ಪ್ರೀತಿ
ಬರಹ
ಮೌನ ಹೆಸರಲ್ಲಿ ಮನವನ್ನು ಕೊಂದೆ
ಕಾಡುವ ನೆಪದಲ್ಲಿ ಕನಸನು ಕೊಂದೆ
ಪ್ರೀತಿಯ ಹೆಸರಲ್ಲಿ ಪ್ರಾಣವ ಹಿಂಡಿದೆ
ಹರೆಯದ ಮನದಲ್ಲಿ ಉಕ್ಕಿದೆ ಪ್ರೀತಿ
ಸಾವಿಗೂ ಅಂಜದು ಸೆಳೆಯುವ ರೀತಿ
ಮನಸ್ಸಿಗೆ ಇಲ್ಲ ನಾಳೆಯ ಚಿಂತೆ
ಬೆಡದ ಜೀವನ ಬೇಕಿದೆ ಎಂದೆ
ಒಲ್ಲದ ಮನಸ್ಸಲಿ ಒಪ್ಪಿದೆ ಎಂದೆ
ನೊಡುವ ನೋಟ ನಾಟಕ ಎಂದೆ
ಮನಸ್ಸಿನ ನೋವು ಕಣ್ಣಿಗೆ ಗೊತ್ತು
ಸೆಳೆಯುವ ಕಣ್ಣು ಕಾಣದೆ ಹೋಯ್ತು
ತನ್ನಯ ಕಾಯುವ ರೆಪ್ಪೆಯ ನಂಟು
ಮರೆಯನ್ನು ಎಂದು ನಿನ್ನಯ ಪ್ರೀತಿಯ
ಕಂಡುಕೊಂಡೆ ನಿನ್ನಲ್ಲಿ ನನ್ನಯ
ಸುರಿವೆಯ ಮಾತಿನ ಮಳೆ ಹನಿಯ
ನೋಟಕೆ ಸಿಲುಕದೆ ನಾಟಕವಾಡುವೆ.
ಪದಕೆ ಸಿಲುಕದೆ ಕವನವೆ ಆಗುವೆ
ನಿನ್ನ ಅರಿವಾಗುವುದರಲ್ಲಿ ಪ್ರೀತಿಯೆ ನಿನಾಗುವೆ...............?