ಫೇಸ್ ಬುಕ್ ಎಂಬ ಮಾಯೆ...

ಫೇಸ್ ಬುಕ್ ಎಂಬ ಮಾಯೆ...

ಬಹುಷಃ ಒಂದು ವರ್ಷದ ಮೊದಲು ಇರಬೇಕು ನಾನು ಫೇಸ್ ಬುಕ್ ನಲ್ಲಿ ನನ್ನ ಖಾತೆ ತೆರೆದದ್ದು. ಆದರೆ ಆರ್ಕುಟ್ ಉಪಯೋಗಿಸುತ್ತಿದ್ದ ನನಗೆ ಫೇಸ್ ಬುಕ್ ಅಸ್ಟೊಂದು ಆಕರ್ಷಕವಾಗಿ ಕಾಣದೆ ಎಲ್ಲೋ ಆಗೊಮ್ಮೆ ಈಗೊಮ್ಮೆ ಲಾಗ್ ಇನ್ ಆಗುತ್ತಿದ್ದುದು (ಈಗ ಆರ್ಕುಟ್ ಉಪಯೋಗಿಸುವುದು ಬಿಟ್ಟು ತಿಂಗಳುಗಳೇ kaledive ) ಆಫೀಸಿನಲ್ಲಿ ಎಲ್ಲರು ಫೇಸ್ ಬುಕ್ ಪೇಜ್ ನಲ್ಲಿ ಇರುತ್ತಿದ್ದುದು ನೋಡಿ ಏನಿದೆ ಅಂಥಾದ್ದು ಫೇಸ್ ಬುಕ್ ನಲ್ಲಿ ಎಂದು ನಾನು ಫೇಸ್ ಬುಕ್ ಉಪಯೋಗಿಸತೊಡಗಿದೆ. ಹಲವು ಸ್ನೇಹಿತರು ಫಾರ್ಮ್ ವಿಲ್ಲೆ ಗೆ ರಿಕ್ವೆಸ್ಟ ಗಳನ್ನು ಕಳುಹಿಸಿದ್ದರು. ಏನಿದು ಆಟ ಅಂತ ನೋಡಲು ಹೋದವನು ನನಗೇ ತಿಳಿಯದೆ ಅದರ ದಾಸನಾಗಿಬಿಟ್ಟೆ. ಮೊದಲೆಲ್ಲ ಬೇರೆಯವರು ಆಡಬೇಕಾದರೆ ಏನಿದು ಮಕ್ಕಳಾಟ ಎಂದು ಹೇಳುತ್ತಿದ್ದವನು ಕೇವಲ ೨ ತಿಂಗಳೊಳಗೆ ಫಾರ್ಮ್ ವಿಲ್ಲೆ ಜೊತೆಗೆ ಸಿಟಿ ವಿಲ್ಲೆ, ಟ್ರಶರ್ ವಿಲ್ಲೆ ಹಾಗೂ ಇನ್ನು ಹತ್ತು ಹಲವು ಆಟಗಳಲ್ಲಿ ಕಳೆದುಹೋಗಿಬಿಟ್ಟೆ.


ಇವತ್ತು ಫೇಸ್ ಬುಕ್ ಲಾಗ್ ಇನ್ ಅಗ್ತಿದ್ದಂತೆ ಯಾಕೋ ನಾನ್ ಆಟಗಳಿಗೆ ಅಡಿಯಾಳಗಿದ್ದೇನೆ ಎನ್ನಿಸಿತು. ಮೊದಲು ಮಾಡಿದ ಕೆಲಸ ಎಂದರೆ ಹೋಗಿ ಎಲ್ಲ ಗೇಮ್ಸ್ ಗಳನ್ನು ಬ್ಲಾಕ್ ಮಾಡಿ ಬಿಟ್ಟೆ. ಈಗ ಎಸ್ಟೋ ನಿರಾಳನಾಗಿದ್ದೇನೆ . ರಿಲಾಕ್ಷೆಷನ್ ಗೆ ಅಂತ ಆರಂಬಿಸಿದ ಆಟ ಒಂದು ರೀತಿಯ ಮಾನಸಿಕ ಒತ್ತಡ ತಂದದ್ದು ಸುಳ್ಳಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಫೇಸ್ ಬುಕ್ ಆಟಗಳು ಕೇವಲ ಮನೋರಂಜನೆಗೆ ಅಸ್ಟೇ, ಅದರಿಂದ ಯಾವುದೇ ಉಪಯೋಗವಿಲ್ಲ (no value addition). ಒಮ್ಮೆ ಆಡಲು ಶುರುವಿಟ್ಟುಕೊಂಡರೆ ಎಷ್ಟೊಂದು ಜನ ಅದಕ್ಕೆ ದಿನದ ಬಹು ಭಾಗ ವನ್ನು ಮೀಸಲಿಡ್ತಿದ್ದಾರೆ, ಎಸ್ಟೊಂದು ಸಮಯ ವ್ಯರ್ಥವಾಗಿಕಳೆದು ಹೋಗುತ್ತಿದೆ ಎಂದೆನಿಸದೆ ಇರದು. ಅಂತು ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಇನ್ನೆಂದೂ ಫೇಸ್ ಬುಕ್ ಗೇಮ್ಸ್ ಆಡುವುದಿಲ್ಲ ಅಂತ ನಿರ್ಧರಿಸಿದ್ದೇನೆ.


 


 


-ಸಂತೋಷ್

Rating
No votes yet

Comments