ಶಿಲೆಗಳು ಸಂಗೀತವಾ ಹಾಡಿದೆ !

ಶಿಲೆಗಳು ಸಂಗೀತವಾ ಹಾಡಿದೆ !

ಶಿಲೆಗಳು ಸಂಗೀತವಾ ಹಾಡಿದೆ
ಎಲ್ಲೆಡೆ ಹೊಸ ವರ್ಷದ ಸಂಭ್ರಮ. 
ಹಿಂದಿನ ವರ್ಷಗಳಲ್ಲಾಗದ ಬದಲಾವಣೆ ಈ ವರ್ಷ ತರುತ್ತದೆ ಎಂಬೋ ಮನೋಭಾವದಿಂದ, ಹೊಸ ವರ್ಷದ ಮೇಲೆ ವಿಪರೀತ ಜವಾಬ್ದಾರಿ ಹೊರಿಸಿ, ತಮ್ಮಾಸೆ ಈಡೇರದೆ ಇದ್ದಾಗ, ವರ್ಷಾಂತ್ಯಕ್ಕೆ, ಕಳೆದು ಹೋದ ಹಳೆಯ ವರ್ಷವನ್ನು ಯಕ್ಕಾ-ಮಕ್ಕಾ ಬೈದು ಇತಿಹಾಸಕ್ಕೆ ತಳ್ಳುವ ಪರಿಪಾಠ ಮುಂದುವರೆದಿರುವ ಈ ಶುಭವೇಳೆಯಲ್ಲಿ, ನಿಂತಲ್ಲೇ ಮೌನವಾಗಿ ನೂತನ ವರ್ಷವನ್ನು ಕನ್ನಡ ಚಲನಚಿತ್ರಗಳನ್ನು ಹಾಡಿಕೊಂಡು ಎಂಜಾಯ್ ಮಾಡುವ ಒಂದು ಗುಂಪಿದೆ.
ಅವರು ಯಾರು ಎಂದಿರಾ ... ಮೂರ್ತಿ’ಗಳು ... ನಮ್ಮೂರ ’ಸದಾನಂದಮೂರ್ತಿಗಳು, ವಾಸುದೇವಮೂರ್ತಿಗಳು, ರಾಮಮೂರ್ತಿಗಳು ಇತ್ಯಾದಿ ಮೂರ್ತಿಗಳ ಬಗ್ಗೆ ನಾನು ಹೇಳುತ್ತಿಲ್ಲ. 
ಯಾರೇ ಕೂಗಾಡಲಿ, ಊರೇ ಹೋರಾಡಲಿ, ನನ್ನ ನೆಮ್ಮದಿಗೆ ಭಂಗವಿಲ್ಲವೆಂದು, ಮಳೆ, ಬಿಸಿಲು, ಗಾಳಿಗೆ ಸದಾ ಮೈ ಒಡ್ಡಿ ನಿಂತೋ / ಕೂತೋ, ಜೀವ ಹೋದರೂ (ಇನ್ನೂ ಹೋಗದೆ ಇದ್ದವರನ್ನು ಹೊರತು ಪಡಿಸಿ) ಇನ್ನೂ ಅವರ ಸಾಧನೆಗಳಿಂದ ಹಸಿರಾಗಿರುವ Statue’ಗಳ ಬಗ್ಗೆ ಹೇಳುತ್ತಿರುವುದು.
(ಯಾರಿಗೆ ಇನ್ನೂ ಮೂರ್ತಿ’ಯಾಗುವ ಯೋಗ ಲಭಿಸಿಲ್ಲವೋ, ಅವರು ಮೂರ್ತಿಯಾದ ಮೇಲೆ ಈ ಹಾಡನ್ನು ಹಾಡುತ್ತಾರೆ ಎನ್ನೋಣವೇ?)
ಇಷ್ಟಕ್ಕೂ ಈ ಮೂರ್ತಿಗಳಿಗೆ ಹಾಡುಗಳ ಬಗ್ಗೆ ಹೇಗೆ ಗೊತ್ತು ಅಂದಿರಾ? ಹೆಚ್ಚುವರಿ ಮೂರ್ತಿಗಳು ಸರ್ಕಲ್’ನ ಮೂಲೆಯಲ್ಲೇ ಇರುತ್ತವೆ. ಹಾಗಾಗಿ ಕಾರುಗಳಲ್ಲಿನ FM, ರಿಂಗ್-ಟೋನ್’ಗಳಿಂದ ಹೀಗೇ ಎಲ್ಲೆಲ್ಲಿಂದಲೋ ಮೂಡಿ ಬರುವ ಹಾಡುಗಳನ್ನು ಕೇಳಿರುತ್ತಾರೆ.
ನನ್ನ ’ಮಾತು’ ಅತೀ ಅಯ್ತು ಅಂದಿರಾ? ಇನ್ನೂ ಹಳೇ ಲೇಖನದ hangover ಇರಬೇಕು ... ಈಗ ಹಾಡನ್ನು ಕೇಳಿಸಿಕೊಳ್ಳಿ, ನಿಮ್ಮ ಹಾಡುಗಳನ್ನು ಸೇರಿಸಿ, ಸಿನಿಮ ಹೆಸರುಗಳನ್ನು ನೀವೇ ಹೆಸರಿಸಿ ... ಆಯ್ತಾ?
*------*
ಗಾಂಧೀಜಿ: ನೋಡು ಸಂಸಾರದಲ್ಲಿ ರಾಜಕೀಯ, ನಾನು ನನ್ನ ಮನೆಯಲ್ಲೇ ಪರಕೀಯ
ನೆಹರು: ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ ... ಏನೆಂದು ಕೇಳಲು ಹೇಳಿತು ಜೇನಂಥ ಸವಿ ನುಡಿಯಾ
ಇಂದಿರಾಗಾಂಧಿ: ಅಂತಿಂಥ ಹೆಣ್ಣು ನಾನಲ್ಲ, ನನ್ನಂಥ ಹೆಣ್ಣು ಯಾರೂ ಇಲ್ಲ, ನಾ ಬರುವ ದಾರಿ
ರಾಣಿ ಚೆನ್ನಮ್ಮ: ಜಗವೇ ಒಂದು ರಣರಂಗ, ಧೈರ್ಯ ಇರಲಿ ನಿನ್ನ ಸಂಗ
ಅಂಬೇಡ್ಕರ್: (ಬೆಟ್ಟು ಮಾಡಿ ತೋರುತ್ತ) ಇವಳು ಯಾರು ಬಲ್ಲೆಯೇನೂ, ಇವಳ ಹೆಸರ ಹೇಳಲೇನೂ, ಇವಳ ದನಿಗೆ ತಿರುಗಲೇನೂ
ಕಾವೇರಿ ತಾಯಿ: ಉಪ್ಪಾ ತಿಂದಾ ಮೇಲೆ ನೀರಾ ಕುಡಿಯಲೇ ಬೇಕು, ತಪ್ಪಾ ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇಬೇಕು
ಸುಭಾಷ್ ಚಂದ್ರ ಬೋಸ್: ಸಾವಿರ ಸಾವಿರ ಯುಗ ಯುಗದಲ್ಲಿ ಸಾರಿದೆ ಸಂಗ್ರಾಮ ದುಜ್ಜನ ಸಜ್ಜನ ಸಂಗ್ರಾಮ  
ಮೈಕೆಲ್ಯಾಂಜಿಲೋ ಚಿತ್ರದ ವಿಗ್ರಹಗಳು: ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುದಿಯೋಕೆ ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೇ
ಸೋನಿಯಾ ಗಾಂಧಿ: ನನ್ನ ಸಮ ಯಾರಿಲ್ಲಾ, ನಂಗೆ ಯಾರ ಹಂಗಿಲ್ಲ, ಹಾರಾಟಕೆ ತೂರಾಟಕೆ ನಾನೆಂದು ಅಂಜೋದಿಲ್ಲ
Statue of Liberty: ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬದುಕೂ
ಸರ್ವಜ್ಞ್ನ ಮೂರ್ತಿ: ನಾನು ನಿಮ್ಮವನು ನಿಮ್ಮ ಮನೆಯವನು ನಿಮ್ಮ ಕರುಳಿನ ಕುಡಿ ಇವನು
ವಿಶ್ವೇಶ್ವರಯ್ಯ: ಸೋರುತಿಹುದು ಮನೆಯ ಮಾಳಿಗೆ ಅಜ್ಞ್ನಾನದಿಂದ ಸೋರುತಿಹುದು ಮನೆಯ ಮಾಳಿಗೆ
ರಾಣಿ ವಿಕ್ಟೋರಿಯಾ: ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ್ನ ನೆಮ್ಮಗಿದೆ ಭಂಗವಿಲ್ಲ
ವಿವೇಕಾನಂದ: ಆಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಕೆಲಸವು ಎಂದು, ಆಗದು ಕೆಲಸವು ಎಂದೂ  
ಕೆಂಪೇಗೌಡ: ಈ ಅಂಜದ ಎದೆಯಲಿ ನಂಜೇ ಇಲ್ಲ ತಗ್ಗುವ ಆಳಲ್ಲ, ತಲೆ ತಗ್ಗಿಸಿ ಬಾಳೊಲ್ಲ
ಬೇಲೂರು ಶಿಲಾಬಾಲಿಕೆ: ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡೀ ...
ಐನ್ಸ್ಟೀನ್: ನಾಕೊಂದ್ಲ ನಾಕು, ನಾಕೆರಡ್ಲಾ ಎಂಟು, ಇಷ್ಟೇ ಲೆಕ್ಕದಲುಂಟು, ಇಶ್ಟೇ ಲೆಕ್ಕದ ನಂಟು
ದಂಡಿ ಮಾರ್ಚ್: ಮುಂದೇ ನೀ ಹೋದಾಗ ಹಿಂದೇ ನಾ ಬರುವೇ ...
*------*

ಎಲ್ಲೆಡೆ ಹೊಸ ವರ್ಷದ ಸಂಭ್ರಮ !

ಹಿಂದಿನ ವರ್ಷಗಳಲ್ಲಾಗದ ಬದಲಾವಣೆ ಈ ವರ್ಷ ತರುತ್ತದೆ ಎಂಬೋ ಮನೋಭಾವದಿಂದ, ಹೊಸ ವರ್ಷದ ಮೇಲೆ ವಿಪರೀತ ಜವಾಬ್ದಾರಿ ಹೊರಿಸಿ, ತಮ್ಮಾಸೆ ಈಡೇರದೆ ಇದ್ದಾಗ, ವರ್ಷಾಂತ್ಯಕ್ಕೆ, ಕಳೆದು ಹೋದ ಹಳೆಯ ವರ್ಷವನ್ನು ಯಕ್ಕಾ-ಮಕ್ಕಾ ಬೈದು ಇತಿಹಾಸಕ್ಕೆ ತಳ್ಳುವ ಪರಿಪಾಠ ಮುಂದುವರೆದಿರುವ ಈ ಶುಭವೇಳೆಯಲ್ಲಿ, ನಿಂತಲ್ಲೇ ಮೌನವಾಗಿ ನೂತನ ವರ್ಷವನ್ನು ಕನ್ನಡ ಚಲನಚಿತ್ರಗಳನ್ನು ಹಾಡಿಕೊಂಡು ಎಂಜಾಯ್ ಮಾಡುವ ಒಂದು ಗುಂಪಿದೆ.

ಅವರು ಯಾರು ಎಂದಿರಾ ... ಮೂರ್ತಿ’ಗಳು ...

ನಮ್ಮೂರ ’ಸದಾನಂದಮೂರ್ತಿಗಳು, ವಾಸುದೇವಮೂರ್ತಿಗಳು, ರಮಣಮೂರ್ತಿಗಳು, ರಾಮಮೂರ್ತಿಗಳು ಇತ್ಯಾದಿ ಮೂರ್ತಿಗಳ ಬಗ್ಗೆ ನಾನು ಹೇಳುತ್ತಿಲ್ಲ. 

ಯಾರೇ ಕೂಗಾಡಲಿ, ಊರೇ ಹೋರಾಡಲಿ, ನನ್ನ ನೆಮ್ಮದಿಗೆ ಭಂಗವಿಲ್ಲವೆಂದು, ಮಳೆ, ಬಿಸಿಲು, ಗಾಳಿಗೆ ಸದಾ ಮೈ ಒಡ್ಡಿ ನಿಂತೋ / ಕೂತೋ, ಜೀವ ಹೋದರೂ (ಇನ್ನೂ ಹೋಗದೆ ಇದ್ದವರನ್ನು ಹೊರತು ಪಡಿಸಿ) ಇನ್ನೂ ಅವರ ಸಾಧನೆಗಳಿಂದ ಹಸಿರಾಗಿರುವ Statue’ಗಳ ಬಗ್ಗೆ ಹೇಳುತ್ತಿರುವುದು.

(ಯಾರಿಗೆ ಇನ್ನೂ ಮೂರ್ತಿ’ಯಾಗುವ ಯೋಗ ಲಭಿಸಿಲ್ಲವೋ, ಅವರು ಮೂರ್ತಿಯಾದ ಮೇಲೆ ಈ ಹಾಡನ್ನು ಹಾಡುತ್ತಾರೆ ಎನ್ನೋಣವೇ?)

ಇಷ್ಟಕ್ಕೂ ಈ ಮೂರ್ತಿಗಳಿಗೆ ಹಾಡುಗಳ ಬಗ್ಗೆ ಹೇಗೆ ಗೊತ್ತು ಅಂದಿರಾ? ಹೆಚ್ಚುವರಿ ಮೂರ್ತಿಗಳು ಸರ್ಕಲ್’ನ ಮೂಲೆಯಲ್ಲೇ ಇರುತ್ತವೆ. ಹಾಗಾಗಿ ಕಾರುಗಳಲ್ಲಿನ FM, ರಿಂಗ್-ಟೋನ್’ಗಳಿಂದ ಹೀಗೇ ಎಲ್ಲೆಲ್ಲಿಂದಲೋ ಮೂಡಿ ಬರುವ ಹಾಡುಗಳನ್ನು ಕೇಳಿರುತ್ತಾರೆ.

ನನ್ನ ’ಮಾತು’ ಅತೀ ಅಯ್ತು ಅಂದಿರಾ? ಇನ್ನೂ ಹಳೇ ಲೇಖನದ hangover ಇರಬೇಕು ... ಈಗ ಹಾಡನ್ನು ಕೇಳಿಸಿಕೊಳ್ಳಿ, ನಿಮ್ಮ ಹಾಡುಗಳನ್ನು ಸೇರಿಸಿ, ಸಿನಿಮ ಹೆಸರುಗಳನ್ನು ನೀವೇ ಹೆಸರಿಸಿ ... ಆಯ್ತಾ?

------

ಗಾಂಧೀಜಿ: ನೋಡು ಸಂಸಾರದಲ್ಲಿ ರಾಜಕೀಯ, ನಾನು ನನ್ನ ಮನೆಯಲ್ಲೇ ಪರಕೀಯ !

ನೆಹರು: ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ ... ಏನೆಂದು ಕೇಳಲು ಹೇಳಿತು ಜೇನಂಥ ಸವಿ ನುಡಿಯಾ

ಇಂದಿರಾಗಾಂಧಿ: ಅಂತಿಂಥ ಹೆಣ್ಣು ನಾನಲ್ಲ, ನನ್ನಂಥ ಹೆಣ್ಣು ಯಾರೂ ಇಲ್ಲ, ನಾ ಬರುವ ದಾರಿ

ರಾಣಿ ಚೆನ್ನಮ್ಮ: ಜಗವೇ ಒಂದು ರಣರಂಗ, ಧೈರ್ಯ ಇರಲಿ ನಿನ್ನ ಸಂಗ

ಅಂಬೇಡ್ಕರ್: (ಬೆಟ್ಟು ಮಾಡಿ ತೋರುತ್ತ) ಇವಳು ಯಾರು ಬಲ್ಲೆಯೇನೂ, ಇವಳ ಹೆಸರ ಹೇಳಲೇನೂ, ಇವಳ ದನಿಗೆ ತಿರುಗಲೇನೂ

ಕಾವೇರಿ ತಾಯಿ: ಉಪ್ಪಾ ತಿಂದಾ ಮೇಲೆ ನೀರಾ ಕುಡಿಯಲೇ ಬೇಕು, ತಪ್ಪಾ ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇಬೇಕು

ಸುಭಾಷ್ ಚಂದ್ರ ಬೋಸ್: ಸಾವಿರ ಸಾವಿರ ಯುಗ ಯುಗದಲ್ಲಿ ಸಾರಿದೆ ಸಂಗ್ರಾಮ ದುಜ್ಜನ ಸಜ್ಜನ ಸಂಗ್ರಾಮ  

ಮೈಕೆಲ್ಯಾಂಜಿಲೋ ಚಿತ್ರದ ವಿಗ್ರಹಗಳು: ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುದಿಯೋಕೆ ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೇ

ಸೋನಿಯಾ ಗಾಂಧಿ: ನನ್ನ ಸಮ ಯಾರಿಲ್ಲಾ, ನಂಗೆ ಯಾರ ಹಂಗಿಲ್ಲ, ಹಾರಾಟಕೆ ತೂರಾಟಕೆ ನಾನೆಂದು ಅಂಜೋದಿಲ್ಲ

Statue of Liberty: ದೀಪವು ನಿನ್ನದೇ, ಗಾಳಿಯು ನಿನ್ನದೇ, ಆರದಿರಲಿ ಬದುಕೂ ...

ಸರ್ವಜ್ಞ್ನ ಮೂರ್ತಿ: ನಾನು ನಿಮ್ಮವನು ನಿಮ್ಮ ಮನೆಯವನು ನಿಮ್ಮ ಕರುಳಿನ ಕುಡಿ ಇವನು

ವಿಶ್ವೇಶ್ವರಯ್ಯ: ಸೋರುತಿಹುದು ಮನೆಯ ಮಾಳಿಗೆ ಅಜ್ಞ್ನಾನದಿಂದ ಸೋರುತಿಹುದು ಮನೆಯ ಮಾಳಿಗೆ

ರಾಣಿ ವಿಕ್ಟೋರಿಯಾ: ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ, ಮಹರಾಣಿಯ ಹಾಗೇ 

ವಿವೇಕಾನಂದ: ಆಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಕೆಲಸವು ಎಂದು, ಆಗದು ಕೆಲಸವು ಎಂದೂ  

ಕೆಂಪೇಗೌಡ: ಈ ಅಂಜದ ಎದೆಯಲಿ ನಂಜೇ ಇಲ್ಲ ತಗ್ಗುವ ಆಳಲ್ಲ, ತಲೆ ತಗ್ಗಿಸಿ ಬಾಳೊಲ್ಲ

ಬೇಲೂರು ಶಿಲಾಬಾಲಿಕೆ: ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡೀ ...

ಐನ್ಸ್ಟೀನ್: ನಾಕೊಂದ್ಲ ನಾಕು, ನಾಕೆರಡ್ಲಾ ಎಂಟು, ಇಷ್ಟೇ ಲೆಕ್ಕದಲುಂಟು, ಇಷ್ಟೇ ಲೆಕ್ಕದ ನಂಟು

ದಂಡಿ ಮಾರ್ಚ್: ಮುಂದೇ ನೀ ಹೋದಾಗ ಹಿಂದೇ ನಾ ಬರುವೇ ...

(ಮೂರ್ತಿ ಸ್ಥಾಪನೆಯಾದ ಮೇಲೆ)

ದೇವೇಗೌಡ: ಯಾರೇ ಕೂಗಾಡಲಿ, ಊರೇ ಹೋರಾಡಲಿ ನಿನ್ನ ನೆಮ್ಮಗಿದೆ ಭಂಗವಿಲ್ಲ, ಎಮ್ಮೇ ನಿನಗೆ ಸಾಟಿ ಇಲ್ಲ

------

ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು ...

Comments