ಹಳ್ಳಿ ಹಳ್ಳಿಗೂ Internet

ಹಳ್ಳಿ ಹಳ್ಳಿಗೂ Internet

 ಒಬ್ಬ ರೈತ ಇವತ್ತು ತಾನು ಬೆಳೆದದ್ದನ್ನ ಮಾರಬೇಕು ಅಂದ್ರೆ ದಳ್ಳಾಳಿ ಕಾಲು ಹಿಡಿಬೇಕು. ದಳ್ಳಾಳಿ ಹೇಳಿದ್ದೇ Rateಉ.  ಆಮೇಲೆ ಆ ದಳ್ಳಾಳಿ ಒಂದಕ್ಕೆ ಎರಡರಂಗೆ Retailer ಅತ್ರ ಮಾರ್ಕೊತಾನೆ. ಕಷ್ತ ಪಟ್ಟಿದ್ದೆಲ್ಲಾ ರೈತ, ಆದ್ರೆ ಹೆಚ್ಚಿನ ಲಾಭ ಪಡೆಯುವವ ದಳ್ಳಾಳಿ.  ಈ ದಳ್ಳಾಳಿ ಪದ್ದತಿಯನ್ನ ಕಿತ್ತಾಕ್ಬೇಕು ಅಂದ್ರೆ ಅಂತರ್ಜಾಲದ ಮೂಲಕ Retailer ಮತ್ತು ರೈತರ ನಡುವೆ ನೇರ ಸಂಪರ್ಕ ಸಾದಿಸೋದು. ಅಷ್ಟೇ ಅಲ್ಲ  ಅರೋಗ್ಯ, ಶಿಕ್ಷಣ, ಸರ್ಕಾರದ ಸೇವೆ ಸವುಲತ್ತುಗಳು, ಇದೆಲ್ಲದರ ಮಾಹಿತಿ ನೇರವಾಗಿ ಹಳ್ಳಿಗಾಡಿನ ಜನಕ್ಕೆ ಅಂತರ್ಜಾಲದ ಮೂಲಕ ತಲುಪ್ಸುದ್ರೆ ರೈತರಿಗೆ ಎಷ್ಟು ಅನುಕೂಲ ಅಲ್ವ ? ಇದೆಲ್ಲಾ ನಿಜವಾಗ್ಲೂ ಸಾಧ್ಯನ ಅಂತ ಕೇಳ್ತೀರಾ ?  ನಮ್ಮ ಕೇಂದ್ರ ಸರ್ಕಾರ ಭಾರತದಲ್ಲಿ ಸುಮಾರು ಒಂದು ಲಕ್ಶ ಹಳ್ಳಿಗಳಿಗೆ ಈ ರೀತಿ ಅಂತರ್ಜಾಲದ ಸೇವೆ ಒದಗಿಸುವ ಕೇಂದ್ರಗಳನ್ನ(Common service centers - CSC) ಸ್ಥಾಪಿಸೊಕ್ಕೆ ಮುಂದಾಗಿದೆ. ನಿಜವಾಗ್ಲೂ ಈ ಯೋಜನೆ ಸಕ್ಸಸ್ ಆಯ್ಥು ಅಂದ್ರೆ ಒಂತರಾ ಇದು ನಮ್ಮ ರೈತಾಪಿ ಜನಗಳ್ಗೆ Shortcut to Empowerment.  ಮೊದಲನೆ ಅಂತದಲ್ಲಿ ಕೇವಲ ೫ ರಾಜ್ಯಗಳು. ಅದರಲ್ಲಿ ಕರ್ನಾಟಕವೂ ಇದೆ.

ಸಂಪೂರ್ಣ ನೆಟ್ವರ್ಕ್ ಹೇಗಿರುತ್ತೆ ಅಂದ್ರೆ, ರಾಜ್ಯದ ರಾಜಧಾನಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಒದಗಿಸುವ SWAN (State Wide Area Network)ಎಂಬ ನೆಟ್ವರ್ಕ್ ಇರುತ್ತೆ. ಹಾಗೆ ಪ್ರತಿಯೊಂದು ಜಿಲ್ಲೆಯಿಂದ ಎಲ್ಲಾ ತಲ್ಲೋಕು ಕೇಂದ್ರಗಳಿಗೆ ಮತ್ತು ಎಲ್ಲಾ ತಲ್ಲೋಕು ಕೇಂದ್ರಗಳಿಂದ ಪ್ರತಿ ಹಳ್ಳಿಗಳಿಗೆ ಸಂಪರ್ಕ ಒದಗಿಸುವ ಇನ್ನೊಂದು ನೆಟ್ವರ್ಕ್ ಇರುತ್ತೆ.  ಈ ನೆಟ್ವರ್ಕ್ ಕೇವಲ ಸಂಪರ್ಕ ಒದಗಿಸಬೋದು, ಈ ಸಂಪರ್ಕ ಬಳಸಿಕೊಂಡು ಸರ್ಕಾರ ಅಥವಾ ಇನ್ಯಾವುದೇ ಉದ್ಯಮದವರು ತಮ್ಮ ತಮ್ಮ portal ಅಥವಾ ವೆಬ್ ಸೈಟ್ಗಳಿಂದ ತರ ತರದ ಸೇವೆಯನ್ನ ಜನರಿಗೆ ಮುಟ್ಟಿಸಬೋದು.  ಈ ಯೋಜನೆ ಬರೀ ಸರ್ಕಾರದವ್ರೇ ಸಂಪೂರ್ಣವಾಗಿ ನೆಡೆಸ್ತಾರೆ ಅಂದ್ರೆ "ಇದು ಗ್ಯಾರಂಟಿ Flop" ಅನ್ಬೋದಿತ್ತು. ಆದ್ರೆ ಈ ಯೋಜನೆ ನೆಡೆಯೋದು Public-private-partnership ಇಂದ.

SWAN ನೆಟ್ವರ್ಕ್ ಪ್ರತಿ ರಾಜ್ಯದವ್ರು ಸ್ತಾಪಿಸಿದಾರೆ ಅಥವಾ ಸ್ಥಾಪಿಸ್ತಾ ಇದಾರೆ. ಇನ್ನು ಜಿಲ್ಲೆಯಿಂದ ತಲ್ಲೋಕಿನವರ್ಗೆ ಸಂಪರ್ಕ ಒದಗಿಸಿ ತಲೂಕಿನಲ್ಲಿ ಒಂದೊಂದು ಅಂತರ್ಜಾಲದ ಕೇಂದ್ರ ಸ್ಥಾಪಿಸುವ ಜವಾಬ್ದಾರಿ ಖಾಸಗಿ ಅವರದ್ದು.  ಈ ತಲ್ಲೋಕು ಕೇಂದ್ರ ಸ್ಥಾಪನೆಗೆ ಮತ್ತು ಆ ಕೇಂದ್ರ ಸ್ವತಂತ್ರವಾಗಿ ಲಾಭ ಗಳಿಸುವ ವರ್ಗೂ, ಹಲವು ವರ್ಷಗಳ ಕಾಲ ಕೇಂದ್ರ ಸರ್ಕಾರ ಸ್ವಲ್ಪ ಮಟ್ಟಿಗೆ ಆರ್ಥಿಕ ಸಹಾಯ ಮಾಡುತ್ತೆ .  ಅದೇ ರೀತಿ ಹಳ್ಲಿಗಳಲ್ಲಿ ಈ ರೀತಿಯ ಅಂತರ್ಜಾಲ ಕೇಂದ್ರ ಸ್ಥಪನೆಗೆ ಮತ್ತು ಕೆಲ ವರ್ಷಗಳ ಕಾಲ ಆರ್ಥಿಕ ನೆರವು ಒದಗಿಸೋ ಜವಾಬ್ದಾರಿ ರಾಜ್ಯ ಸರ್ಕಾರದವರ್ದು. ಹಳ್ಳಿಗಳಲ್ಲಿ ಈ ರೀತಿಯ ಕೇಂದ್ರ ಲಾಭದಾಯಕವಾಗಿ ನೆಡೆಸೋದು ಖಾಸಗಿಯವರ್ಗೆ ಬಿಟ್ಟಿದ್ದು. ಈ ರೀತಿಯ ಮಾದರಿ ನಿಜವಾಗ್ಲೂ ಗೆಲುವು ಸಾದಿಸಬೋದು ಅಂತ ನನ್ನ ಅನಿಸಿಕೆ.

ಇನ್ನು ಮುಖ್ಯವಾದ ವಿಷಯಕ್ಕೆ ಬರೋಣ. ನಮ್ಮ ರಾಜ್ಯ ಸರ್ಕಾರ ಈ ಮಹತ್ತರ ಯೋಜನೆಗೆ ಸಿದ್ದವಾಗಿದೆಯೇ ??   ಈ ಯೋಜನೆ ಸಫಲವಾಗೋದಕ್ಕೆ ಏನೇನು Groundwork ಮಾಡ್ತಾ ಇದೆ ? ಅಂತರ್ಜಾಲದಲ್ಲಿ ಎಷ್ಟು ಹುಡುಕಾಡಿದ್ರೂ ಕರ್ನಾಟಕ ಮತ್ತು ಈ ಯೋಜನೆ ಒಳಗೊಂಡಿರೋ ಒಂದು ದಾಖಲೆಯೂ ಸಿಗ್ಲಿಲ್ಲ. ಬಹಳ ಬೇಸರ ಆಯ್ಥು.  ಎಲ್ರೂ ನಿದ್ದೆ ಒಡಿತಾ ಇದಾರೆ ಅನ್ಸುತ್ತೆ. ಕನ್ನಡವನ್ನ ಅಂತರ್ಜಾಲದಲ್ಲಿ ಹಬ್ಬಿಸೋಕ್ಕೆ ಇದಕ್ಕಿಂತ ಅವಕಾಶ ಬೇಕೆ ? ಈ ಯೋಜನೆಅಡಿ ಕನ್ನಡದಲ್ಲಿ  ಎಲ್ಲಾ ಸೇವೆಗಳು ಜನರಿಗೆ ತಲುಪೋ ಹಾಗೆ ಮಾಡುದ್ರೆ Digital Divide  ಎಷ್ಟು ಕಡಿಮೆ ಆಗುತ್ತಲ್ವಾ ? ದಯವಿಟ್ಟು ಈ ವಿಷಯವನ್ನ ಯಾರಾದ್ರೂ ಪರ್ತಕರ್ತರು ಪ್ರಕಟಿಸಿ ನಮ್ಮ ಸರ್ಕಾರ ಈ ಯೋಜನೆಯನ್ನ ಬಹಳ Seriousಆಗಿ ಪರಿಗಣಿಸಬೇಕು ಅಂತ ತಿಳಿಸಿ.

ಈ ವಿಷಯದ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಕಂಡ ಲಿಂಕ್ನಲ್ಲಿ ದೊರೆಯುತ್ತೆ

http://www.mit.gov.in/csc/MediaBrief.asp

http://www.mit.gov.in/cscguidelines.asp

ಯದುನಂದನ್

Rating
No votes yet

Comments