ಈ ಚಿತ್ರದಲ್ಲಿರುವುದೇನು? ಹೇಳಬಲ್ಲಿರಾ?

ಈ ಚಿತ್ರದಲ್ಲಿರುವುದೇನು? ಹೇಳಬಲ್ಲಿರಾ?

 

ಈ ಚಿತ್ರದಲ್ಲಿರುವುದೇನು?

ಹೇಳಬಲ್ಲಿರಾ?

ಯಾವುದೇ ಸಿಪ್ಪೆಯ ರಾಶಿಯಲ್ಲ..!!
ಅಥವಾ
ಯಾವುದೇ ನೆಲ ಹಾಸಿನ ಡಿಸೈನ್ ಅಲ್ಲ!!!

 

 

ಸಾಮಾನ್ಯವಾಗಿ ಮುರಮ್, ಲ್ಯಾಟ್ರೈಟ್ ಎಂದು ಕರೆಯಲ್ಪಡುವ ಈ ಕಲ್ಲಿನ ಹಾಸು ದಕ್ಷಿಣ ಕನ್ನಡ, ಕಾಸರಗೋಡು ಕಡೆ ಸಿಗುತ್ತದೆ,
ಇದನ್ನೇ ಸಾಮಾನ್ಯವಾಗಿ ಮನೆ ಕಟ್ಟಲು ಇಟ್ಟಿಗೆಯ ಬದಲು ಉಪಯೋಗಿಸುತ್ತಾರೆ. ಮಳೆ ಕಡಿಮೆಯಿದ್ದಲ್ಲಿ ಹೊರಗಿನ ಗಾರೆ ಮಾಡದಿದ್ದರೂ ಸರಿಯೇ.
ಇಲ್ಲದಿದ್ದರೆ ಕಾಲಕ್ರಮೇಣ ನೀರು ಗಾಳಿ ಬಿಸಿಲಿನಿಂದಾಗಿ ಅದರ ಮೇಲ್ಮೈಯ ಪದರದ ಮಣ್ಣೆಲ್ಲವೂ ಉದುರಿ ಜಾಸ್ತಿ ತೂತುಗಳಾಗಿ ಕಾಣಿಸಿಕೊಳ್ಳುತ್ತದೆ.(ಅದಕ್ಕೇ ಇದನ್ನು ಜಂಬಿಟ್ಟಿಗೆ ಎನ್ನುತ್ತಾರೇನೋ)
ಸಾಮಾನ್ಯವಾಗಿ ಇದರ ಉದ್ದಾನುದ್ದ ಹಾಸೆಯನ್ನೇ ಪಾರೆ ಎನ್ನುತ್ತಾರೆ, ನಾನು ಹೀಗೆ ವರ್ಷಾನುಗಟ್ಟಲೆ ಬಿಸಿಲು ಮಳೆ ಗಾಳಿಯಿಂದಾಗಿ ತನ್ನ ಮೇಲ್ಪದರದ ಮಣ್ಣೆಲ್ಲವನ್ನೂ ಕಳೆದುಕೊಂಡ ಬಣ್ಣವಿಳಿದ ಪಾರೆ ಕಲ್ಲಿನ ಹಾಸಿನ ಪ್ರಸ್ತುತ  ಚಿತ್ರವಿದು.

 

ಇದರಲ್ಲಿ ಭಾಗವಹಿಸಿದ ಬಾಂಧವರೇ ನಿಮ್ಮೆಲ್ಲರ ಪ್ರತಿಕ್ರೀಯೆಗಳಿಗೆ ತುಂಬಾ ತುಂಬಾ ಧನ್ಯವಾದಗಳು,
ಸರಿಯುತ್ತರ ಕೊಟ್ಟ ಅರವಿಂದ್, ಕೃಷ್ಣ ಪ್ರಕಾಶ್,ಪಾಲಚಂದ್ರ ಮೂವರಿಗೂ  ವಿಶೇಷ ಬಹುಮಾನಗಳು
ಮುಂದಿನ ಸಮ್ಮೇಲನಕ್ಕೇ ಹಾಜರಾದಲ್ಲಿ ಮಾತ್ರ.

 

 

 

 

 

Rating
No votes yet

Comments