ನಿದ್ರೆ ಬಾರದ ದಿನಗಳು

ನಿದ್ರೆ ಬಾರದ ದಿನಗಳು

ಕವನ

 

ಎದೆಯ ಬಡಿತವ ಕಹಳೆಯಾಗಿಸಿ

ಮನದ ಕಡಲಲಿ ಅಲೆಗಳೆಬ್ಬಿಸಿ

ಕ್ಷಣಿಕವಾದರು ಬುದ್ದಿ ಮರೆಯದ

ಹತ್ತು ಹಲವು ಕ್ಷಣಗಳು

ಬಂದುಹೋದವು ಹುಟ್ಟಿನಿಂದಲಿ

ನಿದ್ರೆ ಬರದಾ ದಿನಗಳು

ಆ ನಿದ್ರೆ ಬಾರದ ದಿನಗಳು

 

ಮಾತು ಬಾರದ ಮೂಕ ಮನಸದು

ಕಣ್ಣ ತೆರೆದು ಜಗಕೆ ಬರುವುದು

ಜಗದ ಗದ್ದಲ ದೊಳಗೆ ಬೆರೆತು

ಅದೇ ಮಾತೆಂದು ತಿಳಿವುದು

ತಿಳಿವು ಬಲಿತು ಅರಿವು ಮೂಡದೆ

ಅರ್ಧ ನಿದ್ರೆಯ ಮರೆವುದು

 

ಮಾತು ಕಲಿತ ಮರುಘಳಿಗೆಯೆ

ಅರಿವು ಗಳಿಸುವ ಕಾಯಕ

ಹಲವು ಶಕೆಗಳು ಕಳೆವವಲ್ಲಿ

ಜೀವನ ಬಲು ರೋಚಕ

ಮೊದಲ ಸ್ನೇಹ , ಮೊದಲ ಪ್ರೀತಿ

ಹಲವು ಮೊದಲುಗಳಲ್ಲಿಯೇ

ಮೊದಲು ಮೊದಲೇ ಅರಿವು ಮೂಡುವ

ಮೊದಲೇ ಮಸುಕು ನಿದ್ರೆಯೇ

ಮೊದಲೇ ಮಸುಕು ನಿದ್ರೆಯೇ

 

ವಿಙ್ನಾನ ವೆಂಬುದು ಙ್ನಾನಕಲ್ಲ

ಹಣವ ಗಳಿಸುವ ಮಾಧ್ಯಮ

ಕಾಸು ಹೆಸರಿನ ಹಿಂದೆ ಸ್ಪರ್ಧೆಯು

ಮರೆಯಾದುದಲ್ಲಿ ಸಂಯಮ

ಅರೆತುದೆಲ್ಲಾ ಕಲೆತುದೆಲ್ಲಾ

ವೃತ್ತ ಮಧ್ಯೆಯ ಬಿಂದುವು

ಬಿಂದು ಬೆಳೆದು ದೊಡ್ಡದಾದರು

ನಿದ್ರೆ ಕಾಣದೆ  ಶೂನ್ಯವು

 

 

ಹೆತ್ತ ತಾಯಿಯ ಒಡಲಿನಲ್ಲಿ

ಅದೇನು ಘಾಢ ನಿದ್ದೆಯೋ

ಅದೇನು ಘಾಢ ನಿದ್ದೆಯೋ

ಅದು ನಿದ್ದೆಅರಿಯದ ಬೊಂಬೆಯೋ

ಗರ್ಭದಾಚೆಯ ಜಗವನೋಡುವ

ಮೊದಲು ಜೀವದ ಮಾಯೆಯೋ

 

 

 

Comments