ಬೆಕ್ಕಿನ ಮರಿಗಳ ಅಳಲು
ಕವನ
ಎಲ್ಲಿ ಹೋದಳೋ ಅಮ್ಮ ನಮ್ಮನು
ಇಲ್ಲಿ ಬಿಡುತಲಿ ಮೆಲ್ಲಗೆ
ಗುರುತು ಇಲ್ಲದ ತಾವು ನಮಗದೋ
ಯಾರೋ ಬರುತಿಹರಿಲ್ಲಿಗೆ ! [೧]
ಮೆತ್ತನೆಯ ಹಾಸಿರುವ ಬುಟ್ಟಿಯ
ನೆತ್ತಿ ಒಯ್ವರೋ ನಮ್ಮನು?
ಎತ್ತಿ ಒಗೆವರೋ ಕೆಳಗೆ ಚಳಿಯಲಿ
ತೋರದೆಯೆ ತುಸು ದಯೆಯನು? [೨]
ನಡುಗುತಿದೆ ಮೈ,ನಿಮಿರಿ ನಿಂತಿಹ
ರೋಮ,ಎದೆಯಲಿ ಕಳವಳ
ಅರಳುಗಣ್ಣಲಿ ಭಯದ ಮಬ್ಬಿದೆ
ಹೇಳಲಾರದ ತಳಮಳ [೩]
ಹೊಟ್ಟೆ ಹಸಿಯಲು, ರಟ್ಟೆ ಮುದುರಿಸಿ
ಕುಳಿತುಕೊಂಡಿಹೆವಿಲ್ಲಿಯೇ
ಊರು ಅರಿಯದು, ಭಾಷೆ ತಿಳಿಯದು
ಬಂದು ಸಲಹೈ ತಾಯಿಯೇ [೪]
Comments
ಉ: ಬೆಕ್ಕಿನ ಮರಿಗಳ ಅಳಲು
In reply to ಉ: ಬೆಕ್ಕಿನ ಮರಿಗಳ ಅಳಲು by sada samartha
ಉ: ಬೆಕ್ಕಿನ ಮರಿಗಳ ಅಳಲು
ಉ: ಬೆಕ್ಕಿನ ಮರಿಗಳ ಅಳಲು
ಉ: ಬೆಕ್ಕಿನ ಮರಿಗಳ ಅಳಲು
ಉ: ಬೆಕ್ಕಿನ ಮರಿಗಳ ಅಳಲು