ಮಳಲ ಕೊಡದಾಶ್ವಾಸ

ಮಳಲ ಕೊಡದಾಶ್ವಾಸ

ಕವನ

 

ಮಲೆನಾಡ ಬಯಲಿನಲಿ ವನಮಹೋತ್ಸವಕೆಂದು
ಕಲೆತಿಹರು ಬಹುಜನರು ಭಾಷಣಕೆ ಇಂದು
ಬಟ್ಟ ಬಯಲಿನ ದೊಡ್ಡ ವೇದಿಕೆಯ ಮೇಲ್ನಿಂದು
ದಟ್ಟ ಕಾಡನು ಬೆಳಸಿ ನಾಡುಳಿಸಿರೆಂದು.
ವನದೇವಿ ಮಡಿಲೊಡ್ಡಿ ಬೇಡುತಿಹಳೆಮ್ಮನ್ನು
ಕನಸಲ್ಲು ಕಾಡುವಳು ಕಣ್ಣೇರಕರೆದು
ಧನಕಾಗಿ ತಾಯ ಬಲಿಕೊಟ್ಟಿರಲ್ಲಯ್ಯಯ್ಯೊ
ತನುಬಳಲಿ ಮನಸೋತು ಮೂಕಳಾದೆ
ಪಚ್ಚೆಯಂ ಕಣ್ಗೆ ಸಮೃದ್ಧಿಯಂ ಜೀವನಕೆ
ಹೊಚ್ಚ ಹೊಸ ಪುಷ್ಪಗಳ ಮುಡಿಗೆ ನಾನಿತ್ತೆ
ಮಚ್ಚರದ ಸೋಂಕಿಲ್ಲ ಮಮತೆಯಿಂ ಸುಖವೀವೆ
ತುಚ್ಛವಹ ಮಚ್ಚಿನಿಂದಾದರೂ ಕೊಚ್ಚಿದಿರಿ
"ಕಾಡಬೆಳೆಸಿರಿ ನೀವು ನಾಡುಳಿಸಿರೆಂದು"
ನೇತಾಡುತಿಹ ಫಲಕಗಳ ನೋಡಿ ನಾ ನಗುವೆ
ಆಡ ಬಲಿಗೊಡುವಂತೆ ಕಾಡ ಬಲಿಗೊಟ್ಟು
ಕಾಪಾಡ ಹೊರಟಿಹಿರೀಗ ಸಾಧ್ಯವೇ ನಿಮಗೆ
ಅಳುವ ದೇವಿಯ ನಗಿಸಲೆಂಬಂತೆ ನಾನೆಂದೆ
ಅಳಲೇಕೆ ನಿನ್ನ ಕಂದಮ್ಮ ನಾನಿರುವೆ
ನೆಳಲನೀಡುವ ನಿನ್ನ ರಕ್ಷಿಸುವೆನೆಂದಾಗ
ಮಳಲ ಕೊಡದಾಶ್ವಾಸ ಎಂದಳಾಕೆ
ಝೊಂಪು ಹರಿಯಿತು ಕನಸ ಮಂಪರದು ಓಡಿತದು
ತಂಪಾದ ದೃಶ್ಯವದು ಕನಸಲ್ಲೆ ಹೋಯ್ತು
ಇಂಪಾದ ಬೇಡಿಕೆಯು ಕೊಂಪೆಯಾಶ್ವಾಸನೆಯು
ಕಂಪನದ ಸುಳಿಯಲ್ಲಿ ಸಿಲುಕಿ ಹೋಯಿತದು

 

ಮಲೆನಾಡ ಬಯಲಿನಲಿ ವನಮಹೋತ್ಸವಕೆಂದು

ಕಲೆತಿಹರು ಬಹುಜನರು ಭಾಷಣಕೆ ಇಂದು

ಬಟ್ಟ ಬಯಲಿನ ದೊಡ್ಡ ವೇದಿಕೆಯ ಮೇಲ್ನಿಂದು

ದಟ್ಟ ಕಾಡನು ಬೆಳಸಿ ನಾಡುಳಿಸಿರೆಂದು.


ವನದೇವಿ ಮಡಿಲೊಡ್ಡಿ ಬೇಡುತಿಹಳೆಮ್ಮನ್ನು

ಕನಸಲ್ಲು ಕಾಡುವಳು ಕಣ್ಣೇರಕರೆದು

ಧನಕಾಗಿ ತಾಯ ಬಲಿಕೊಟ್ಟಿರಲ್ಲಯ್ಯಯ್ಯೊ

ತನುಬಳಲಿ ಮನಸೋತು ಮೂಕಳಾದೆ


ಪಚ್ಚೆಯಂ ಕಣ್ಗೆ ಸಮೃದ್ಧಿಯಂ ಜೀವನಕೆ

ಹೊಚ್ಚ ಹೊಸ ಪುಷ್ಪಗಳ ಮುಡಿಗೆ ನಾನಿತ್ತೆ

ಮಚ್ಚರದ ಸೋಂಕಿಲ್ಲ ಮಮತೆಯಿಂ ಸುಖವೀವೆ

ತುಚ್ಛವಹ ಮಚ್ಚಿನಿಂದಾದರೂ ಕೊಚ್ಚಿದಿರಿ


"ಕಾಡಬೆಳೆಸಿರಿ ನೀವು ನಾಡುಳಿಸಿರೆಂದು"

ನೇತಾಡುತಿಹ ಫಲಕಗಳ ನೋಡಿ ನಾ ನಗುವೆ

ಆಡ ಬಲಿಗೊಡುವಂತೆ ಕಾಡ ಬಲಿಗೊಟ್ಟು

ಕಾಪಾಡ ಹೊರಟಿಹಿರೀಗ ಸಾಧ್ಯವೇ ನಿಮಗೆ


ಅಳುವ ದೇವಿಯ ನಗಿಸಲೆಂಬಂತೆ ನಾನೆಂದೆ

ಅಳಲೇಕೆ ನಿನ್ನ ಕಂದಮ್ಮ ನಾನಿರುವೆ

ನೆಳಲನೀಡುವ ನಿನ್ನ ರಕ್ಷಿಸುವೆನೆಂದಾಗ

ಮಳಲ ಕೊಡದಾಶ್ವಾಸ ಎಂದಳಾಕೆ


ಝೊಂಪು ಹರಿಯಿತು ಕನಸ ಮಂಪರದು ಓಡಿತದು

ತಂಪಾದ ದೃಶ್ಯವದು ಕನಸಲ್ಲೆ ಹೋಯ್ತು

ಇಂಪಾದ ಬೇಡಿಕೆಯು ಕೊಂಪೆಯಾಶ್ವಾಸನೆಯು

ಕಂಪನದ ಸುಳಿಯಲ್ಲಿ ಸಿಲುಕಿ ಹೋಯಿತದು

Comments