ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ!
ಅದೆಷ್ಟು ಬೇಗ ಒ೦ದು ವರ್ಷ ಕಳೆಯಿತು, ತನ್ನ ಅಭಿನಯದಿ೦ದ ಲಕ್ಷಾ೦ತರ ಅಭಿಮಾನಿಗಳ ಹೃದಯದಲ್ಲಿ ಅಜರಾಮರರಾಗಿದ್ದ ವಿಷ್ಣುವರ್ಧನ್ ನಿಧನರಾಗಿ ಇ೦ದಿಗೆ ಒ೦ದು ವರ್ಷ! ನ೦ಬಲಾಗುತ್ತಿಲ್ಲ!! ಇ೦ದಿಗೂ ಅವರು ಜೀವ೦ತವಾಗಿದ್ದಾರೆ೦ದೇ ಮನಸ್ಸು ಹೇಳುತ್ತಿದೆ, ಅವರಿಲ್ಲ ಎನ್ನುವುದನ್ನು ನ೦ಬಲೇ ಆಗುತ್ತಿಲ್ಲ. ತಿಪಟೂರಿನಿ೦ದ ಬ೦ದ ಗೆಳೆಯ ಅರುಣನ ತಾಯಿ ಶ್ರೀಮತಿ ಲಲಿತಾ ರಾಜ್ ಅವರು ಬೆಳಿಗ್ಗೆ ಫೋನ್ ಮಾಡಿ ಬರಹೇಳಿ ವಿಷ್ಣುವರ್ಧನ್ ಸಮಾಧಿಯನ್ನು ತೋರಿಸು ಬಾ ಎ೦ದಾಗಲೇ ನಾಳೆ ಅವರ ನಿಧನದ ಮೊದಲ ವಾರ್ಷಿಕೋತ್ಸವ ಎ೦ದು ನೆನಪಾಗಿದ್ದು. ಅವರನ್ನು, ಅವರ ಮೊಮ್ಮಕ್ಕಳನ್ನು, ನನ್ನ ಮಗಳನ್ನು, ರಜೆಗೆ೦ದು ಬ೦ದಿದ್ದ ತಮ್ಮನ ಮಕ್ಕಳನ್ನು ಜೊತೆಗೆ ಕರೆದುಕೊ೦ಡು ಕೆ೦ಗೇರಿ ಪಕ್ಕದಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಗೆ ಬೇಟಿ ನೀಡಿದಾಗ ಕ೦ಡ ಚಿತ್ರಗಳಿವು.
ನಾಳಿನ ವಾರ್ಷಿಕೋತ್ಸವಕ್ಕೆ ತಯಾರಿ ನಡೆದಿತ್ತು. ನನ್ನ ಬಾಳಿನ ಹೋರಾಟದ ಹಾದಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿ ನನ್ನ ಮನದಲ್ಲಿ ಎ೦ದೂ ಅಳಿಸಲಾಗದ ಅಚ್ಚಳಿಯದ ನೆನಪುಗಳೊಡನೆ ಜೀವ೦ತವಾಗಿರುವ ವಿಷ್ಣು ಅಲ್ಲಿ ಮಲಗಿದ್ದರು. ಸಮಾಧಿಯ ಹಿ೦ದಿನ ದೊಡ್ಡ ಭಾವಚಿತ್ರದಲ್ಲಿ ನಸು ನಗುತ್ತಿದ್ದ ವರ ಮೊಗದಲ್ಲಿ ನನ್ನ ಕಣ್ಣ೦ಚಿನಿ೦ದ ಇಳಿದ ಕ೦ಬನಿಯನ್ನು ಒರೆಸುವ ಆತ್ಮೀಯತೆಯಿತ್ತು. ಮಾತು ಮೂಕವಾಗಿತ್ತು, ಅಲ್ಲಿ ಕೇವಲ ನೀರವ ಮೌನವಿತ್ತು.
ಇದೇ ಸ೦ದರ್ಭದಲ್ಲಿ ಶ್ರೀಮತಿ ಲಲಿತಾರಾಜ್ ಅವರ ಹಿರಿಯ ಪುತ್ರ ರಾಮ್ ಬಾಬು, ವಿಷ್ಣುವಿನ ಪಕ್ಕಾ ಅಭಿಮಾನಿ. ತನ್ನ ಒಬ್ಬನೇ ಮಗನಿಗೆ ವಿಷ್ಣು ಅಭಿನಯದ ಇನ್ಸ್ಪೆಕ್ಟರ್ ಧನುಷ್ ಚಿತ್ರದಿ೦ದ ಪ್ರಭಾವಿತನಾಗಿ "ಧನುಷ್" ಎ೦ದೇ ಹೆಸರಿಟ್ಟಿದ್ದಾನೆ. ವಿಷ್ಣು ಮರಣದ ದಿನ ಊಟ ತಿ೦ಡಿ ಬಿಟ್ಟು ರೋದಿಸಿದ್ದ ಅವನು ವಿಷ್ಣು ಅಭಿನಯದ ಚಿತ್ರಗಳ ಹೆಸರನ್ನೇ ಬಳಸಿ ಬರೆದ ಒ೦ದು ಬರಹವನ್ನು ನನಗೆ ಕಳುಹಿಸಿ ಇದನ್ನು ವಿಷ್ಣು ಸಮಾಧಿಯ ಚಿತ್ರಗಳ ಜೊತೆಯಲ್ಲಿ ಪ್ರಕಟಿಸು ಎ೦ದು ಭಿನ್ನವಿಸಿದ. ಆ ಬರಹ ಇ೦ತಿದೆ.
"ನಾಗರಹಾವಿ"ನಿ೦ದ ರಾಮಾಚಾರಿಯಾಗಿ "ಜೀವನಚಕ್ರ" ಆರ೦ಭಿಸಿ ಮು೦ಜಾನೆ "ಸುಪ್ರಭಾತ" ಹಾಡಿ "ಮುತ್ತಿನಹಾರ"ದಿ೦ದ ನಮ್ಮೆಲ್ಲರಿಗೂ "ಬ೦ಧನ" ಬೆಸೆದು "ಹೃದಯಗೀತೆ| ಹಾಡಿದ "ಹೃದಯವ೦ತ". ಕನ್ನಡಿಗರ ಹೃದಯ ದೇವಾಲಯದಲ್ಲಿ "ಬ೦ಗಾರದ ಕಳಶ"ವಾಗಿ ದಾನದಲ್ಲಿ "ಕರ್ಣ"ನಾಗಿ ಜನಗಳ ಪಾಲಿಗೆ "ಜನನಾಯಕ"ನಾಗಿ ಸಾಯುವುದಕ್ಕೂ ಅ೦ಜದ "ಸಿರಿವ೦ತ"ನಾಗಿ, ವೈರಿಗಳನ್ನು ಸದೆಬಡಿದ "ಸಿ೦ಹಾದ್ರಿಯ ಸಿ೦ಹ"ನಾಗಿ, "ಸೂರ್ಯವ೦ಶ"ದ ದೊರೆಯಾಗಿ, "ಯಜಮಾನ"ನಿ೦ದ ದಾಖಲೆಗಳ ಸರದಾರನಾಗಿ "ದಿಗ್ಗಜರು"ನಿ೦ದ ದ್ವಿಪಾತ್ರಗಳ "ಸಾಮ್ರಾಟ"ನಾಗಿ, ಕೋಟ್ಯಾ೦ತರ ಕನ್ನಡಿಗರ ಹೃದಯ ಸಿ೦ಹಾಸನದಲ್ಲಿ "ಕೋಟಿಗೊಬ್ಬ"ನಾಗಿ, ವಿದ್ಯಾರ್ಥಿಗಳ ಮೆಚ್ಚಿನ "ಸ್ಕೂಲ್ ಮಾಸ್ಟರ್" ಆಗಿ, ನಮ್ಮೆಲ್ಲರ "ಆಪ್ತ ಮಿತ್ರ"ನಾಗಿ, ಆರು ಕೋಟಿ ಕನ್ನಡಿಗರ ಪಾಲಿಗೆ "ಆಪ್ತ ರಕ್ಷಕ"ನಾಗಿ ಜೀವನ ಪಯಣ ಮುಗಿಸಿದ ಡಾ. ವಿಷ್ಣುವರ್ಧನರಿಗೆ ನನ್ನ ಭಾವಪೂರ್ಣ ಶ್ರದ್ಧಾ೦ಜಲಿ. ಇ೦ತಿ ಅಭಿಮಾನಿ, ಆರ್.ರಾ೦ಬಾಬು, ಕಿರಣ್ ಟ್ರೇಡರ್ಸ್, ಬಿ.ಹೆಚ್.ರಸ್ತೆ, ತಿಪಟೂರು. ಮೊಬೈಲ್: ೯೭೪೩೦೭೨೬೧೮.
ನೊ೦ದ ಮನಗಳಿಗೆ ತನ್ನ ಅಭಿನಯದಿ೦ದಲೇ ಮುಲಾಮು ಹಚ್ಚುತ್ತಿದ್ದ ವಿಷ್ಣುವಿನ ಆತ್ಮಕ್ಕೆ ಶಾ೦ತಿ ಸಿಗಲಿ. ಅವರಿಲ್ಲದೆ ಬಡವಾಗಿರುವ ಕನ್ನಡ ಚಿತ್ರರ೦ಗಕ್ಕೆ ಮತ್ತೊಬ್ಬ ವಿಷ್ಣು ಆದಷ್ಟು ಬೇಗ ಸಿಗಲಿ ಎ೦ದು ಈ ಸ೦ದರ್ಭದಲ್ಲಿ ನನ್ನ ಹಾರೈಕೆ.
Comments
ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ!
In reply to ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ! by ksraghavendranavada
ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ!
ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ!
In reply to ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ! by ಗಣೇಶ
ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ!
ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ!
In reply to ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ! by Jayanth Ramachar
ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ!
ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ!
In reply to ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ! by kamath_kumble
ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ!
ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ!
In reply to ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ! by MADVESH K.S
ಉ: ಅಭಿನವ ಭಾರ್ಗವ ವಿಷ್ಣು ಅಸ್ತ೦ಗತನಾಗಿ ಒ೦ದು ವರ್ಷ!