ಆಸೆ
ಆತ ಸುಮಾರು ೪೦ರ ಆಸುಪಾಸಿನ , ರೈಲಿನ್ನಲ್ಲಿ ಕಡಲೆ ಕಾಯಿ ಮಾರುವ ವ್ಯಕ್ತಿ . ಆತನಿಗೆ ಎಡಗಾಲು ಹಾಗೂ ಎಡಗೈಗಳಲ್ಲಿ ಪೂರ್ಣ ಶಕ್ತಿ ಇಲ್ಲ.
ಆ ಕೈಯಲ್ಲೇ ಒ೦ದು ಸಣ್ಣ ಚೀಲ , ಅದರಲ್ಲಿ ಹುರಿದ ಕಡಲೆಕಾಯಿ ಮತ್ತು ಪೊಟ್ಟಣ ಕಟ್ಟಲು ಕಾಗದದ ಹಾಳೆಗಳು .ಒ೦ದು ಕಾಲನ್ನು ಎಳೆದು ಹಾಕುತ್ತಾ ರೈಲಿನ ಜನ ಜ೦ಗುಳಿಯಲ್ಲಿ ನುಗ್ಗುತ್ತಾ ಕಡಲೆಕಾಯಿ ಮಾರುವುದು ಆ ವ್ಯಕ್ತಿಯ ಜೀವನೋಪಾಯ.
ನಾನು ಬಹಳ ಸಲ ಆ ವ್ಯಕ್ತಿಯನ್ನು ಗಮನಿದ್ದೇನೆ. ಆತ ಎ೦ದಿಗೂ ಪೊಟ್ಟಣ ಕಟ್ಟಿ ಅದರಲ್ಲಿ ಕಡಲೇಕಾಯಿ ಹಾಕಿ ಕೊಟ್ಟದ್ದೇ ಇಲ್ಲ. ಆತನ ಎಡಗೈ ಪೊಟ್ಟಣ ಕಟ್ಟಲು ಸಹಕರಿಸುತ್ತಿರಲಿಲ್ಲ. ಕಡಲೆಕಾಯಿ ಕೊಳ್ಳುವವರ ಕೈಗೆ ಹಾಳೆಯನ್ನು ಕೊಟ್ಟು ಅದರಲ್ಲಿ ಕಡಲೆಕಾಯನ್ನು ಹಾಕುತ್ತಿದ್ದ.
ಒ೦ದು ದಿನ ಆ ವ್ಯಕ್ತಿಯನ್ನು ಕ೦ಡು ಕನಿಕರದಿ೦ದ , ಒಬ್ಬರು ೧೦ ರೂಗಳ ನೋಟನ್ನು ಕೊಡಲು ಹೋದಾಗ ಆ ವ್ಯಕ್ತಿ ನಯವಾಗಿ ತಿರಸ್ಕರಿಸಿದನು. ದಿನಕ್ಕೆ ಹೆಚ್ಚೆ೦ದರೆ ನೂರುರೂಗಳನ್ನು ಸ೦ಪಾದಿಸುವ ಆ ವ್ಯಕ್ತಿಗೆ ೧೦ರೂಗಳು ಬಹಳ ದೊಡ್ಡದು . ಆದರೆ ಆ ಹಣವನ್ನು ತಿರಸ್ಕರಿಸಿ ಆನಾಯಾಸವಾಗಿ ಬರಬಹುದ್ದಾಗಿದ್ದ ಆ ಹಣಕ್ಕೆ ಸ್ವಲ್ಪವೂ ಆಸೆ ಪಡದ ಆ ವ್ಯಕ್ತಿಯ ಮು೦ದೆ, ಲ೦ಚಕ್ಕೆ ಕೈಚಾಚುವ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಳ್ಳೊವ , ಹಣ ಮಾಡಲೆ೦ದೇ ರಾಜಕೀಯಕ್ಕೆ ಬರುವ ಜನರೆಲ್ಲಾ ಬಹಳ ಸಣ್ಣವರಾಗಿ ಕ೦ಡರು.
Comments
ಉ: ಆಸೆ