ಕಾಮನಬಿಲ್ಲು
ಕವನ
ಬಿದ್ದ ಮಳೆಗೆ ಭೂಮಿ ಘಮ್ಮೆನ್ನುವ ಹಾಗೆ,
ಜಲಪಾತದ ಧುಮುಕಿಗೆ ತೊಯ್ದ ಬ0ಡೆಯ ಹಾಗೆ,
ಎದ್ದೊಡನೆ ನೆನಪಾಗುವೆ ನೀ ದೇವತೆಯ ಹಾಗೆ .........!
ಬದುಕಿನ ಹೆಜ್ಜೆಗೆ ಉತ್ಸಾಹದ ಗೆಜ್ಜೆ ,
ನೀ ಸುಳಿದರೆನ್ನ ಬಳಿಗೆ
ನೆರೆ ಬ0ದ ಹಾಗೆ ಹೊಳೆಗೆ..........!
ಆಗಸಕೂ ಭೂಮಿಗೂ ಮಧ್ಯೆ
ಸುರಿದ ಮಳೆಯಲ್ಲೊ0ದು ಕಾಮನಬಿಲ್ಲು "ನೀನು"
ನಿನ್ನ ಸ್ವಪ್ನಹೀನ ಕಣ್ಣುಗಳ ಉದಾಸೀನ
ವಿದಾಯದ ನೆನಪಲ್ಲಿ ! "ನಾನು"