ಸ್ವ-ವಿಮರ್ಶೆ

ಸ್ವ-ವಿಮರ್ಶೆ

 


     ಸ್ವ-ವಿಮರ್ಶೆ

     ಹಲವು ಕಾರ್ಯಗಳ ಸಾಧಿಸದೆ ವಿಧಿಯಿಲ್ಲ
     ಮಹತ್ವದ ಕಾರ್ಯಗಳಲಿ ಗೆಲ್ಲದೆ ಬದುಕಿಲ್ಲ        
   
     ಪ್ರಮುಖ ಕೆಲಸಗಳೂ ತೋರುವುದು ಸೋಲು
     ನಮ್ಮೆಲ್ಲ ಶ್ರಮಗಳ ಅವು ಮಾಡುವವು ಪೋಲು

     ಒಮ್ಮೆ ಸೋತರೆ ಆಗುವುದು ಚಿಕ್ಕ ಪರಿಣಾಮ
     ಪುನರಾವರ್ತಿತ ತಪ್ಪು ಬೀರುವುದು ದುಷ್ಪರಿಣಾಮ

     ಅದಕ್ಕೆ ನಾವು ಆರಂಭಿಸಬೇಕು ಹೊಸ ಪ್ರಕ್ರಿಯೆಯ
     ಅಪಜಯವ ವಿಮರ್ಶಿಸುವ ಉತ್ತಮ ಪದ್ದತಿಯ  
 
     ಮಾಡಿದರೆ ವಸ್ತುನಿಷ್ಠ, ಕ್ರಮಬದ್ದ ವಿಮರ್ಶೆಯ   
     ತಿಳಿವುದು ಸೋಲಿಗೆ ಕಾರಣವಾದ ಅಂಶಗಳ            
      
     ಇದರಿಂದ ತಿಳಿವುದು ಕಾರ್ಯದಲಿ ಆದ ತಪ್ಪುಗಳು
     ಹಾಗೆಯೇ ಅವ ಸರಿಪಡಿಸಲು ಬೇಕಾದ ದಾರಿಗಳು    
    
     ರೂಪಿಸೋಣ ಎಲ್ಲಾ ಸರಿಪಡಿಸಲು ಕಾರ್ಯಕ್ರಮಗಳ
     ಕಾರ್ಯಶೀಲರಾಗಿ ಚುರುಕಾಗಿ ಮಾಡೋಣ ಕೆಲಸಗಳ  
 
     - ತೇಜಸ್ವಿ ಎ ಸಿ

Rating
No votes yet

Comments