ಕಿಚ್ಚು :: ಭಾಗ - ೪
ಕಿಚ್ಚು ಭಾಗ - 4
ಹಿಂದಿನ ಕಂತು : http://sampada.net/blog/kamathkumble/03/12/2010/29319
೮
ಮೂವತ್ತು ದಿನದ ಬಳಿಕ ಅವಳನ್ನು ಕಾಣಲು ಮನ ಮಿಡಿಯುತಿತ್ತು, ಟ್ರೈನ್ ಅದೇ ವೇಗದಲ್ಲಿ ಊರಿನಿಂದ ಊರು ಸೇರುತ್ತಿತ್ತು.ಅವಳು ಇರುವ ಊರು ತಲುಪುವಲ್ಲಿ ವರೆಗೆ ಯಾವುದೇ ಚಿಂತೆ ಇರಲಿಲ್ಲ, ಆದರೆ ಊರು ಹತ್ತಿರವಾಗುತಿದ್ದಂತೆ ಮನದಲ್ಲಿನ ದುಗುಡ ಹೆಚ್ಚುತ್ತಾ ಹೋಯಿತು.ಅವಳ ಮನೆಯವರನ್ನು ಎದುರಿಸುವ ತಾಕತ್ತು ಈ ೧೮ ರ ಹರೆಯದ ಹೃದಯದಲ್ಲಿರಲಿಲ್ಲ, ಅವಳನ್ನು ಓಡಿಸಿಕೊಂಡು ಹೋಗುವ ಬಗ್ಗೆಯೂ ನಾನು ಈ ಹಿಂದೆ ಆಲೋಚಿಸಿರಲಿಲ್ಲ, ಆದರೆ ಇವತ್ತು ನಾನು ಈ ಕಾರ್ಯಕ್ಕೆ ಕೈ ಹಾಕದಿದ್ದರೆ ನಾನು ಅವಳನ್ನು ಶಾಶ್ವತವಾಗಿ ಕಳಕೊಳ್ಳುದರಲ್ಲಿ ಯಾವುದೇ ಸಂಶಯ ವಿರಲಿಲ್ಲ, ಅವಳನ್ನು ಕಳಕೊಂಡು ಬದುಕಲಾಗದು ಎಂಬ ವಿಚಾರ ಮನದಲ್ಲಿ ಮನೆ ಮಾಡಿತ್ತು, ಇದರೊಂದಿಗೆ ಗೆಳೆಯರು, ಸಿನೆಮಾ ನೀಡಿದ ಪ್ರೇರಣೆ ಅವಳ ಮನೆತನಕ ನನ್ನನ್ನು ಎಳಕೊಂಡು ಹೋಯಿತು.
ಗೊತ್ತಿಲ್ಲದ ಉರಿನಲ್ಲಿ ಗೊತ್ತಿರುವ ಪ್ರೇಮಿಯನ್ನು ಹುಡುಕುವ ಸುಖ ನಮ್ಮ ಒಳಗಿರುವ ಆತ್ಮವನ್ನು ಹುಡುಕುವಂತೆ ಎಂಬಮಾತು ನನಗೆ ಎಳೆ ಎಳೆ ಯಾಗಿ ಗೊತ್ತಾಗುತ್ತಿತ್ತು. ಅಂತು ಇಂತೂ ಅವಳು ಹೇಳಿದ ವಿಶಾಖ ಪಟ್ಟಣಂ ತಲುಪಿದೆ, ಅವಳು ಹೇಳಿದ ಸ್ಟೀಲ್ ಫ್ಯಾಕ್ಟರಿ ಯ ಕೊಟ್ರರರ್ಸ್ ಕೇಳಿ ಹುಡುಕೊಂಡೆ, ದೊಡ್ಡದಾದ ಒಂದು ಪಾರ್ಕ್ ಬದಿಯಲ್ಲೇ ಕಾಣುತಿತ್ತು, ಅಲ್ಲಿ ತಾನು ಸಂಜೆ ೪- ೬ ರ ವರೆಗೆ ವಿಹಾರಕ್ಕೆ ಬರುವೆನೆಂದು ತಿಳಿಸಿದ್ದಳು ನನ್ನ ನಲ್ಲೆ ಆ ಪಾರ್ಕ್ ತಲುಪಿ ನನ್ನ ಕಣ್ಣ ಒಳಗಿನ ಕಣ್ಣ ನೋಡುವ ಆಸೆ ನನ್ನ ಕಾಂತಿ ಕಳಕೊಂಡ ಕಣ್ಣಿಗೆ ಕಾಡುತ್ತಾ ಇತ್ತು.
ಸಮಯ ಮದ್ಯಾಹ್ನದ ೧೨ ಆಗಿರಬಹುದು ಆದರೆ ಸರಿಯಾದ ಸಮಯ ನೋಡುವ ಎಂದರೆ ಕೈಯಲ್ಲಿ ಕೈಗಡಿಯಾರ ವಿರಲಿಲ್ಲ. ಅದನ್ನು ಊರಿಂದ ಹೊರಡ ಬೇಕಾದರೆ ೨೫೦ ರುಪಾಯಿಗೆ ನನ್ನ ಗೆಳೆಯನಿಗೆ ಒತ್ತೆ ಇಟ್ಟು ಬಂದಿದ್ದೆ.೮೯೯ ರುಪಾಯಿಯ ಆ ಕೈಗಡಿಯಾರವನ್ನು ಕಳೆದ ತಿಂಗಳು ನನ್ನ ಹುಟ್ಟಿದಹಬ್ಬದ ಉಡುಗೊರೆಯಾಗಿ ನೀಡಿದ್ದಳು ನನ್ನ ನಲ್ಲೆ, ಆದರೆ ಅದು ನನಗೆ ೮೦೦೦ ರುಪಾಯೀಗಿಂಥ ಮಿಗಿಲಾದ ಉಡುಗೊರೆ ಯಾಗಿತ್ತು, ಕೈಯಲ್ಲಿ ಒಟ್ಟು ಇದ್ದ ಹಣ ೨೧೩ ರುಪಾಯೀ ಮತ್ತು ೮೦ ಪೈಸೆ, ಹೋಗಿ ಬರುವ ಖರ್ಚು ಎಲ್ಲ ಸೇರಿ ೫೦೦ ರುಪಾಯಿ ಆಗಬಹುದು ಎಂದು ಅಂದಾಜು ಹಾಕಿದ್ದೆ, ಆದರೆ ಕೈಯಲ್ಲಿ ಅಷ್ಟು ಇಲ್ಲದ ಕಾರಣ ಕೈಗಡಿಯಾರ ಒತ್ತೆ ಇಡಬೇಕಾಗಿ ಬಂತು, ಗೆಳೆಯ ಪೂರ್ತಿ ೯೦೦ ಕೊಡುತ್ತೇನೆ ಆದರೆ ಆ ಗಡಿಯಾರ ಅವನಿಗೆ ಕೊಡಬೇಕು ಅಂದಿದ್ದ, ಅವನಿಗೆ ಅದನ್ನು ಶಾಶ್ವತವಾಗಿ ಕೊಡಲು ಮನಸಿಲ್ಲದ ಕಾರಣ ಒತ್ತೆ ಇಟ್ಟು ಹಣ ಪಡಕೊಂಡಿದ್ದೆ.
ಅಲ್ಲೇ ಪಕ್ಕದಲ್ಲಿದ್ದ ಸಣ್ಣ ಅಂಗಡಿಯಲ್ಲಿ ಒಂದು ಬ್ರೆಡ್ ತಕ್ಕೊಂಡು ಬಂದೆ, ಪಾರ್ಕಿನ ಗೇಟ್ ಬದಿಯ ಕಲ್ಲಿನ ಮಂಚದ ಮೇಲೆ ನಾ ಕುಳಿತು ಅವಳು ಬರುವ ದಾರಿಯನ್ನು ನೋಡುತ್ತಾ ಇದ್ದೆ, ಮಂಗಳೂರಿನಿಂದ ಇಲ್ಲಿ ವರೆಗೆ ಪ್ರಯಾಣದಲ್ಲಿ ಒಂದು ಟೀ ಕುಡಿದಿದ್ದೆ, ಆದರೂ ಈಗ ಹಸಿವಾಗುತ್ತಿರಲಿಲ್ಲ, ಬ್ರೆಡ್ ಹಾಗೆ ತೆಗೆದು ಬಾಗ್ ಒಳಗೆ ಇಟ್ಟೆ, ಪಯಣದಲ್ಲಿ ನಿದ್ದೆ ಬಂದಿರಲಿಲ್ಲ, ಸುಸ್ತಾದ ಕಾರಣ ನೆತ್ತಿಯ ಮೇಲಿನ ಬಿಸಿಲು ಲೆಕ್ಕಿಸದೆ ಕುಂತ ಕಲ್ಲ ಬೆಂಚಿನಲ್ಲೇ ನಿದ್ದೆ ಹತ್ತಿ ಬಿಟ್ಟಿತು.ಮತ್ತೆ ಎಚ್ಚರ ಆದಾಗ ೭ ಗಂಟೆ ದಾಟಿತ್ತು, ಮೆಲ್ಲನೆ ಕತ್ತಲು ಕವಿಯುತಿದ್ದರೆ, ಹೊರಗಿನ ಗಾರ್ಡ್ ಬಂದು ನನ್ನನ್ನು ಎಬ್ಬಿಸಿ ಗೊತ್ತಿಲ್ಲದ ತೆಲುಗಿನಲ್ಲಿ ಏನೋ ಹೇಳಿದ, ಅವ ಅಂದದ್ದು ಹೊರ ಹೋಗಿ ಗೇಟ್ ಹಾಕುವ ಸಮಯ ಆಯಿತು ಎಂಬುದನ್ನು ಆಗಲೇ ಹೊರ ಹೋಗುತಿದ್ದ ಜನರಿಂದ ತಿಳಕೊಂಡೆ. ಒಳ್ಳೆ ಸಮಯಕ್ಕೆ ನಿದ್ದೆ ಹತ್ತಿತಲ್ಲ ಎಂದು ನಾನು ನನ್ನೊಳಗೆ ಕೊರಗಿದೆ.
ಹಾಗೆ ಎದ್ದು ಪಕ್ಕದ ಟೀ ಅಂಗಡಿಯಲ್ಲಿ ಒಂದು ಟೀ ೧ ರುಪಾಯಿ ೨೫ ಪೈಸೆ ಕೊಟ್ಟು ಪಡಕೊಂಡೆ, ಇನ್ನೇನೋ ಒಂದು ಗುಟುಕು ನನ್ನ ಗಂಟಲಲ್ಲಿ ಇಳಿಯಬೇಕು ಎನ್ನುವಷ್ಟರಲ್ಲಿ ನನ್ನ ಹಿಂದೆ ಯಾರೋ ಕರೆದಂತೆ ಆಯಿತು , ಹಿಂದೆ ತಿರುಗಿ ನೋಡಿದೆ ಅದೇ ವಸುಂದರ ...
ತುಂಬಾ ಬದಲಾವಣೆ ಬಂದಿತ್ತು ಅವಳ ನೋಟದಲ್ಲಿ, ಕಾಂತಿಯುತ ಕಣ್ಣುಗಳು ಕಾಂತಿ ಕಳಕೊಂಡಿದ್ದವು, ಮೈಗೆ ಹಾಕಿದ್ದ ಬಟ್ಟೆ ಎರಡು ಸುತ್ತು ಸಡಿಲ ವಾಗಿತ್ತು, ಮಂಗಳೂರು ಬಿಟ್ಟ ಮೇಲೆ ಆಕೆ ತನ್ನನ್ನು ತಾನು ಶಿಕ್ಷಿಸಿ ಹೀಗಾಗಿದ್ದಳು,ಆದರೂ ನನ್ನನ್ನು ನೋಡಿದಂತೆ ಅವಳು ಮುಗಿಲು ಬಂದಾಗಿನ ನವಿಲಂತೆ ಸಂಭ್ರಮಿಸುತಿದ್ದಳು.ನನ್ನ ಕೈಯಲ್ಲಿದ್ದ ಟೀ ಗ್ಲಾಸ್ಸನ್ನು ತೆಗೆದು ಹಾಗೆಯೇ ತನ್ನ ಆ ಮಧುಭರಿತ ತುಟಿಯ ಮೇಲೆ ಇತ್ತು ಒಂದು ಗುಟುಕು ಸವೆಯುತ್ತಾ ಅವಳ ಸೌಂದರ್ಯದಲ್ಲಿ ಲೀನ ನಾಗುತಿದ್ದ ನನ್ನ ಕಣ್ಣ ಗುಡ್ಡೆ ನೋಡುತಿದ್ದಳು. ಪುನಃ ಆ ಗ್ಲಾಸ್ಸನ್ನು ನನ್ನ ಕೈಯಲ್ಲಿತ್ತು ಕುಡಿ ಎಂದಳು.
ಆ ಟೀ ಇನ್ನೂ ಹೆಚ್ಚಿನ ಸಿಹಿ ಆಗಿತ್ತು. ಕುಡಿಯುತಿದ್ದಂತೆ, "ಓಡಿ ಹೋಗುವಾ... ಯಾರ ಕೈಗೆ ಸಿಗದಂತೆ ನಮ್ಮ ಕನಸಿನ ಊರಿಗೆ ..."
ಏನು ಹೇಳ ಬೇಕೋ ತೋಚಲಿಲ್ಲ. ಅವಳು "ಬೇಗ ಬೇಗ , ಇನ್ನು ಇಲ್ಲಿದ್ದರೆ ತೊಂದರೆ ತಪ್ಪಿದಲ್ಲ, ಹೋಗೋಣ ..."
ನಾನು ಸರಿ ಎಂದೆ, ನನ್ನ ಮನದಲ್ಲೂ ಓಡಿ ಹೋಗುವಾ ಆಲೋಚನೆ ಇದ್ದುದರಿಂದ ಬೆಳಗ್ಗೆನೇ ಹಿಂತಿರುಗಲು ಸೂಕ್ತ ಟ್ರೈನ್ ಯಾವುದೆಂದು ಪಟ್ಟಿ ಮಾಡಿದ್ದೆ, ಅವಳಲ್ಲಿ "೮ ಕ್ಕೆ ಟ್ರೈನ್ ಇದೆ,ಅದರಲ್ಲೇ ಹೋಗೋಣ ..."
ಅವಳು "ಎಗಲೇ ೭ :೩೦ ಆಯಿತು, ಮೊದಲು ಊರು ಬಿಡೋಣ ಆ ಮೇಲೆ ಮುಂದಿನದ್ದು ಆಲೋಚಿಸೋಣ ... " ಅಂದಳು
ನಾನು "ಸರಿ .." ಅಂದೆ.
ಪಕ್ಕದಲ್ಲಿನ ಒಬ್ಬ ಸೈಕಲ್ ಗಾಡಿಯವನಲ್ಲಿ ೧ ರೂ ೨೦ ಪೈಸೆಗೆ ಒಪ್ಪಂದ ಮಾಡಿ ಕೊಂಡೆವು, ಸೈಕಲ್ ಮುಂದೆ ಮುಂದೆ ಹೋಗುತಲಿತ್ತು, ನಮ್ಮ ಗುರಿ ಮಾತ್ರ ನಮಗೆ ಗೊತ್ತಿರಲಿಲ್ಲ, ಏನಿದ್ದರೂ ಬೆಂಗಳೂರಿಗೆ ಹೋಗಿ ಅಲ್ಲಿಂದ ಮಂಗಳೂರು ಸೇರುವುದೆಂದು ಕೊಂಡಿದ್ದೆವು.
ನನ್ನ ತೊಡೆಯಲ್ಲಿ ಮಲಗಿ ಅವಳು ಒಂದೊಂದೇ ಹಿಂದಿನ ಪುಟ ಬಿಡಿಸುತ್ತಾ ಹೋಗುತಿದ್ದಳು. ಮೆಲ್ಲನೆ ಅವಳ ಕಣ್ಣಿನಿಂದ ಮುತ್ತ ಹನಿ ಹಾಗೆ ಜಾರುತ್ತಿತ್ತು, ಮನಸ್ಸು ಗಟ್ಟಿಯಾಗಿ ಅವಳನ್ನು ತಬ್ಬಿ ಕೊಂಡು ಮುತ್ತಿಡು ಅನ್ನುತಿತ್ತು ಆದರೆ ಸೈಕಲ್ ನ ಟ್ರಿನ್ ಟ್ರಿನ್ ಬೇಡ ಎಂದು ಎಚ್ಚರಿಸುತಿತ್ತು. ರೈಲ್ವೆ ಸ್ಟೇಷನ್ ತಲುಪಿದೆವು, ೧೮೦ ರೂ ತೆತ್ತು ಬೆಂಗಳೂರಿಗೆ ೨ ದ್ವಿತಿಯಧರ್ಜೆ ಯ ಟಿಕೆಟ್ ಪಡಕೊಂಡೆ.
ಅವಳು ಮನೆಯಿಂದ ಖಾಲಿ ಕೈಯಲ್ಲೇ ಬಂದಿದ್ದಳು , ನನ್ನದೊಂದು ಪುಟ್ಟ ಬ್ಯಾಗ್ ಮಾತ್ರ ತೊಂದರೆ ಆಗದು ಎಂದು ಕೊಂಡೆ. ಆ ಕಂಪಾರ್ಟ್ಮೆಂಟ್ ಹತ್ತಲು ೯೦ ಜನರ ಧರ್ಜೆ ಯಲ್ಲಿ ಬಾರೋ ಬರ್ರಿ ೧೩೦ ಕ್ಕೂ ಹೆಚ್ಚು ಜನ ಇದ್ದರು. ಇಲ್ಲಿವರೆಗೆ ಟ್ರೈನ್ ಹತ್ತದ ಆ ಸುಂದರಿಗೆ ನಾನು ಪಯಣದ ರುಚಿ ತಿನ್ನಿಸುವಂತೆ ಮಾಡಿದೆ. ಟ್ರೈನ್ ಹಗೆ ಪ್ಲಾಟ್ಫಾರ್ಮ್ ಬಿಡಲು, ನಾವಿಬ್ಬರು ನಿಂತಿದ್ದ ಎದುರಿನ ಸೀಟ್ ನವ ಮೇಲಾನೆ ಒಳಗಿದ್ದ ಇಸ್ಪೀಟ್ ತೆಗೆದು ಆಟ ಶುರು ಹಚ್ಚಿ ಕೊಂಡ, ಇನ್ನೊಬ್ಬ ಒಳಗಿದ್ದ ಬಾಟಲ್ ತೆಗೆದು ಕಂಪಾರ್ಟ್ಮೆಂಟ್ ಅನ್ನೇ ಬಾರ್ ಮಾಡಿ ಬಿಟ್ಟ. ನನಗೆ ಅಸಹ್ಯ ಎನಿಸಿತು. ಟ್ರೈನ್ ಪೂರ್ತಿ ಪುರುಷರೇ, ಇವಳನ್ನು ಎಲ್ಲಿ ಕುಳ್ಳಿಸುವುದು ಎಂಬ ಚಿಂತೆ ಮನದಲ್ಲಿ ಹೆಚ್ಚ ತೊಡಗಿತು, ಅವಳನ್ನು ಕಾಪಾಡುವ ಜವಾಬ್ಧಾರಿಯನ್ನು ನಾನು ಸಂಪೂರ್ಣವಾಗಿ ತೆಗೆದುಕೊಂಡಾಗಿತ್ತು.
ಟ್ರೈನ್ ಹದವಾಗಿಯೇ ಹೋಗುತಿತ್ತು, ಆದರೂ ನಮ್ಮ ಬಳಿಯಲ್ಲಿದ್ದ ವ್ಯಕ್ತಿ ಜೋರಾಗಿಯೇ ವಾಲುತಿದ್ದ, ಟ್ರೈನ್ ಮೇಲೆ ದೂರು ಹಾಗಿ ನನ್ನ ಚೆಲುವೆಯ ಸ್ಪರ್ಶ ಸುಖ ಕಾಣಲು ಬಯಸುತಿದ್ದ, ಎರಡು ಮೂರು ಬಾರಿ ಮುಟ್ಟಲು ಪ್ರಯತ್ನಿಸಿದ, ತನ್ನ ಚಪಲ ಆದರೂ ತೀರದೆ ಅವಳನ್ನು ಹಿಂದಿನಿಂದ ಕೈಯಿಂದ ಬಳಸಿಕೊಳ್ಳಲು ನೋಡಿದ, ಇಲ್ಲಿವರೆಗೆ ಸುಮ್ಮನಿದ್ದ ಅವಳು ಹಿಂದೆ ತಿರುಗಿ ಅವನ ಕೆನ್ನೆಗೆ ಬಾರಿಸಿದಳು, ಯಾರೂ ಸಹಾಯಕ್ಕೆ ಬರಲಿಲ್ಲ. ಅವಳ ರಕ್ಷೆ ಅವಳೇ ಮಾಡಿದಾಗ ನಾನು ಎಷ್ಟು ನಾಲಾಯಕ್ಕು ಎಂದು ನನಗೆ ನನ್ನಲ್ಲೇ ನಾಚಿಕೆ ಹುಟ್ಟಿತು, ಮನದಲ್ಲಿನ ಜ್ವಾಲಾಗ್ನಿ ಅವನನ್ನು ಕೊಚ್ಚಿ ಹಾಕುವಷ್ಟು ಹೋಗೆ ಉಗುಳುತಿತ್ತು,
ಅವನ ಕತ್ತನ ಪಟ್ಟಿ ಹಿಡ ಡು ಎರಡು ಬಾರಿಸಿದೆ, ಅವನು ನನ್ನಲ್ಲಿ "ಎಷ್ಟು ರುಪಾಯಿಗೆ ಪಡಕೊಂಡೆ ..? ನಾನು ನೀನು ಹೇಳಿದಷ್ಟು ಕೊಡುತ್ತೇನೆ ೧೦ ನಿಮಿಷಕ್ಕೆ ಸಹಕರಿಸು ... "ಅಂದ.
ಕತ್ತು ಹಿಸುಕಿ ಸಾಯಿಸುವ ಎನ್ನುವಷ್ಟು ಕೋಪ ಬಂತು, ಟ್ರೈನ್ ಮೇಲಾನೆ ಸ್ಲೋ ಆಯಿತು, ಎರಡನೇ ಸ್ಟೇಷನ್ ತಲುಪಿದಾಗ ಹಿಡಿ ಕಂಪಾರ್ಟ್ಮೆಂಟ್ ನಲ್ಲಿ ಗದ್ದಲ ನೋಡಿ, ಸ್ಟೇಷನ್ ನಲ್ಲಿನ ಗುಸ್ತಿನ ಪೋಲಿಸ್ ಒಳ ಬಂದು ಸೇರಿದ ಜನರನ್ನು ಚದುರಿಸಿ , ಅವನನ್ನು ಹಿಡಿದು ಕೆಳಗೆ ದಬ್ಬಿದರು, ನಮ್ಮಲ್ಲಿ ನಮ್ಮಿಬ್ಬರ ಕುರಿತು ವಿಚಾರಿಸಿದರು. ಅವರಿಂದ ತಪ್ಪಿಸಿ ಕೊಳ್ಳಲು ನಾವು ಅಣ್ಣ ತಂಗಿ ಸ್ಲೀಪೆರ್ ಕ್ಲಾಸ್ನಲ್ಲಿ ಸೀಟ್ ಸಿಗದ ಕಾರಣ ಇಲ್ಲಿ ಪ್ರಯಾಣಿಸುತಿದ್ದೇವೆ ಅಂದ್ವಿ. ಅವರು ಈ ಬಗ್ಗೆ ಕಂಪ್ಲೈಂಟ್ ಬರೆದು ಟ್ರೈನ್ ಗೆ ಹಸಿರು ನಿಶಾನೆ ತೋರಿಸಿದರು.
ಒಳಗಿನ ಎಲ್ಲಾ ವಾತಾವರಣ ತಿಳಿಯಾಯಿತು, ಹಿಂದಿನ ಸ್ಟೇಷನ್ ನಲ್ಲಿ ಹತ್ತಿದ ದಂಪತಿಗಳು ನನ್ನ ಚೆಲುವೆ ಪಕ್ಕದಲ್ಲೇ ಕುಳಿತದ್ದು ನನಗೆ ಇನ್ನು ಧೈರ್ಯ ತುಂಬಿಸಿತು.

೯
ಬೇರೆ ಯಾವುದೇ ತೊಂದರೆ ಇಲ್ಲದೆ ಬೆಂಗಳೂರು ತಲುಪಿದೆವು, ಉರು ಹೊಸತು, ಈ ಉರಿನಲ್ಲಿ ನನ್ನವರೆಂದು ಇರುವವರು ನನ್ನ ದೊಡ್ಡಮ್ಮನ ಮಗ ಮಾತ್ರ,ಅವನ ರೂಂ ನಲ್ಲಿ ಆಗಲೇ ಇಬ್ಬರ ಬಾಡಿಗೆಯಲ್ಲಿ ಮನೆಯಜಮಾನನ ಕಣ್ಣು ತಪ್ಪಿಸಿ ೪ ಜನ ವಾಸಿಸುತಿದ್ದರು,ಇನ್ನು ನಮ್ಮ ಪುಟ್ಟ ಸಂಸಾರಕ್ಕೆ ಜಾಗ ವಿರಲಿಲ್ಲ. ಆದರು ಅವನು ಎರಡು-ಮೂರು ವಾರದ ಮಟ್ಟಿಗೆ ಸಹಕರಿಸುವುದಾಗಿ ಹೇಳಿದ. ಇನ್ನು ಬೆಂಗಳುರನ್ನೇ ತನ್ನ ಮನೆ ಮಾಡಿ ಇವಳನ್ನು ಸುಖವಾಗಿಡಬೇಕು ಎಂದು ಅಂದು ಕೊಂಡೆ.
ಇಬ್ಬರು ಮದುವೆ ಆಗುವ ಅಂದು ಕೊಂಡೆವು, ರಿಜಿಸ್ಟರ್ ಮದುವೆ ಆಗುವುದೇ ಎಲ್ಲದಕ್ಕೂ ಸೂಕ್ತ ಎಂಬ ವಿಚಾರಕ್ಕೆ ಬಂದೆವು, ಎಲ್ಲ ವ್ಯವಸ್ತೆ ಮಾಡಿ ರಿಜಿಸ್ತರಿ ಆಫಿಸ್ ತಲುಪಿದೆವು, ಅಲ್ಲಿ ಅವರು ಅವಳಲ್ಲಿ ಅವಳ ಜನ್ಮದಿನ ಕೇಳಿದಾಗ ೧೮ ದಾಟಿದ ಕಾರಣ ಸಮ್ಮತಿ ನೀಡಿದರು, ನನ್ನಲ್ಲಿ ಕೇಳಿದಾಗ ನನಗೂ ೧೮ ವರ್ಷ ಆಗಿದೆ ಎಂದು ಹೇಳಲು ಆಫಿಸರ್ ಮದುವೆಗೆ ೨೧ ವರ್ಷ ಖಡ್ಡಾಯ ಅಂದರು, ನಾವು ಮೂವರು ಮತ್ತು ಬಾಡಿಗೆಗೆ ಬಂದ ೨ ಜೊತೆ ಅಪ್ಪ ಅಮ್ಮ ಪೆಚ್ಚು ಮೊರೆ ಹಾಕಿ ವಾಪಸ್ ಬಂದು ಬಿಟ್ಟೆವು, ಕೆಲಸ ಮುಗಿಯದಿದ್ದರು ಆ ಬಾಡಿಗೆ ಅಪ್ಪ-ಅಮ್ಮಂದಿರು ನಮ್ಮಿಂದ ೧೦೦ ರೂ ಕಿತ್ತು ಕೊಂಡರು.
ಅಣ್ಣ ನನ್ನಲ್ಲಿ ಯಾವುದಾದರು ದೇವಸ್ತಾನದಲ್ಲಿ ಮದುವೆ ಆಗಿ ಅಲ್ಲಿ ಯಾರು ಸಾಕ್ಷಿ ಕೇಳರು, ಎಂದು ಹೇಳಿದಾಗ ಇಬ್ಬರ ಮುಖದಲ್ಲೂ ಒಂದು ಮಂದಹಾಸದ ಚಿಲುಮೆ ಮೂಡಿತು.ಸರಿ ಎಂದು ಪಕ್ಕದಲ್ಲಿನ ವಿನಾಯಕ ಸನ್ನಿದಿಯಲ್ಲಿ ಒಂದು ಅರಸಿನ ಕೊಂಬಿನೊಂದಿಗೆ ನಮ್ಮ ಸಂಭಂದ ಕಟ್ಟಿ ಕೊಂಡೆವು.ಮನೆಯನ್ನೂ ಸೇರಿದೆವು.ನಮ್ಮ ಮುಂದೆ ಮುಂದಿನ ಪ್ರೇಮಮಯ ದಿನಗಳ ಚಿತ್ರಣ ಜೀವ ತುಂಬಿ ನಲಿಯುತಿತ್ತು.
೩ ದಿನ ನಮ್ಮ ಕನಸಿನ ವ್ಯವಹಾರ ಚೆನ್ನಾಗಿಯೇ ನಡೆಯುತ್ತಿತ್ತು, ಕೈಯಲ್ಲಿ ಉಳಿದ ೧೧೮ ರುಪಾಯಿ ಊರು ಸುತ್ತುವ ಪರಿಯಲ್ಲಿ ಈ ಮೂರು ದಿನದಲ್ಲಿ ಮುಗಿದು ಹೋಯಿತು.ಇನ್ನು ನನಗೆ ಕೆಲಸ ಹುಡುಕುವುದು ಅನಿವಾರ್ಯ ವಾಗಿತ್ತು. ನನ್ನ ಓದಿಗೆ ಅಲ್ಲಿ ಹೋಟೆಲ್ ಕೆಲಸ, ಕೂಲಿ ಕೆಲಸ, ಗೆರಾಜ್ ಬಿಟ್ಟು ಬೇರೆ ಕೆಲಸ ವಿರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ ಅಂದು ಅದಕ್ಕೆ ಅಸ್ತು ಅಂದೆ. ಬೆಳಗ್ಗೆ ಎದ್ದವನೇ ಕೆಲಸದ ಹುಡುಗಾಟಕ್ಕೆ ತೊಡಗಲು ಮನೆಯಿಂದ ಹೊರ ಹೋಗುತಿದ್ದಂತೆ, ಮನೆಮುಂದೆ ಒಂದು ದೊಡ್ಡ ದಿಬ್ಬಣನೇ ಇತ್ತು, ಇದ ನೋಡಲು ಮನೆಯೊಳಗೇ ಒಮ್ಮೆಲೇ ಸೂತಕದ ಹೋಗೆ ಆವರಿಸಿತು.
ಹೊರಗೆ ವಸುಂದರನ ತಂದೆ,ತಾಯಿ, ಮಂಗಳೂರಿನ ಸಂಸದ, ಮಂಗಳೂರಿನ ಪೋಲಿಸ್ ಇನ್ಸ್ಪೆಕ್ಟರ್ ಅವಳ ಚಿಕ್ಕಮ್ಮ, ವಿಶಾಕ ಪಟ್ಟಣಂ ನ ಮಾಮ,ಮತ್ತಿಬ್ಬರು ಹೆಂಗಸರು, ಒಂದು ಕಾನ್ಸ್ಟೇಬಲ್.ಎಲ್ಲರ ಹೃದಯ ಬಡಿತ ನಿಂತು ಹೋಯಿತು.ಆ ವಿಶಾಕಪಟ್ಟಣಂ ನ ಟೀ ಅಂಗಡಿಯವನ ಕುರುಹು ಹಿಡಿದು, ರೈಲ್ವೆ ಸ್ಟೇಷನ್ ಹೋಗಿ ಅಲ್ಲಿಂದ ಮುಂದಿನ ಸ್ಟೇಷನ್ ನ ಗುಸ್ತು ಪೋಲಿಸ್ ನ ನೆರವಿನಿಂದ ನಮ್ಮ ಬೆಂಗಳೂರು ಪಯಣದಬಗ್ಗೆ ಖಾತ್ರಿ ಮಾಡಿ ನನ್ನ ಮನೆಯಲ್ಲಿ ಬೆಂಗಳೂರಿನ ಅಣ್ಣನ ರೂಂ ನ ವಿಳಾಸ ವಿಚಾರಿಸಿ ಇವತ್ತು ಇಲ್ಲಿ ಹಾಜರಾಗಿದ್ದರು.
ರಾಯರು ಮಗಳನ್ನು ಬಳಿಗೆ ಕರೆದರು "ವಸುಂದರಾ ...ನೀನು ಮಾಡಿದ್ದು ಸರಿಯೇ ...? ಹಿಡೀ ಊರಿಗೆ ಊರೇ ನನಗೆ ಗೌರವ ನೀಡುತ್ತಿತ್ತು ಆದರೆ ಇಂದು ನೀನು ಆ ಎಲ್ಲ ಗೌರವವನ್ನು ನೀರಿನಲ್ಲಿ ಹೋಮ ಮಾಡಿದಿ ...ನಾನು ನಿನಗೆ ಒಲ್ಲೆ ಎಂದು ಹೇಳಲಿಲ್ಲ , ನೀನ್ನ ಈ ರೀತಿಯ ಆತುರದ ನಿರ್ಧಾರಕ್ಕೆ ಊರಲ್ಲಿ ನನ್ನ ಎಲ್ಲಾ ಮರ್ಯಾದೆ ಕಳೆದೆ ... ನನ್ನ ಮಗಳೆಂದು ಹೇಳಿ ಕೊಳ್ಳಲು ನಾಚಿಗೆ ಆಗುತ್ತೆ ... ಇಂಥ ಮಕ್ಕಳಿರುವ ಬದಲು ನಮಗೆ ಮಕ್ಕಳಿಲ್ಲದಿದ್ದರೆ ಯಾವುದೇ ಚಿಂತೆ ಇರಲಿಲ್ಲ ... "
ಪಕ್ಕದಲ್ಲಿದ್ದ ಅವಳ ಚಿಕ್ಕಮ್ಮ "ಹೇಗಿದ್ದವಳು ಹೇಗೆ ಆಗಿದ್ದಿ ನೋಡು, ನೀನು ಮನೆಯವರಿಗೆ ಉಟ್ಟು ಬಿಸಾಡುತಿದ್ದ ಬಟ್ಟೆಗಿಂತ ಹಳೆಯ,ಕೊಳಕು ಬಟ್ಟೆ ನೀನು ತೊಟ್ಟಿರುವೆ,ಅದು ಸಹ ಅವನು ಯಾರಿಂದಲೋ ಬೇಡಿ ಕೊಟ್ಟ ಬಟ್ಟೆ ನಾಳೆ ಯಾರು ಭಿಕ್ಷೆ ಕೊಡದಿದ್ದರೆ ನೀನು ಏನು ತೊಡುತ್ತಿಯಾ..? ಹಸಿವಾಗುತ್ತದೆ ಅಂದಾಗ ಒಂದು ಬ್ರೆಡ್ ಗೆ ನೀವು ಭಿಕ್ಷೆ ಬೇಡ ಬೇಕು ,ಅದು ಸಿಗದಿದ್ದರೆ ಹಸಿದ ಹೊಟ್ಟೆಯಲ್ಲೇ ಇರಬೇಕು , ಮನೆಯಲ್ಲಿ ಬೆಳ್ಳಿ ತಟ್ಟೆಯಲ್ಲಿ ಉಂಡ ನಿನಗೆ ಈ ಹಸಿವು ಸಹಿಸ ಲಾಗುವುದೇ..?"
ಅವರು ನನ್ನಲ್ಲಿ ತಿರುಗಿ "ಇವಳನ್ನು ಬಿಟ್ಟು ಬಿಡು, ಇನ್ನೂ ನೀನು ನಿನ್ನ ಜೀವನ ರೂಪಿಸಿಲ್ಲ ,ಅವಳಿಗಾಗಿ ನೀನು ಶಿಕ್ಷಣ ಜೀವನ ಎಲ್ಲಾ ಬಲಿಕೊಟ್ಟೆ, ನಾಳೆ ಈ ಬಗ್ಗೆ ಹತಾಶೆ ಉಂಟಾದಾಗ ನಿನಗೆ ಇವಳ ಮೇಲೆ ದ್ವೇಷ ಬರಬಹುದು ,ಇದರಿಂದ ನಿಮ್ಮ ಸಂಭಂದ ಮುರಿದು ಬೀಳ ಬಹುದು, ಇವಳಿಗೆ ಯಾವುದೇ ಕೆಲಸ ಬರುವುದಿಲ್ಲ, ಇಂಥವಳಿಂದ ನಿನಗೂ ಸ್ವತಂತ್ರ ಜೀವನ ನಡೆಸಲಾಗದು ,ಎಲ್ಲಿವರೆಗೆ ಬೇರೆಯವರನ್ನು ಅವಲಂಭಿಸಿರುತ್ತಿರ..?ಈ ಬಗ್ಗೆ ಆಲೋಚಿಸು , ಅವಳನ್ನು ಕಳುಹಿಸಿ ಕೊಡು ನಮ್ಮೊಂದಿಗೆ, ನನ್ನನ್ನು ಪ್ರಿಥಿಸುವವರನ್ನು ಶುಖವಾಗಿರುವುದು ಕಂಡು ಸುಖ ಪಡುವುದೇ ನಿಜವಾದ ಪ್ರೀತಿ, ಮರೆತು ಬಿಡು."
ಅವಳು ಇನ್ನು ತಲೆ ಕೆಳಗೆ ಹಾಕಿದ್ದಳು ಅವರು ಮುಂದುವರೆಸಿದರು
"ಮಗಳೇ ನೀನು ಯಾವುದೇ ತಪ್ಪು ಮಾಡಿಲ್ಲ, ನೀನು ಇವತ್ತು ನನ್ನೊಂದಿಗೆ ಬರುತ್ತಿ ಎಂದರೆ ನಾನು ಕರ ಕೊಂಡು ಹೋಗಲು ತಯಾರಿದ್ದೇನೆ,ನೀನು ಈ ಮೂರು ದಿನದಲ್ಲಿ ಮುಂದಿನದಿನ ಹೇಗಿರಬಹುದು ಎಂಬ ಚಿತ್ರಣ ಮನದಟ್ಟು ಆಗಿರಬಹುದು, ಈಗ ನಿನಗೆ ನಿನ್ನ ತಪ್ಪಿನ ಅರಿವಾಗಿರಬಹುದು , ಮುಂದೊಂದು ದಿನ ನೀನು ನನ್ನ ಮನೆಯವರು ಬಂದು ನನ್ನನ್ನು ಒಂದು ಸರ್ತಿ ಕರೆದರೆ ಈ ನರಕದಿಂದ ಹೊರ ಹೋಗುತಿದ್ದೆ ಆದರೆ ಅವರು ಬರಲಿಲ್ಲ ಎಂದು ಕೊರಗ ಬಾರದು ಎಂದು ಇವತ್ತು ನಾನು ನಿನ್ನ ಹುಡುಕಿ ಇಲ್ಲಿ ಬಂದಿದ್ದೇನೆ,"
ಇನ್ನೂ ಮೌನ ವಾಗಿದ್ದಳು, ಅವರು ಮುಂದುವರಿಸಿದರು "ಇವತ್ತು ಬಂದರೆ ನಿನಗೆ ಎಲ್ಲ ಸುಖ ಸಿಗುವುದು , ಇದನ್ನು ಕೆಟ್ಟ ಕನಸೆಂದು ಮರೆತು ಬಿಡಿ, ಮುಂದಿನ ಜೀವನ ಸುಖವಾಗಿ ಕಳೆಯಬಹುದು , ಆದರೆ ಇವತ್ತು ತಪ್ಪು ಹೆಜ್ಜೆ ಇಟ್ಟೆ ಎಂದು ನಾಳೆ ಪಶ್ಚ್ಯಾತಾಪ ಪಟ್ಟರೂ ಯಾರು ಬರುವುದಿಲ್ಲ, ನಾವೂ ಬರುವುದಿಲ್ಲ ... "
ಈ ಮಾತು ಹೇಳುತಿದ್ದಂತೆ ಆ ಹಿರಿ ಕಣ್ಣು ಮಂಜಾದವು,.
ಬಳಿಯಲ್ಲಿದ್ದ ಅವಳ ಮಾಮ
"ವಸುಂದರಾ, ಅವನನ್ನು ಬಿಟ್ಟು ಬಾ, ಆ ಅರಸಿನ ಕೊಂಬನ್ನು ಕಿತ್ತು ಬಿಸಾಡು,ಇಲ್ಲಾಂದರೆ ನಿನ್ನನ್ನು ನಮ್ಮ ಸಂಭಂಧ ದಿಂದ ಕಿತ್ತೊಗೆಯಬೇಕಾಗುತ್ತದೆ, ನೆನಪಿಟ್ಟುಕೋ , ಬದುಕಿದ್ದರು ಸತ್ತರು ಅವನೊಂದಿಗೆ ಇರಬೇಕು, ಕೈಯಲ್ಲಿ ಕಾಸಿಲ್ಲ, ವಿದ್ಯೆ ಇಲ್ಲ, ಸೂರಿಲ್ಲ ,ತಂದೆತಾಯಿ ಸರಿಯಿಲ್ಲದ ಆ ವ್ಯಕ್ತಿ ನಿನ್ನನ್ನು ನರಕಕ್ಕೆ ತಳ್ಳುತ್ತಾನೆ.ಬಿದ್ದು ಸಾಯಿ"
ಅವಳು ಇನ್ನೂ ಮೌನ ವಾಗಿದ್ದಳು, ಬದಿಯಲ್ಲಿ ಅವಳ ಅಮ್ಮ ಬಿಕ್ಕಿ ಬಿಕ್ಕಿ ಅಳುತಿದ್ದಳು,ತನ್ನ ಕರುಳಬಳ್ಳಿ ತನಗೆ ಈ ರೀತಿ ಮೋಸ ಮಾಡಿತಲ್ಲ ಎಂದು ಎದೆ ಬಡಿದು ಕೂಗುತ್ತ ಕುಳಿತಿದ್ದರು.ಸಚಿವರು ಸೇರಿ ಇತರರು ಮಾಡುವ ಮೂಕ ಸ್ಥಬ್ದ ಚಿತ್ರವಾದರು.
ಅಪ್ಪ ಅವಳ ಬಳಿಗೆ ಬಂದು "ಮಗಳೇ ಕತ್ತಲ್ಲಿರುವ ಆ ಹರಸಿನ ಕೊಂಬು ಕೊಡು ಇಲ್ಲಾ ಆ ಮೂರು ಪವನ್ ನ ಚಿನ್ನದ ಸರ ಕೊಡು,ನಿನಗೆ ಯಾವುದು ಬೇಕು ಅದು ಆರಿಸಿ ಕೋ..."
ಇಲ್ಲಿವರೆಗೆ ನೋಡಿದ ಸಿನೆಮಾ ಕಣ್ಣಮುಂದೆ ಜೀವಂತವಾದಂತೆ ಕಾಣುತಿತ್ತು.
ಅವಳು ಕತ್ತಿಗೆ ಕೈ ಹಾಕಿ ಕತ್ತಿನಲ್ಲಿನ ಚಿನ್ನದ ಸರ ಕಿತ್ತು ರಾಯರ ಕೈಯಲ್ಲಿ ಇಟ್ಟಳು, ಅಮ್ಮ ನಿಂತಲ್ಲೇ ಕೆಳಗೆ ಕುಸಿದು ಬಿದ್ದರು. ರಾಯರು ಮುಂದುವರೆಸಿದರು "ನನಗೆ ಈ ಮೂರು ಪವನ್ ನಿಂದ ನನಗೆ ಏನು ಸಿಗದು, ಆದರೆ ಈ ಮೂರು ಪವನ್ ನ ಮಹತ್ವ ನಿನ್ನ ಕುತ್ತಿಗೆಯಲ್ಲಿದ್ದರೆ ಅದರ ಮಹತ್ವ ತಿಳಿಯದು ,ಅದರ ಜವಬ್ದಾರಿ ನಿನಗೆ ಬರಬೇಕು ಎಂದು ಕೇಳಿದ್ದು, ಈಗ ನೀನು ನಾವು ಬೇಡ ಎಂದು ನಮ್ಮನ್ನು ದೂರ ಸರಿಸಿದ್ದಿಯಾ , ನಿನಗೆ ಆದರು ಒಂದು ಕಡೆಯ ಅವಕಾಶ ಇವತ್ತು ೭ :೩೦ ಕ್ಕೆ ಬಸ್ ಇರುವುದು ಅಲ್ಲಿಯವರೆಗೆ ನಿನ್ನ ನಿರ್ಧಾರದ ಬಗ್ಗೆ ಆಲೋಚಿಸು ,ನೀನು ನಮ್ಮೊಂದಿಗೆ ಬರುತ್ತಿಯಾ ಎಂದು ನಿನಗಾಗಿ ಟಿಕೆಟ್ ಕಾದಿರಿಸಿದ್ದೇವೆ, ಬರುವುದಿದ್ದರೆ ಬರಬಹುದು, ಆಲೋಚಿಸು .... "
ಎಂದು ಹೇಳುತ್ತಾ ನೆಲದಲ್ಲಿ ಬಿದ್ದಿದ್ದ ಹೆಂಡತಿಗೆ ನೀರುಣಿಸಿ ಪ್ರೀತಿಯಿಂದ ತಬ್ಬಿ ಕೊಳ್ಳುತ್ತಾ,"ನಿನಗೆ ನಾನಿದ್ದೇನೆ, ನನಗೆ ನೀನಿದ್ದಿಯ ,ಅವಳು ಸಂಜೆವರೆಗೆ ಬಾರದಿದ್ದರೆ ನಮ್ಮ ಮಗಳು ಸತ್ತಳೆಂದು ಭಾವಿಸಿ ನಮ್ಮ ಜೀವನ ಸಂತೋಷದಿಂದ ಕಳೆಯುವ .... ಏಳು ಹೋಗೋಣ... ಈ ನರಕದಿಂದ ...."
ಮುಂದಿನ ಭಾಗ ::
http://sampada.net/blog/kamathkumble/07/12/2010/29393
Rating