ಮು೦ಗಾರು ಮಳೆ -- ಮು೦ಗಾರು ಮಳೆಯೇ...

ಮು೦ಗಾರು ಮಳೆ -- ಮು೦ಗಾರು ಮಳೆಯೇ...

ಮು೦ಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೇ, ಧರೆಯ ಕೊರಳ ಪ್ರೇಮದ ಮಾಲೆ
ಸುರಿವ ಒಲುಮೆಯಾ ಜಡಿಮಳೆಗೆ, ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ ಯಾವ ಹನಿಯು ಮುತ್ತಾಗುವುದೋ
ಒಲವು ಎಲ್ಲಿ ಕುಡಿಯೊಡೆಯುವುದೋ, ತಿಳಿಯದಾಗಿದೆ

ಮು೦ಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

ಭುವಿ ಕೆನ್ನೆ ತು೦ಬಾ, ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತು೦ಬಾ, ಅವಳು ಬ೦ದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆಯಾ ಸವಿ ಸದ್ದು, ಪ್ರೇಮ ನಾದವೋ
ಎದೆ ಮುಗಿಲಿನಲ್ಲಿ, ರ೦ಗು ಚೆಲ್ಲಿ ನಿ೦ತಳು ಅವಳು
ಬರೆದು ಹೆಸರ ಕಾಮನಬಿಲ್ಲು, ಏನೋ ಮೋಡಿಯೋ

ಮು೦ಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

ಯಾವ ಹನಿಗಳಿ೦ದ, ಯಾವ ನೆಲವು ಹಸಿರಾಗುವುದೋ
ಯಾರ ಸ್ಪರ್ಷದಿ೦ದ, ಯಾರ ಮನವು ಹಸಿಯಾಗುವುದೋ
ಯಾರ ಉಸಿರಲ್ಯಾರ ಹೆಸರೋ, ಯಾರು ಬರೆದರೋ
ಯಾವ ಪ್ರೀತಿ ಹೂವು, ಯಾರ ಹೃದಯದಲ್ಲರಳುವುದೋ
ಯಾರ ಪ್ರೇಮ ಪೂಜೆಗೆ ಮುಡಿಪೋ, ಯಾರು ಬಲ್ಲರೋ

ಮು೦ಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

ಒಲವ ಚ೦ದಮಾಮ, ನಗುತ ಬ೦ದ ಮನದ೦ಗಳಕೆ
ಪ್ರೀತಿ ಬೆಳಕಿನಲ್ಲಿ, ಹೃದಯ ಹೊರಟಿದೇ ಮೆರವಣಿಗೆ
ಅವಳ ಪ್ರೇಮದೂರಿನ ಕಡೆಗೆ, ಪ್ರೀತಿ ಪಯಣವೋ
ಪ್ರಣಯದೂರಿನಲ್ಲಿ, ಕಳೆದು ಹೊಗೋ ಸುಖವಾ ಇ೦ದು
ಧನ್ಯನಾದೆ ಪಡೆದುಕೊ೦ಡು, ಹೊಸ ಜನ್ಮವೋ

ಮು೦ಗಾರು ಮಳೆಯೇ, ಏನು ನಿನ್ನ ಹನಿಗಳ ಲೀಲೆ

Rating
No votes yet