ಮಹಾನ್ ಸ್ಥಾನಾಂತರಗಳು

ಮಹಾನ್ ಸ್ಥಾನಾಂತರಗಳು

"ಜೊತೆಯಾಗಿ ಸಾಗಿ, ಅಸ್ತಿತ್ವಕ್ಕಾಗಿ ಹೋರಾಡಿ "

ಪ್ರಕೃತಿ ಮತ್ತು ಜೀವ ಸಂಕುಲದ ನಡುವಿನ ಬಂಧವೆನ್ನುವುದು ಮನುಷ್ಯ ಅರಿತ ವಿಜ್ಞಾನಕ್ಕೂ ಮಿಗಿಲಾದುದು. ಈ ನಿಟ್ಟಿನಲ್ಲಿ ಪ್ರಕೃತಿಯನ್ನು ಅರಿಯುವ ಮನುಷ್ಯ ಪ್ರಯತ್ನಗಳೆಲ್ಲಾ ಒಂದು ರೀತಿ ಪ್ರಕೃತಿ ಎಸೆಯುವ ಜಾಲಗಳಲ್ಲಿ ತೋರ್ಪಡಿಸುವ ವೈವಿಧ್ಯಗಳಲ್ಲಿ ಎಲ್ಲೋ ಕಳೆದು ಹೋದಂತೆ ಭಾಸವಾಗುತ್ತದೆ. ಇದು ಇಂದು ನೆನ್ನೆಯದಲ್ಲ, ಭೂಮಿ ರೂಪುಗೊಂಡ ದಿನದಿಂದಲೂ, ಆಕ್ಸಿಜನ್ ಎಂಬ ಅನಿಲ ಸೃಷ್ಟಿಯಾದಾಗಲೂ, ಧಾರಾಕಾರ ಮಳೆ, ಹಿಮ ಯುಗ, ಸಮುದ್ರ ಪ್ರಾಣಿಗಳಿಂದ ವಿಕಾಸಗೊಂಡು ಇಂದಿನ ಹೋಮೋಸೇಪಿಯನ್ ಸಂತತಿವರೆಗೂ ವಿಜ್ಞಾನವೆನ್ನುವುದು ಅದರದ್ದೇ ಆದ ವ್ಯಾಖ್ಯಾನ ಅದರದ್ದೇ ಆದ ಪರೀಕ್ಷೆಗಳನ್ನು ಮಾಡಿ ಬದುಕಿರುವ ಸಸ್ಯಗಳು ಪ್ರಾಣಿಗಳೆಂಬ ಜೀವ ಸಂತತಿಗಳಿಗೆ ಅಸ್ತಿತ್ವಕ್ಕಾಗಿ ತನ್ನದೇ ದಾರಿಗಳನ್ನು ತೋರಿಸಿದೆ.

 

http://static.tvguide.com/MediaBin/Galleries/Shows/G_L/Gq_Gz/Great_Migrations/season1/great-migrations-01.jpgಮನುಷ್ಯನಲ್ಲಿ ಬದುಕೆನ್ನುವುದು ಅಸ್ತಿತ್ವ ಮತ್ತು ವಂಶದ ಬೆಳವಣಿಗೆಯೊಂದಿಗೆ ಲಾಲಸೆ, ಭೋಗ, ಅಧಿಕಾರ ಎಂಬ ಅಂಶಗಳ ಸಮಗ್ರ ಪ್ಯಾಕೇಜ್ ಆದರೂ ಮನುಷ್ಯ ಸಮಾಜ ಎನ್ನುವಂತಹ ಸಭ್ಯ ದೃಶ್ಯಾವಳಿಯನ್ನು ಸೃಷ್ಟಿಸಿ ಅದಕ್ಕೆ ರೂಪು ರೇಷೆಗಳನ್ನು ಕೊಟ್ಟಿದ್ದಾನೆ. ಇದರಿಂದ ಮನುಷ್ಯನಿಗೆ ತನ್ನ ಅಸ್ತಿತ್ವಕ್ಕೆ ಧಕ್ಕೆ ಬರದಿದ್ದರೂ ಬದುಕಿನ ವಿಲಾಸಕ್ಕೆ ಮತ್ತು ಇನ್ನೊಬ್ಬನೊಂದಿಗೆ ತನ್ನ ಮಟ್ಟವನ್ನು ಕಾಯ್ದುಕೊಳ್ಳುವ ಅಗತ್ಯ ಕಂಡು ಬರುತ್ತದೆ. ಆದರೆ ಪ್ರಾಣಿಗಳಲ್ಲಿ ಬದುಕೆನ್ನುವುದು ಅವುಗಳ ಅಸ್ತಿತ್ವ ಮತ್ತು ವಂಶದ ಬೆಳವಣಿಗೆಯೇ ಆಗಿದೆ. ಅದರಲ್ಲೂ ವಂಶದ ಬೆಳವಣಿಗೆಯಂತೂ ಪ್ರಮುಖ ಸ್ಥಾನ ಗಳಿಸಿ ಬಿಡುತ್ತದೆ.


http://deepseanews.com/wp-content/uploads/2010/11/3592_great-migrations-feast-famine-21_04700300.jpgಸಂತಾನಾಭಿವೃದ್ಧಿ ಮತ್ತು ಋತುಗಳಿಗೆ ಅನುಗುಣವಾಗಿ ಪ್ರಾಣಿಗಳು ಪ್ರಯಾಣವನ್ನು ಕೈಗೊಳ್ಳುತ್ತವೆ, ಇದಕ್ಕೆ ಸ್ಥಾನಾಂತರಗಳು ಎನ್ನಲಾಗುತ್ತದೆ. ಇದು ಅಂಟಾರ್ಟಿಕಾದ ಸೀಲ್, ಪೆಂಗ್ವಿನ್, ಆಫ್ರಿಕಾದ ಆನೆಗಳಿಂದ ಹಿಡಿದು ಜೆಲ್ಲಿ ಫಿಶ್, ಮೊನಾರ್ಕ್ ಬಟರ್ ಫ್ಲೈ ಮತ್ತು ಆರ್ಮಿ ಇರುವೆಗಳವರೆಗೂ ವ್ಯಾಪಿಸಿದೆ. ಮನುಷ್ಯನೊಬ್ಬನನ್ನು ಹೊರತು ಪಡಿಸಿ ಬಹುಷಃ ಎಲ್ಲಾ ಪ್ರಾಣಿ ಗುಂಪುಗಳೂ ಈ ಸ್ಥಾನಾಂತರಗಳಿಗೆ ಒಗ್ಗಿಕೊಂಡಿವೆ. ಮೆಕ್ಸಿಕೋದಿಂದ ಹಿಡಿದು ಉತ್ತರ ಯು.ಎಸ್.ಎವರೆಗೆ ಹೋಗಿ ಹಿಂತಿರುಗಿ ಬರುವ ಮೊನಾರ್ಕ್ ಬಟರ್ ಫ್ಲೈಗಳು ನಿಸರ್ಗದ ಅದ್ಭುತ ಸಂಪರ್ಕ ಮಾಧ್ಯಮದ ಉದಾಹರಣೆಯಾದರೆ ಜಿಂಕೆಗಳಲ್ಲಿ ಪ್ರಜನನ ಕ್ರಿಯೆಗೆ ಹೋರಾಟ ಮಾಡಿ ಗೆದ್ದವನಿಗೆ ತಂದೆಯಾಗುವ ಅವಕಾಶದ ಪದ್ಧತಿಗಳಿವೆ. ಆಫ್ರಿಕಾದ ಕಾಡುಗಳಲ್ಲಿ ಪ್ರಾಣಿಗಳು ಚಲನಶೀಲವಾಗಿರುವುದರಿಂದಲೇ ಅವು ಇನ್ನೂ ಅಸ್ತಿತ್ವದಲ್ಲಿವೆ ಎನ್ನಲಾಗುತ್ತದೆ.

ಪಾಲನೆ ಮತ್ತು ಪೋಷಣೆಯ ಅಂಶಗಳನ್ನೂ ಬೆಸೆದು, ಎಲ್ಲೆಂದರಲ್ಲಿ ಮೊಟ್ಟೆಯಿಟ್ಟು ಅನಾಥ ಮಾಡಿ ಹೋಗುವ ಸನ್ನಿವೇಶಗಳೂ ಅವುಗಳ ಬದುಕಿನ ಭಾಗವೇ. ವೈಲ್ಡ್  ಬೀಸ್ಟುಗಳೆಂಬ ಪ್ರಾಣಿವರ್ಗವೆಂಬುದು ಯಾವುದೋ ಅಲ್ಗೋರಿಥಮನ್ನು ಅನುಸರಿಸುವಂತೆ ಸಾಗುತ್ತಾ ಸಿಂಹಗಳ ಧಾಳಿಯಿಂದ ತಪ್ಪಿಸಿಕೊಳ್ಳುತ್ತವೆ. ಅಸ್ತಿತ್ವವೆನ್ನುವುದೇ ಹಾಗೆಯೋ ಅಥವಾ ಇದೆಲ್ಲವನ್ನು ನಿಯಂತ್ರಿಸುವ ಭೂ ಕೇಂದ್ರ ಎಂಬ ನಿಯಂತ್ರಕ ಇದೆಲ್ಲವನ್ನೂ ಬರೆದು ಅನುಸರಿಸಲು ಹೇಳುತ್ತಾನೋ ಗೊತ್ತಿಲ್ಲ. ಆದರೆ ವಿಜ್ಞಾನವೆನ್ನುವುದು ನಮಗೆ ಮಾತ್ರ ಸೀಮಿತವಲ್ಲ ಪ್ರಾಣಿಗಳಲ್ಲಿಯೂ ಅದು ನಮಗರಿಯದ ರೀತಿಯಲ್ಲಿ ಅಡಗಿರುತ್ತದೆ.


http://www.bbc.co.uk/iplayer/images/episode/b00hvw59_640_360.jpg

 

ಒಂದು ರೀತಿ ಪ್ರಕೃತಿಯೇ ಹಾಗೆ, ಎಷ್ಟು ಅರಿತರೂ ಇನ್ನೂ ಕಡಿಮೆ ಎಂದು ತೋರಿಸುತ್ತದೆ ಮತ್ತು ಮುಗಿಯದ ಮನುಷ್ಯನ ಜ್ಞಾನ ಅಭೀಪ್ಸೆಯೆನ್ನುವುದು ಪ್ರಕೃತಿಯ ನಿಯಮದೊಡನೆ ನಂಟು ಬೆಳೆಸುತ್ತದೆ ಅಥವಾ ಅದನ್ನು ನಾಶಗೊಳಿಸುತ್ತದೆ.

ಈ ನಿಟ್ಟಿನಲ್ಲಿ ಜಿಯೋಗ್ರಾಫಿಕ್ ಚಾನಲ್ಲಿನಲ್ಲಿ ಬರುವಂಥ ’ಗ್ರೇಟ್ ಮೈಗ್ರೇಶನ್ಸ್’ ಎಂಬ ಸರಣಿ ಕೇವಲ ನಿಮ್ಮನ್ನು ಅಗಾಧ ಪ್ರಕೃತಿ ರಹಸ್ಯದೊಂದಿಗೆ ನಂಟು ಹಾಕುವುದೇ ಅಲ್ಲದೆ ಪ್ರಾಣಿಗಳಲ್ಲಿ ಇರುವಂತಹ ವಿಜ್ಞಾನದೊಂದಿಗೆ ಬೆಸೆದು ನಿಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಈ ಕಾರ್ಯಕ್ರಮ ಪ್ರತಿ ಭಾನುವಾರ ರಾತ್ರಿ ಹತ್ತಕ್ಕೆ ಪ್ರಸಾರವಾಗುತ್ತದೆ.

Comments