ತಲೆಗೊಂದು ಮೆಮೋರಿ ಕಟ್ಕೊಂಡ್ರೆ...
ಲೈಫಂದ್ರೇ ಹಿಂಗ... ಏನೋ ಬರೆಯೋಕ್ ಐಡಿಯ ಹಾಕಿರ್ತೀವಿ, ಅದು ತಲೆಯೊಳಗ್ ಇರತ್ತೆ ಅನ್ಕೊಂಡಿರ್ತೀವಿ - ಕೊನೆಗ್ ನೋಡಿದ್ರೆ ಅದು ಒಂದ್ ಚೂರು ಜಾಡೂ ಬಿಡ್ದೆ ಮಾಯ ಆಗಿರತ್ತೆ.
ಒಂದು ಬಹಳ ಒಳ್ಳೆಯ ಲೇಖನ ಬರೆದ ನೆನಪು, ಆದರೆ ಅದೆಲ್ಲೂ ಕಾಣದು. ಬಹುಶಃ ನೆನಪಿನಲ್ಲಿ ಬರೆದದ್ದು, ಕನಸಿನಲ್ಲಿ ಬರೆದದ್ದು. ನೊಬೆಲ್ ಪ್ರೈಸ್ ಬರುವಂತಹ ಆರ್ಟಿಕಲ್ ಅದು! ಹಾಳಾದ್ದು ನೆನಪಿಗೆ ಬರುತ್ತಿಲ್ವೆ.
ಬರೆಯೋಕೆ ಐಡಿಯಗಳು ಬರೋದೇ ಕಷ್ಟ - ಹಾಳಾದ್ದವು ಮಲ್ಕೊಳ್ಳೋಕ್ ಹೊರಟಾಗ್ಲೇ ಬರುತ್ವೆ. ಬೆಳಗಾಗೋ ಅಷ್ಟ್ರಲ್ಲಿ ಮಾಯ ಆಗಿರುತ್ವೆ.
ಎಷ್ಟೆಲ್ಲಾ information overloadಉ, ಎಷ್ಟೆಲ್ಲಾ ಇ-ಮೇಯ್ಲು - ೧ ವರ್ಷ ೧೦ ವರ್ಷಗಳಂತೆ ತಲೇಲಿದ್ರೆ ಕಳೆದದ್ದು ಒಂದೇ ತಿಂಗಳಿನಂತಿರುತ್ತೆ. ಒಂದೆಲಗ ತಿನ್ನು - ತಲೇಲಿ ಎಲ್ಲಾ ಉಳಿಯುತ್ತೆ ಅಂದಾರು ಹಿರಿಯರು. ಒಂದೆಲಗ ತಿಂದದ್ದು ಒಂದೇ ಎರಡೇ - ತಲೇಲಿ ಉಳಿಯೋದು ಮಾತ್ರ ಮುಂಚಿನ ಹಾಗೇ.
ಸರಿ, ತಲೇಗ್ ಒಂದ್ ಮೆಮೋರಿ ಕಟ್ಕೊಂಡ್ ಬಿಟ್ರೆ? ([:http://en.wikipedia.org/wiki/DDR_SDRAM|1GB DDR] ಸಾಕು ನಮ್ ಭಾರತದ್ ಲೆವೆಲ್ಲಿಗೆ)
ಮೆಮೋರಿ ಹೆಚ್ಚಾಗಬಹುದು - ಸತ್ಯಜಿತ್ ರೈಗಳ ಸೈನ್ಸ್ ಫಿಕ್ಷನ್ ನಂಬ್ಕೊಂಡ್ರೆ. ಅದು ನಿಜವಾಗಲೂ ಕೆಲಸವೂ ಮಾಡಬಹುದು - star wars ನಿಜವಾದ್ರೆ. ಆದರೆ ಅದೂ ನೆಮ್ಮದಿ ಕೊಟ್ಟೀತೇ? ಹಾಳಾದ್ದು ಅದನ್ನೋಡಿಸೋದಕ್ಕೊಂದು ಆಪರೇಟಿಂಗ್ ಸಿಸ್ಟಮ್ ಬೇಕು, ಅದರಲ್ಲೊಂದು ಮೈಕ್ರೊಸಾಫ್ಟ್ ಬರತ್ತೆ - ಅಲ್ಲೊಂದು ಹೋರಾಟ ಮಾಡಬೇಕಾಗತ್ತೆ - ನಮ್ಮ ಸ್ವಾತಂತ್ರ್ಯ, ನಮ್ಮ ಪ್ರೈವೆಸಿ ಕಾಪಾಡಿಕೊಂಡು ಹೋಗಲು. ಈ ಹೋರಾಟಗಳ ಮಧ್ಯೆ ಯಾರೋ ನಿಮ್ಮ ಮೆಮೋರಿ ಹ್ಯಾಕ್ ಮಾಡಿಬಿಟ್ರೆ?