ಎಂದಿಗೆ ಈ ಸಮಸ್ಯೆಗಳು ಮುಕ್ತವಾಗತ್ತೆ ?

ಎಂದಿಗೆ ಈ ಸಮಸ್ಯೆಗಳು ಮುಕ್ತವಾಗತ್ತೆ ?

ನಮ್ಮ ನಗರಕ್ಕೆ ಮೆಟ್ರೋ ಬರತ್ತೆ ಅಂದಾಗ ಎಲ್ಲರಿಗೂ ಖುಷಿ ಆಯ್ತೋ ಬಿಡ್ತೋ ಗೊತ್ತಿಲ್ಲ ಆದರೆ ವಯಕ್ತಿಕವಾಗಿ ನಾನಂತು ಸಂತೋಷಪಟ್ಟಿದ್ದೆ .ಪುಣ್ಯ ನಮ್ಮ ನಗರಕ್ಕೆ ಇಂಥ ಯೋಜನೆಗಳು ಸಿಕ್ಕಿದವಲ್ಲ ಅಂಥ ಖುಷಿ.ಅಲ್ಲಿಗೂ ಕೆಲವು ಹೆಮ್ಮರಗಳು ಉರುಳಿ ಬೀಳ್ತಾವೆ ಅಂದ ಕೂಡಲೇ ಸ್ವಲ್ಪ  ಬೇಜಾರು ಕೂಡ.

ಆದರೆ ಈಗ ಆ ಕೆಲಸ ಆಗ್ತಾ ಇರೋವಾಗ ಮಧ್ಯದಲ್ಲಿ ಹಾಕಿರುವ ಬ್ಯಾರಿಯರ್ಸ್ ಗಳಿಂದ ಎಲ್ಲ ದ್ವಿಪಥ ರಸ್ತೆ ಗಳು ಕಿಷ್ಕಿಂದೆ ಯಾಗಿ ಮಾರ್ಪಟ್ಟು ವಾಹನಗಳ ಸಂಚಾರ ವ್ಯವಸ್ಥೆ ಅವ್ಯವಸ್ಥೆ.ರಸ್ತೆಗಳೆಲ್ಲ ಹೊಂಡ,ಗುಂಡಿಗಳಲ್ಲೇ.ಪಾದಚಾರಿಗಳ ಕಥೆ ಅಂತೂ ಮಳೆ ಬಂದಾಗ ರಸ್ತೆ ಎಂದು ಕಾಲಿಡಲು ಅಸಾಧ್ಯ.ಬೈಕ್ ಸವಾರರ ಸರ್ಕಸ್ಸ್ ಮತ್ತೊಂದು ತರಹ.ಬೆಂ ಮ ನ ಸಾ ಸಂ  (BMTC) ಬಸ್ಸುಗಳಲ್ಲಿ ಪ್ರಯಾಣ ಮಾಡುವವರು ಕೊನೆಯ ಸೀಟುಗಳಲ್ಲಿ ಕುಳಿತವರ ಬೆನ್ನಿನ ಕಥೆ ಅಷ್ಟೇ.

ನಗರವಾಸಿಗಳು ದಿನಂಪ್ರತಿ ಈ ಸಮಸ್ಯೆಗಳಿಂದ ಬೆಳಿಗ್ಗೆ ಒಮ್ಮೆ ಆಫೀಸಿಗೆ ,ಕೆಲಸಕ್ಕೆ  ಹೋಗುವಾಗ ಒಂದೊಮ್ಮೆ ದೇಶದ ರಾಜ್ಯದ ಎಲ್ಲ ಸಂಬಂಧ ಪಟ್ಟ ಇಲಾಖೆಗಳಿಗೂ ಹಾಗೂ ರಾಜಕಾರಣಿಗಳಿಗೂ ಬೈಕೊಳೋದು ಮಾಮೂಲಿ.ಆದರೆ ಎಷ್ಟು ಬೈಕೊಂಡರೂ ಮುಂದೆ ಒಂದು ದಿನ ಅದು ನಮಗೆ ಅಲ್ವಾ ಅಂತ ಸುಮ್ಮನಾಗೋದು.

ಎಂದಾದರೂ ಬರಲಿ ಮೆಟ್ರೋ ,ಅಲ್ಲಲ್ಲಿ ಅಡಚಣೆಗಳು ಸಂಭವಿಸುವಾಗ ಸರಿ ಹೊಂದಿಸುವ ವ್ಯವಸ್ಥೆ ಕೂಡ ಆಗಬೇಕು.ಏಕೆಂದರೆ ಇಂಥ ಯೋಜನೆಗಳು ಒಂದೆರಡು ದಿನದಲ್ಲಿ ಮುಗಿಯದೆ ಇರುವಂಥದ್ದು.ಜನಜೀವನಕ್ಕೂ ಸರಿ ಹೊಂದುವಂತೆ ಕ್ರಮಗಳು ಕೈಗೊಳ್ಳಬೇಕಾಗುತ್ತದೆ ಅಲ್ಲವೇ.

ಎಂದಿಗೆ ಇಂತಹ ಸಮಸ್ಯಗಳಿಗೆ ಮುಕ್ತಿ ?

ಮೆಟ್ರೋ ಯೋಜನೆ ಯಶಸ್ವಿ ಆಗಲಿ ಎಂಬುದೇ ಎಲ್ಲರ ಆಶಯ. ಟ್ರಾಫಿಕ್ ಸಮಸ್ಯೆ ಗೂ ಸ್ವಲ್ಪ ಕಡಿವಾಣ ಬೀಳಬಹುದೇನೋ ಎನ್ನೋ ಆಶಯ.  

Rating
No votes yet

Comments