ಹೊಸ ವರ್ಷ, ಹೊಸ ಸಂಕಲ್ಪ
“ಬೆಟರ್ ಲೇಟ್ ದ್ಯಾನ್ ನೆವರ್” ಅಂತಾರೆ. ಜನವರಿ ಎರಡಾದರೇನಂತೆ ತಡವಾಗಿಯಾದರೂ ತಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷದಲ್ಲಿ ಕಡಿಮೆ ಬರೆಯುತ್ತಿರುವವರು ಹೆಚ್ಚು ಬರೆಯಲಿ, ಹೆಚ್ಚು ಬರೆಯುತ್ತಿರುವವರು ಇನ್ನಷ್ಟು ಬರೆಯಲಿ ಎನ್ನುವ ಹಾರೈಕೆಗಳೊಂದಿಗೆ...
ಹೊಸ ವರುಷ ಎಂದಕೂಡಲೇ ನಮ್ಮ ಗಮನ ತಿರುಗುವುದು ಹೊಸ ಸಂಕಲ್ಪದೆಡೆಗೆ. ತೂಕ ಕಡಿಮೆ ಮಾಡ್ಬೇಕು, ವ್ಯಾಯಾಮ ಮಾಡ್ಬೇಕು, ಸಿಗರೆಟ್ ಬಿಡಬೇಕು, ಸೇಂದಿ ನಿಲ್ಲಿಸಿ ನೀರು ಹೆಚ್ಚು ಕುಡಿಯಬೇಕು, ಒಳ್ಳೆಯ ಹೆಂಡತಿಯಾಗಬೇಕು, ಆದರ್ಶ ತಂದೆಯಾಗಬೇಕು, ಉತ್ತಮ ಮಿತ್ರನಾಗಬೇಕು....ಹೀಗೆ ಸಾಗುತ್ತದೆ ಬಯಕೆಗಳ ಮೆರವಣಿಗೆ. ಆದರೆ ಶಾರೀರಿಕ ಮತ್ತು ಇತರೆ ಕುಂದು ಕೊರತೆಗಳ ಬಗ್ಗೆ ಗಮನ ಹರಿಸುವ ನಾವು ನಮ್ಮ ಬುದ್ಧಿ ಮತ್ತೆಯನ್ನು ಇನ್ನಷ್ಟು ವೃದ್ಧಿಸುವ ಕಡೆ ಯೋಚಿಸಿದರೆ ಎಷ್ಟು ಚೆಂದ ಅಲ್ಲವೇ? ವರುಷಗಳುರುಳಿದಂತೆ, ಸಂಕಲ್ಪಗಳು ಸೊರಗಿದಂತೆ, ನಮ್ಮ ಬುದ್ಧಿ ಶಕ್ತಿಯೂ ಕ್ಷೀಣಿಸುತ್ತದೆ ಎಂದು ನಮ್ಮ ನಂಬಿಕೆಯಾದರೆ ಇಲ್ಲಿದೆ ಶುಭ ವಾರ್ತೆ. ಮೆದುಳಿನ ಶಕ್ತಿ ಎಳೆಯರಲ್ಲಿ ಮಾತ್ರವಲ್ಲ ಇಳಿ ವಯಸ್ಸಿನವರಲ್ಲೂ ತೀಕ್ಷ್ಣ ವಾಗಿರಲು ಸಾಧ್ಯ ಎಂದು ಒಬ್ಬ neurologist ತಮ್ಮ ಲೇಖನದಲ್ಲಿ ಬರೆಯುತ್ತಾರೆ. ಬದುಕಿನ ಸಂಜೆಯಲ್ಲೂ ಹೊಸತನ್ನು ಹೇಗೆ ಕಲಿಯಬಹುದು ಎಂದು ಸವಿಸ್ತಾರವಾಗಿ ವರ್ಣಿಸಿದ್ದಾರೆ ಈ ಲೇಖಕ. ಆಂಗ್ಲ ಭಾಷೆಯಲ್ಲಿರುವ ಈ ಲೇಖನವನ್ನು ಓದಲು ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.
http://www.nytimes.com/2011/01/01/opinion/01sacks.html?src=ISMR_AP_LO_MST_FB
ಮತ್ತೊಮ್ಮೆ ಅಚ್ಚುಮೆಚ್ಚಿನ 'ಸಂಪದ' ದ ಬಂಧು ಭಗಿನಿಯರಿಗೆ ಹೊಸ ವರುಷ, ಹೊಸ ಹರುಷ ದ ಹಾರೈಕೆಗಳು.