೨೫ರ ಸಂಜೆ ಎಲ್ಲವೂ ಎಂದಿನಂತೆ
ಬೆಳಿಗ್ಗೆಯಿಂದ ಸಂಜೆಯವರಿಗೂ ಸಾಗಿತ್ತು
ನಿರಂತರ ಆಮೀಷಗಳ ಮತಾಂತರ
"ಮೆ ಆಲ್ ಬಿ ಒನ್" ಧೀರ್ಘಗೊಂಡ
ಅಸಹ್ಯವಾದ ಸಂಖ್ಯಾಬಲದ ಆಸೆಯಿಂದ
ಬಿಳಿ-ಕಂದು-ತಿಳಿನೀಲಿ ಗೌನುಗಳು
ಕನ್ಯಾಸೆರೆಯ ಕಳೆದುಕೊಂಡ ಕನ್ಯೆಯರು
ಹೊಟ್ಟೆಗೆ ಹಸಿವಿನ ಕಾವಿಟ್ಟ ಬಡಜನತೆಗೆ
ಕೊರಳಿಗೆ ಶಿಲುಬೆಯ ನೇಣುಬೀಗೆ
ಮತ್ತೆ ಗುಲಾಮಗಿರಿಯ ಛಾಯೆ......
ಬಡಿದೊಡಿಸಲು ಕಾಯುತ್ತಿತ್ತೇ ಕಾಲ
ಹರಿದ ಪ್ರಾರ್ಥನೆಯ ಗುನುಗು ನಿಂತಿರಲಿಲ್ಲ
ಧರೆ ನಿನ್ನೊಡಲು ಸಮುದ್ರದ ನೀರಿದ್ದರೂ
ತಣಿಯಲ್ಲಿಲ್ಲವೇ ಏಕೆ ಕ್ರೋಧಗೊಂಡೆ?
ಏಕೆ ಗುಡುಗಿದೆ? ಏಕೆ ನಡುಗಿದೆ?
ನಿನ್ನ ಕ್ರೋಧದ ಜಲಾಗ್ನಿಯೇ............"ಸುನಾಮಿ"
ಬಡವ-ಬಲ್ಲಿದ-ಹಿಂದೂ-ಮುಸ್ಲಿಂ-ಕ್ರಿಚ್ಚಿಯನ್ ರೆನ್ನದೆ
ನವ ತಾಂತ್ರಿಕತೆಗೆ ಸವಾಲೆಸದು
ವಿಜ್ಜಾನದ ಜಿಜ್ಜಾಸೆಯ ನುಂಗಿದೆಯಲ್ಲ
ಲಕ್ಷಾಂತರ ಜನರ ಬಲಿತೆಗೆದುಕೊಂಡೆಯಲ್ಲ
ನಿನ್ನ ನಡತೆ ಸಹ್ಯವೇ?ಮತ್ತೇ ನಿರಾಳವಾಗಿ...
ಚೇತನದ ಆಗರವಾಗಿ.....
ಅಲೆಅಲೆಯಲ್ಲಿ ಬದುಕಿನ ಏರಿಳಿತಗಳ ಬಿಂಬಿಸುತ್ತಿರುವೆಯಾ?
ಮತ್ತೆ ಎಲ್ಲವೂ ಎಂದಿನಂತೆ......... ನಿರಂತರ ಆಮೀಷಗಳು
ಬದುಕು-ಸಾವುಗಳು ಹೋರಾಟದ ನಡುವೆಯೂ
ತಮ್ಮ ಮತವ ಸೇರಿದರೆ ಸವಲತ್ತುಗಳ...ಆಮೀಷ....
.........ಮತಾಂತರ.....ನಿರಂತರ....
ಸುನಾಮಿ
ಕವನ
(ಕವಿತೆ ಬರೆದ ಹಿನ್ನೆಲೆ: ಹಲವು ವರ್ಷಗಳ ಹಿಂದೆ ಆಂದ್ರ ಹಾಗು ತಮಿಳು ನಾಡಿನ ಕೆಲವು ಸಮುದ್ರ ತೀರದ ಹಳ್ಳಿ,ಪಟ್ಟಣಗಳ ಮೇಲೆ ಸಮುದ್ರರಾಜ ಮುನಿದು ತನ್ನ ಪ್ರರಾಕ್ರಮ ತೋರಿಸಿ ನಮ್ಮ ಜನರನ್ನು ಸಂಕಷ್ಟಕ್ಕೆ ಗುರಿಮಾಡಿದ ಸಂಗತಿ ನಿಮಗೆಲ್ಲಾ ತಿಳಿದಿದೆ. ಈ ಕವಿತೆ ಬರೆದು ತುಂಬಾ ವರ್ಷಗಳಾದರೂ ಅಂದು ನಡೆದ ಅಲ್ಲಿನ ಜನರ ಸಂಕಷ್ಟಗಳಿಗೆ ಬಹಳಷ್ಟು ಮಂದಿ ಸ್ಪಂದಿಸುತ್ತಿದ್ದರೂ ಕೆಲವು ಮತೀಯ ಗುಂಪು ಜನರ ಸಂಕಷ್ಟದ ಸಮಯದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬಯಸಿ ಜನರಿಗೆ ಆಮೀಷಗಳನ್ನು ಒಡ್ಡಿ ತಮ್ಮ ಮತಕ್ಕೆ ಸೆಳೆಯಲೆತ್ನಿಸಿದ ಸಂಗತಿಗಳನ್ನು ಓದಿ,ನೋಡಿ ,ನೊಂದು ಈ ಕವಿತೆಯನ್ನು ಬರೆದೆ.)
Comments
ಉ: ಸುನಾಮಿ