ಬಾಳಬಂಡಿ ನಡೆಸುವ ಜೊತೆಗಾತಿ

ಬಾಳಬಂಡಿ ನಡೆಸುವ ಜೊತೆಗಾತಿ

ಕವನ

ಅಲಂಕಾರ ಆಡಂಬರವಿಲ್ಲದ ಸರಳ

ಸುಂದರ ನಿರಾಭರಣ ಸುಂದರಿ ಅವಳು..

ಸಹಜ ಸುಂದರವಾದ ರೂಪವತಿ  ಅವಳು..

ಹೆಸರಿಗೆ ತಕ್ಕ ಹಾಗೆ 'ಲಾವಣ್ಯ' ವತಿ ಅವಳು..

ಅರಳು ಹುರಿದಂತೆ ಪಟ ಪಟನೆ

ಮಾತಾಡುವ ಅವಳ ಮಾತುಗಳು..

ಬೆಳ್ಳಿ ಕಾಲ್ಗೆಜ್ಜೆ ತೊಟ್ಟು ಚುರುಕಾಗಿ

ಓಡಾಡುವ ಜಿಂಕೆಮರಿ ಅವಳು..

ಮೊದಲ ನೋಟದಲ್ಲೇ ಸೆಳೆಯುವ ಕಣ್ಣುಗಳು..

ಒಂಟಿಯಾಗಿದ್ದ ನನ್ನ ಬಾಳಿನ

ಬಂಡಿ ನಡೆಸಲು ಜೊತೆಯಾಗಿ ಬರುತಿಹಳು

Comments