ಕನ್ನಡದ ಇಂಪು ಕವಿ ಕುವೆಂಪು
ಕನ್ನಡದ ಕವಿ ರಸ ಋಷಿ
"ಶ್ರೀ ರಾಮಾಯಣ ದರ್ಶನಂ" ಖುಷಿ |೧|
ಮಾನವತೆಯ ಮೂಲಭೂತ
ಮನುಜಮತ ವಿಶ್ವ-ಪತ |೨|
ರತಿ ಹೇಮಾವತಿ ಪತಿ
ನೀ ಕನ್ನಡದ ಕರುನಾಡು ಸತಿ |೩|
ವೇದಋಷಿ ವಾಲ್ಮಿಕಿಯ ಗಂಟು
ಕನ್ನಡಕ್ಕೆ ನಿನ್ನದೇ ನಂಟು |೪|
"ಕೊಲಳಿನಲ್ಲಿ" ಕಾವ್ಯದಾರೆ ಹರಿದು
ಕಾವೇರಿ ಮಣ್ಣಲ್ಲಿ ತುಂಬಿಹದು |೫|
ಕನ್ನಡದ ಕೊರಳಿಗೆ "ಪಾಂಚಜನ್ಯ" ತೆತ್ತು
ಕನ್ನಡಿಗರ ಧರೆಯಲ್ಲಿ ನಿನ್ನನ್ನು ಹೆತ್ತು |೬|
"ಕೋಗಿಲೆ" ಯ ರಾಗದ ಸ್ವರದಿ
ಬಾರಿಸಿದೆ ಕನ್ನಡದ ಗಂಟೆ ಡಿ೦ ಡಿ೦ಮದಿ |೭|
"ಮಲೆನಾಡಿನ ಮದುಮಗಳು" ಮಗನಾಗಿ
ಶಿರಿಗನ್ನಡದ ಬರವ ಹೊರುವ ವರವಾಗಿ |೮|
ಕನ್ನಡ ನಾಡಿನ ಕಣ್ಣ್ ಮಣಿಯಾಗಿ
ಮನ್ಕುಲದ ರವಿ ಕವಿ ತೇಜನಾಗಿ |೯|
ಜನನದಲ್ಲಿ ಪುಟ್ಟಪ್ಪನಾಗಿ
ಜಗದಲ್ಲಿ ಬಹು ದೊಡ್ಡಾಟವಾಡಿ |೧೦|
ಈ ಸ್ವರ್ಗ ದಿಂದ ಲೀನನಾದರು
ಕನ್ನಡದ ಕನ್ನಡಿಯಲ್ಲಿ ಶಾಶ್ವತ ಅಲಿನರು |೧೧|
ಕಬ್ಬಿಗರಲ್ಲಿ ಮನದು೦ಬಿ ಕಂಪು
"ವಿನೂತನ" ಇಂಪು ಕವಿ ಕುವೆಂಪು |೧೨|
ರಚನೆ: ಸಂಜಯ ಉಮರಾಣಿ