ಸಂಪದದ ಕವಿಗಳು ಮೊದಲು ನಿರ್ಧರಿಸಲಿ..

ಸಂಪದದ ಕವಿಗಳು ಮೊದಲು ನಿರ್ಧರಿಸಲಿ..

ಸಂಪದದಲ್ಲಿ ೩ನೇ ವರ್ಷಕ್ಕೆ ಕಾಲಿಟ್ಟ ಲೆಕ್ಕದಲ್ಲಿ ನಮ್ಮ ಭಲ್ಲೆಯವರು ಒಂದು ಕವನ ಬರೆದಿದ್ದರು.  http://sampada.net/%E0%B2%AE%E0%B2%A6%E0%B3%81%E0%B2%B5%E0%B3%86%E0%B2%97%E0%B3%86-%E0%B2%92%E0%B2%82%E0%B2%A6%E0%B3%81-%E0%B2%B9%E0%B3%81%E0%B2%A1%E0%B3%81%E0%B2%97%E0%B2%BF-%E0%B2%B9%E0%B3%81%E0%B2%A1%E0%B3%81%E0%B2%95%E0%B2%BF-%E0%B2%95%E0%B3%8A%E0%B2%A1%E0%B2%BF#comment-129869 ಅದರಲ್ಲಿ ಹೆಣ್ಣಿನ ದಟ್ಟನೆಯ ಕರಿಕೂದಲನ್ನು ಹೆಬ್ಬಾವಿಗೆ ಹೋಲಿಸಿದ್ದರು. ಬಹುಷಃ ಆ ಹೆಣ್ಣಿಗೆ ೫-೬ ಮೀಟರ್‌ಗೂ ಜಾಸ್ತಿ ಉದ್ದದ, ದಪ್ಪಗಿನ ಜಡೆ ಇರಬಹುದೋ ಏನೋ!?


ಆದರೆ ಈಗಿನ ಕಾಲದ ಸುಂದರಿಯರು ತಲೆಕೂದಲನ್ನು ಭುಜದಾಟದಂತೆ ನೀಟಾಗಿ ಕತ್ತರಿಸಿ, ಜಡೆ ಹೆಣೆಯದೇ ಬಿಟ್ಟಿರುತ್ತಾರಲ್ಲಾ..  ಈ ಸ್ಟೈಲನ್ನು ಹೋಲಿಸಲು ಸರಿಯಾದ ಹಾವು/ಪ್ರಾಣಿ/ತರಕಾರಿ ಇತ್ಯಾದಿ ಕವಿಗಳಿಗೆ ಸಿಗದೇ ಪೇಚಾಡುತ್ತಿದ್ದಾರೆ.


ಈಗಿನ ಕವಿಗಳ ಕಷ್ಟ ನೋಡಲಾರದೆ, ಹೆಣ್ಣಿನ ತಲೆಕೂದಲಿನ ಚಿತ್ರ ಹಿಡಕೊಂಡು ಅಮೇರಿಕಾದಿಂದ ನ್ಯೂಜಿಲ್ಯಾಂಡ್ ತನಕ ಅಲೆದಾಡಿದೆ.


ಕೊನೆಗೆ ಒಂದು ಪ್ರಾಣಿ ಸಿಕ್ಕಿತು.  ಆಗಬಹುದಾ ಎಂದು ಸಂಪದದ ಕವಿಗಳು ಮೊದಲು ನಿರ್ಧರಿಸಲಿ. ನಂತರ ಉಳಿದ ಕವಿಗಳಿಗೆ ತಿಳಿಸಲಾಗುವುದು.

Rating
No votes yet

Comments