ಯಾರಿಗೆ ಯಾವ ಹೆಸರು

ಯಾರಿಗೆ ಯಾವ ಹೆಸರು

ಕವನ

ಹುಟ್ಟಿ ಬೆಳೆದ ಮನೆಗೆ ತವರೆಂದು ಹೆಸರು 
ಕೊಟ್ಟಲ್ಲಿ ಉಳಿದ ಪ್ರೀತಿಗೆ ತನ್ನ ಮನೆಯೆಂದು ಹೆಸರು 
ಸಹನೆಯಿಂದ ಕಷ್ಟ ಪಡೆದ ಜಾತಿಗೆ ಹೆಣ್ಣೆಂದು ಹೆಸರು 
ಹಾಯಾಗಿದ್ದು ಮೇಲೂ ವರ್ಗ ಪಡೆದ ಜಾತಿಗೆ ಗಂಡೆಂದು ಹೆಸರು 
ತಾಯಿಯ ಮಕ್ಕಳ-ಪ್ರೀತಿ ವ್ಯತ್ಯಾಸಕ್ಕೆ ಭೇದವೆಂದು ಹೆಸರು 
ಬಿದ್ದಿರುವ ಕಲ್ಲನ್ನು ಕೆತ್ತಿದಾಗ ಶಿಲೆಯೆಂದು ಹೆಸರು 
ಹರಿದ ಬಟ್ಟೆ ಧರಿಸಿದವನಿಗೆ ಭಿಕ್ಷುಕನೆಂದು ಹೆಸರು 
ಇದ್ದರಲ್ಲಿಯೇ ಪ್ರೀತಿ , ಸುಖದಿಂದ ಬಾಳ್ವೆ ನಡೆಸಿದರೆ ಜೀವನವೆಂದು ಹೆಸರು 
ದ್ವೇಷದಿಂದ ಕೆಡಕನ್ನು ಬಯಸಿದರೆ ಪಾಪಿಯೆಂದು ಹೆಸರು 
ಏನಿದು ದೇವರ ಚಮತ್ಕಾರ 
ದೇವರೇ ಜಾತಿ -ಭೇದ ಮಾಡಿದವನು 
ದೇವರೇ ನೀಡದ ಸಮಾನನಾದ ಹಕ್ಕನ್ನು 
ಸ್ವಾರ್ಥದ ಜನ ಹೇಗೆ ಸಮಾನ ತಿಳಿವರು
ಹೀಗಿರುವ ದೇವನಿಗೆ ಜನ ಹೇಳುವುದು ಚಮತ್ಕಾರಿಯೆಂಬ ಹೆಸರು