ಚದುರೆ ಬಾರೆ ನಗೆಯ ಬೀರಿ ...
ಕವನ
ಚದುರೆ ಬಾರೆ ನಗೆಯ ಬೀರಿ ಚ೦ದ್ರಮ೦ಚಕೆ
ಮುದದಿ ಬರೆಯೆ ಪ್ರೇಮಕಥೆಯ ಹೊಸತು ಸ೦ಚಿಕೆ !!ಚದುರೆ!!
ಅದುರುತಿಹವು ತುಟಿಗಳೇಕೆ ಬೇಡ ನಾಚಿಕೆ
ಕದಪುಗಳಲಿ ಬೆವರಹನಿಗಳೇಕೆ ಹೆದರಿಕೆ
ಹಳೆಯಬೀಡಿನಲ್ಲಿ ನಿ೦ದ ಶಿಲೆಯಬಾಲಿಕೆ
ಬಿಳಿಚಿಕೊಳುವಳೀಗ ಸೋತು ನಿನ್ನ ರೂಪಕೆ !!ಚದುರೆ!!
ಮ೦ದ್ರದಲ್ಲಿ ನೀನು ಹಾಡನುಲಿಯೆ ಕಾಮಿನಿ
ಚ೦ದ್ರನಿಲ್ಲಿಗಿಳಿದುಬರುವ ಕೇಳಿ ಇನಿದನಿ
ತ೦ದ್ರತೆಯನೆ ಮರೆವೆ ನಿನ್ನ ಸನಿಹ ಮೋಹಿನಿ
ಇ೦ದ್ರಲೋಕ ಸಾಟಿಯೇನೆ ಮತ್ತಕಾಶಿನಿ !!ಚದುರೆ!!
ನಿನ್ನ ಬರವ ಎದುರುನೋಡಿ ಕಾದು ನಿ೦ತಿಹೆ
ಜೊನ್ನ ಬೆಳಕಿನಲ್ಲಿ ಸುಖಿಪ ಕನಸನಾ೦ತಿಹೆ
ಉರುಹುತಿರುವ ಮದನಶರಕೆ ಸೋತು ಬಳಲಿಹೆ
ವಿರಹದಗ್ನಿಯಲ್ಲಿ ಬೆ೦ದು ಕರಟಿ ಕರಗಿಹೆ !!ಚದುರೆ!!
ಎನ್ನ ತನುವ ಹೊದೆದ ಬಿಸಿಯ ತಣಿಸೆ ಬಳಿಗೆ ಬಾ
ಚಿನ್ನ ಮನದಿ ಹರುಷ ಸುಧೆಯ ಹರಿಸಲೀಗ ಬಾ
ಕನ್ನ ಹಾಕಿಯೆನ್ನ ಹೃದಯ ಸೂರೆಗೈಯೆ ಬಾ
ಕೆನ್ನೆಗೆ೦ಪ ಎನ್ನ ತುಟಿಗೆ ನೀಡೆ ಓಡಿ ಬಾ !!ಚದುರೆ!!
Comments
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by Jayanth Ramachar
ಉ: ಚದುರೆ ಬಾರೆ ನಗೆಯ ಬೀರಿ ...
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by sada samartha
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by raghumuliya
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by sada samartha
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by raghumuliya
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by sada samartha
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by raghumuliya
ಉ: ಚದುರೆ ಬಾರೆ ನಗೆಯ ಬೀರಿ ...
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by gopaljsr
ಉ: ಚದುರೆ ಬಾರೆ ನಗೆಯ ಬೀರಿ ...
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by partha1059
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by raghumuliya
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by partha1059
ಉ: ಚದುರೆ ಬಾರೆ ನಗೆಯ ಬೀರಿ ...
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by asuhegde
ಉ: ಚದುರೆ ಬಾರೆ ನಗೆಯ ಬೀರಿ ...
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by gopinatha
ಉ: ಚದುರೆ ಬಾರೆ ನಗೆಯ ಬೀರಿ ...
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by srimiyar
ಉ: ಚದುರೆ ಬಾರೆ ನಗೆಯ ಬೀರಿ ...
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by nagarathnavina…
ಉ: ಚದುರೆ ಬಾರೆ ನಗೆಯ ಬೀರಿ ...
ಉ: ಚದುರೆ ಬಾರೆ ನಗೆಯ ಬೀರಿ ...
In reply to ಉ: ಚದುರೆ ಬಾರೆ ನಗೆಯ ಬೀರಿ ... by Ganeshperva
ಉ: ಚದುರೆ ಬಾರೆ ನಗೆಯ ಬೀರಿ ...