ಸಾಫ್ಟ್ವೇರ್ ಇಂಜಿನಿಯರ್ ನ ಹಾಡು/ಪಾಡು :

ಸಾಫ್ಟ್ವೇರ್ ಇಂಜಿನಿಯರ್ ನ ಹಾಡು/ಪಾಡು :

ನನ್ನ ಗೆಳೆಯನಿಗೆ ಆಫೀಸಿನಲ್ಲಿ ಸಿಕ್ಕಾಪಟ್ಟೆ ಕೆಲಸ ಇದ್ದು ದಿನವೂ ತಡವಾಗಿ ಮನೆಗೆ ಹೋಗುತ್ತಿದ್ದಾನೆ. ಅವನು ತನ್ನ ಸ್ಥಿತಿ ವರ್ಣಿಸಿದ ಮೇಲೆ ನಾನು ಅವನಿಗೆ ಅರ್ಪಿಸುತ್ತಿರುವ ಕವನ/ಪದ್ಯ ಇದು:
ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಬೀಳಿಸಿ ನೋಡು ಹಾಡಿನ ಧಾಟಿಯಲ್ಲಿದೆ.... ಇದು ನನ್ನಿಷ್ಟದ ಹಾಡು... ಆದರೂ ಅವನಿಗೆ relax ಆಗಲಿ ಎಂದು ಬರೆದಿದ್ದೇನೆ..
ಈ ಹಾಡನ್ನು ಬಳಸಿದ್ದಕ್ಕೆ ಕ್ಷಮೆ ಇರಲಿ...

 

ಆಕಳಿಸಿ ನೋಡು ತೂಕಡಿಸಿ ನೋಡು,
ಪ್ರಾಜೆಕ್ಟ್ ಮುಗಿಯದು
ಎಷ್ಟೇ ಕುಟ್ಟು ಕೊನೆಯಲ್ಲಿ ಒಂದು ಬಗ್ಗು ಉಳಿವುದು
ಎಂದಿಗೂ ನಾನು ನಿನ್ನನು ಬಿಡೆನು ಎಂದು ನಗುವುದು
ದಿನವು ನಗುತಲಿರುವುದು ......

ರಾತ್ರಿ ಎಲ್ಲ ಕೂತು ನಾನು ಕೋಡು (code) ಕುಟ್ಟಿದೆ
ಬೆಳಿಗ್ಗೆ ಬಂದು ನೋಡಲು ಅದು ಕೆಟ್ಟು ಕೂತಿದೆ...
ಕುಟ್ಟಿ ಕುಟ್ಟಿ keyboard ಅಕ್ಷರ ಅಳಿಸಿ ಹೋಗಿದೆ...
ಅಳಿಸಿ ಹೋಗಿದೆ...

client spec , srs ಡಾಕುಮೆಂಟ್ ಎಲ್ಲ ಓದಿದೆ....
ಹಗಲು ಇರುಳು ಒಂದೂ ತಿಳಿಯದೆ
keyboard ಕುಟ್ಟಿದೆ...
ಎಲ್ಲ ಪರಿಶ್ರಮ ಒಂದೇ ದಿನದಿ ಕೈಯ್ಯ ಕೊಟ್ಟಿತೇ
ನನ್ನ ನಿದ್ದೆ ಕೆಡಿಸಿತೇ....

Comments