: ಮಂಜು ಮುಸುಕಿದ ಮುಂಜಾವಲಿ
ಉ: ಮಂಜು ಮುಸುಕಿದ ಮುಂಜಾವಲಿ
ಉ: ಮಂಜು ಮುಸುಕಿದ ಮುಂಜಾವಲಿ
In reply to ಉ: ಮಂಜು ಮುಸುಕಿದ ಮುಂಜಾವಲಿ by ksraghavendranavada
ಉ: ಮಂಜು ಮುಸುಕಿದ ಮುಂಜಾವಲಿ