ನಾರದ ಶಾರದ ಬರೆಸಿದ ಕಾಗದ !

ನಾರದ ಶಾರದ ಬರೆಸಿದ ಕಾಗದ !

ಕವನ

ನಾರದ ಶಾರದ ಬರೆಸಿದ ಕಾಗದ !

 

ನಾರದ, ಶಾರದ
ಬರೆಸಿದ ಕಾಗದ
ನಡೆಸಿದೆ ಒಲವಿನ
ಬಾಳಿನ ಪಯಣ…..೧

 

ಸಂಗೀತ ಸ್ವರಮಾಲೆ
ಸಾಹಿತ್ಯ ರಸಮಳೆ
ತರ ತರ ರಸಗವಳ
ತಣಿಸಿದೆ ಮನದಾಳ…..೨

 

ತುಂತುರು ಹನಿಗಳು
ತಂತಿಯ ಸ್ವರಗಳು
ತೇಲುವ ಮೋಡಗಳು
ತೀರದ ಅಲೆಗಳು
ತರಿಸಿದೆ ತನುವಿಗೆ ತಾನನನ…..೩

 

ಸಂಗೀತ, ಸಾಹಿತ್ಯ
ಸ್ವರ, ಭಾವ, ನೃತ್ಯ
ನಲಿಸಿ ಮನವ ನಿತ್ಯ
ನೆಲೆಸಿದೆ ಶಾಂತಿ ಸತ್ಯ…..೪

 

ಹಸುರಿನ ಹಂದರ
ಹೂವಿನ ಗಂಧ
ಜೇನಿನ ನಾದ
ನವಿಲಿನ ಕೇಕೆ
ಕಳಿಸಿದೆ ಕಣ್ಣಲೇ ಕರೆಯೋಲೆ…..೫

 

ಮಾವಿನ ಚಿಗುರೆಲೆ
ಕುಹು ಕುಹು ಕೋಗಿಲೆ
ರಂಗಿನ ನೈದಿಲೆ
ಬಾನಲಿ ಚಂದಿರೆ
ಬರೆಸಿದೆ ಒಲವಿನ ಓಲೆ…..೬

Comments