ನೋ...(ನಲಿ)ವಿನ ಚಿಲುಮೆ
ಕವನ
ಆವರಿಸಿದ ಬೇಸರದ ಧೂಮ
ಉಸಿರ ಬಿಗಿ ಹಿಡಿದ ನೋವು.
ಜೀವನದ ಲಯ, ಧಾಟಿ, ಉತ್ಸಾಹ
ಎಲ್ಲವೂ ಹೊಡೆಯುತಿವೆ ಗೋತಾ…
ಎಲ್ಲೋ ತನ್ಮಯತೆಯ ಸೆಳೆತ…
ನನಗೆ ನನ್ನೊಳಗಿನ ನಾನು ಗೋಚರ
ಪರರಿಗೆ ಸ್ಪಷ್ಟ ಅಗೋಚರ…
ನಾನೆಂಬುದು ಸತ್ಯವೇ !?
ನೋವಿಗುಂಟೆ ಚರಮ ?
ಹವಣಿಸಿರುವೆ ಚರಮಗೀತೆ ಹಾಡಲು.
ನೆಲ, ಜಲ, ವಾಯು ಅಗ್ನಿಯಂತೆ
ಅದೆಂದೂ ಚಿರ…!!!
ಮತ್ತೂ… ತನ್ಮಯತೆಯತ್ತ ಸೆಳೆತ…
-ಜ್ಞಾನ, ಮೈಸೂರು.