ಪ್ರೀತಿಯ ಗಾಯನ
ಕವನ
ನೆನಪಿನ ಅಲೆಗಳು ಹ್ರದಯದ
ತೀರಕೆ ಅಪ್ಪಳಿಸಿ
ಬಿರುಕು ಬಿಡುವ ಭಾವಗಳ
ಬಂಡೆಯ ಮೌನಾಗಿಸಿ
ಮುಸ್ಸಂಜೆ ಸೂರ್ಯಾಸ್ತದಲಿ
ಪ್ರೇಮಿಗಳು ಮಿಲನದಲಿ
ಕೆಂಪು ಕಾಣುವ ಸೂರ್ಯ ಬಣ್ಣ
ತಂಪು ತುಟಿಗೆ ಬಣ್ಣಿಸಿ
ಮಧುರ ಕ್ಷಣದ ಮರಳಿನಲಿ
ತನು ಮನವ ಒಂದಾಗಿಸಿ
ಮಂದ ಭಾವದಿ ತದಿಗೆ ಬಂದು
ಪ್ರೀತಿ ಪಲ್ಲವಿ ಹಬ್ಬಿಸಿ
ಸಣ್ಣ ತೆರೆಗಳ ಶಬ್ದಕೆ ನಾಚಿದ
ಮನ ಝುಮ್ಮೆನ್ನಿಸಿ
ಮೆಲ್ಲ ಹನಿಯ ಸ್ಪರ್ಶದಲಿ
ಎರಡು ಮನಗಳು ಮುಳುಗಿಸಿ
ಚಂದ್ರ ಬಿಂಬದಿ ರವಿಯು ಮೂಡಿ
ಅವನಲ್ಲಿ ಅವಳ ನೆರಳಾಗಿಸಿ
ಉಪ್ಪು ನೀರಲಿ ನೆನೆದ ಹಾಗೆ
ಪ್ರೀತಿ ನೆನಪಲಿ ತೇಲಾಡಿಸಿ
ಬೀದಿಗೆ ಮರೆತು ಸ್ವರ್ಗ ಕಾಣಿದ
ಪ್ರೇಮಿಗಳ ಪ್ರೀತಿ ಅಮರವಾಗಲಿ
Comments
ಉ: ಪ್ರೀತಿಯ ಗಾಯಣ
In reply to ಉ: ಪ್ರೀತಿಯ ಗಾಯಣ by Jayanth Ramachar
ಉ: ಪ್ರೀತಿಯ ಗಾಯಣ